ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಎಚ್ಚರ.. ಲಾಕ್ ಡೌನ್ ಉಲ್ಲಂಘಿಸಿದರೆ 2 ವರ್ಷ ಜೈಲು ಗ್ಯಾರಂಟಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 23: ಕೊರೊನಾ ವೈರಸ್ ಸೋಂಕು ಹರುಡುವುದನ್ನು ತಡೆಗಟ್ಟಲು ಮೈಸೂರು ಜಿಲ್ಲಾ ಪೊಲೀಸ್ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ರಿಷ್ಯಂತ್, 10 ದಿನ ಮೈಸೂರು ಲಾಕ್ ಡೌನ್ ಮಾಡಲಾಗಿದ್ದು, ಸೋಂಕು ಹರಡುವವರು ಮತ್ತು ಅನಗತ್ಯವಾಗಿ ಓಡಾಡುವರ ಮೇಲೆ ಕೇಸ್ ಹಾಕಲಾಗುವುದು ಎಂದರು.

ಮೈಸೂರಿನಲ್ಲಿ ಮತ್ತೊಂದು ಕೊರೊನಾ ಪ್ರಕರಣ; ಕಟ್ಟೆಚ್ಚರಕ್ಕೆ ಸೂಚನೆಮೈಸೂರಿನಲ್ಲಿ ಮತ್ತೊಂದು ಕೊರೊನಾ ಪ್ರಕರಣ; ಕಟ್ಟೆಚ್ಚರಕ್ಕೆ ಸೂಚನೆ

ರಾಜ್ಯ ಸರ್ಕಾರ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿತ್ತು. ಆದರೆ ಜನರು ಬೇಜವಾಬ್ದಾರಿಯಿಂದ ಓಡಾಡುತ್ತಿರುವುದರಿಂದ ಮೈಸೂರು ಜಿಲ್ಲಾ ಪೊಲೀಸ್ ಗಂಭೀರವಾಗಿ ಪರಿಗಣಿಸಿದೆ. ಈ ಲಾಕ್‌ ಡೌನ್ ನ್ನು ಮಾಡಿರೋದು ಜನತೆಯ ಆರೋಗ್ಯ ಕಾಪಾಡಲೆಂದೇ ಹೊರತು ಬೇರೆ ಕಾರಣದಿಂದಲ್ಲ, ಜನರು ಸರ್ಕಾರದ ಅದೇಶವನ್ನು ಉಲ್ಲಂಘಿಸಿದರೆ ಪೊಲೀಸರು ಮತ್ತಷ್ಟು ಕಠಿಣವಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

2 Year Imprison guarantee If Lock Down Violation- Mysuru SP

ಅನಗತ್ಯವಾಗಿ ಓಡಾಡುವವರು ಮತ್ತು ಗುಂಪು ಗುಂಪಾಗಿ ತಿರುಗಾಡುವ ಜನರ ಮೇಲೆ ಐಪಿಸಿ ಸೆಕ್ಷನ್ 269, 270 ರ ಅಡಿಯಲ್ಲಿ ಮೊಕದ್ದಮೆ ಹೂಡಲಾಗುವುದು, ಕೇಸ್ ಹಾಕಿದರೆ 2 ವರ್ಷ ಜೈಲು ಶಿಕ್ಷೆ ಗ್ಯಾರಂಟಿ ಎಂದರು.

ಮೈಸೂರು ನಗರ ಸಂಪೂರ್ಣ ಲಾಕ್ ಡೌನ್ ಆಗಿದ್ದರೂ ಜನರು ಆದೇಶ ಪಾಲಿಸುತ್ತಿಲ್ಲ. ಹತ್ತು ಜನರ ಮೇಲೆ ಕೇಸ್ ಹಾಕಿದರೆ ಗೊತ್ತಾಗುತ್ತೆ. ಇಲ್ಲಿಯವರೆಗೂ ಮೌಖಿಕವಾಗಿ ಹೇಳಿದ್ದಾಯಿತು. ಇನ್ನು ಮುಂದೆ ಕೇಸ್ ಹಾಕಲಾಗುವುದು ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದರು.

ಮೈಸೂರು ಸಂಪೂರ್ಣ ಲಾಕ್‌ ಔಟ್‌; ಏನಿದೆ, ಏನೇನಿಲ್ಲ?ಮೈಸೂರು ಸಂಪೂರ್ಣ ಲಾಕ್‌ ಔಟ್‌; ಏನಿದೆ, ಏನೇನಿಲ್ಲ?

ಮನೆಯಲ್ಲಿರುವಂತೆ ಸರ್ಕಾರ ಹೇಳಿದ್ದರೂ, ಮನವಿಗೆ ಜನರು ಸ್ಪಂದಿಸದ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ತಿರುಗಾಡಿದರೆ ಕೇಸ್ ಹಾಕುವುದಾಗಿ ಹೇಳಿದರು.

ಮಳಿಗೆ ತೆರೆಯುವಂತಿಲ್ಲ, ಗುಂಪು ಸೇರುವಂತಿಲ್ಲ, ಕೆಲವರು ಎಷ್ಟೇ ಹೇಳಿದರು ಕೇಳುತ್ತಿಲ್ಲ, ಹೀಗೆ ಮುಂದುವರೆದರೆ ಒಂದತ್ತು ಜನಕ್ಕೆ ಕೇಸ್ ಹಾಕುವುದಂತು ಪಕ್ಕಾ ಎಂದು ಪುಂಡ ಯುವಕರಿಗೆ, ಅನವಶ್ಯಕವಾಗಿ ತಿರುಗುವ ಜನರಿಗೆ ಮೈಸೂರು ಜಿಲ್ಲಾ ಎಸ್ಪಿ ರಿಷ್ಯಂತ್ ಖಡಕ್ ವಾರ್ನಿಂಗ್ ಕೊಟ್ಟರು.

English summary
Mysuru SP CB Rishyant has warned that the Mysuru District Police will take strong action to prevent coronavirus infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X