ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಳ ದಸರಾ; ಮೃಗಾಲಯದ ಆದಾಯ ಭಾರಿ ಕುಸಿತ!

|
Google Oneindia Kannada News

ಮೈಸೂರು, ಅಕ್ಟೋಬರ್ 30 : ಕೋವಿಡ್ ಕಾರಣದಿಂದಾಗಿ ಈ ಬಾರಿಯ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿ ನಗರಕ್ಕೆ ಭೇಟಿ ನೀಡಿದರು. ಇದರಿಂದಾಗಿ ಮೃಗಾಲಯದ ಆದಾಯವೂ ಕುಸಿತವಾಗಿದೆ.

ದಸರಾ ಸಮಯದಲ್ಲಿ ಮೈಸೂರಿನಲ್ಲಿ ಜನಜಂಗುಳಿ ಕಂಡು ಬರುತ್ತಿತ್ತು. ಆದರೆ, ಈ ಬಾರಿ ದಸರಾ ಸಮಯದಲ್ಲಿ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದು 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಮಾತ್ರ.

ಮೈಸೂರು ದಸರಾ: ಅಭಿಮನ್ಯು ಸಾರಥ್ಯದ ಗಜಪಡೆಗೆ ಆತ್ಮೀಯ ಬೀಳ್ಕೊಡುಗೆಮೈಸೂರು ದಸರಾ: ಅಭಿಮನ್ಯು ಸಾರಥ್ಯದ ಗಜಪಡೆಗೆ ಆತ್ಮೀಯ ಬೀಳ್ಕೊಡುಗೆ

10 ದಿನಗಳ ಅವಧಿಯಲ್ಲಿ 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಮೃಗಾಲಯಕ್ಕೆ ಆಗಮಿಸಿದ್ದು, 19.56 ಲಕ್ಷ ಆದಾಯ ಬಂದಿದೆ. ಕಳೆದ ಬಾರಿಯ ದಸರಾ ಸಂದರ್ಭಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ.

ದಸರಾ ಖರೀದಿ; ಮಾಸ್ಕ್ ಧರಿಸದೇ 6 ಲಕ್ಷ ದಂಡ ಕಟ್ಟಿದ ಜನರು ದಸರಾ ಖರೀದಿ; ಮಾಸ್ಕ್ ಧರಿಸದೇ 6 ಲಕ್ಷ ದಂಡ ಕಟ್ಟಿದ ಜನರು

19 Lakh Revenue For Mysuru Zoo During Dasara Time

ಮೃಗಾಲಯಕ್ಕೆ 2017ರಲ್ಲಿ 1.23 ಲಕ್ಷ, 2018ರಲ್ಲಿ 1.53 ಲಕ್ಷ ಮತ್ತು 2019ರಲ್ಲಿ 1.65 ಲಕ್ಷ ಜನರು ಭೇಟಿ ನೀಡಿದ್ದರು. ಮೃಗಾಲಯ ಮಾತ್ರವಲ್ಲ ಅರಮನೆಗೆ ಸಹ ಭೇಟಿ ನೀಡಿದ ಜನರ ಸಂಖ್ಯೆ ಕಡಿಮೆ ಇದೆ. ಖಾಸಗಿ ದರ್ಬಾರ್ ವೀಕ್ಷಣೆಗೆ ಈ ಬಾರಿ ಅವಕಾಶವನ್ನು ನೀಡಿರಲಿಲ್ಲ.

ದಸರಾ ಉತ್ಸವ ಯಶಸ್ವಿ: ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ ದಸರಾ ಉತ್ಸವ ಯಶಸ್ವಿ: ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

ಅರಮನೆಗೆ ಭೇಟಿ : ಅಕ್ಟೋಬರ್ 17ರಿಂದ 25ರ ತನಕ ಮೈಸೂರು ಅರಮನೆಗೆ 9,516 ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಕ್ಟೋಬರ್ 27ರಂದು 2,758 ಜನ, ಅ. 28ರಂದು 2606 ಜನರು ಭೇಟಿ ಕೊಟ್ಟಿದ್ದಾರೆ.

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಜಂಬೂ ಸವಾರಿ ಸಹ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ನೋಡಲು ಈ ಬಾರಿ ಜನರಿಗೆ ಅವಕಾಶವನ್ನು ನೀಡಿರಲಿಲ್ಲ.

English summary
More than 20 thousand people visited Sri Chamarajendra Zoological Gardens popularly known as Mysore Zoo in the time of Dasara. 19.56 lakh money collected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X