ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು SSLC ಪರೀಕ್ಷೆಗೆ ಗೈರು

|
Google Oneindia Kannada News

ಮೈಸೂರು, ಜೂನ್ 26: ಕೊರೊನಾ ವೈರಸ್‌ ಭೀತಿಯ ನಡುವೆಯೇ ನಿನ್ನೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿದೆ. ಆದರೆ, ಮೈಸೂರಿನಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.

Recommended Video

Indo China Border : America to send it's army to China border | Oneindia Kannada

ಮೈಸೂರಿನ 139 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಒಟ್ಟು 37,738 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಈ ಪೈಕಿ 35,935 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಉಳಿದ 1,803 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡರೂ, ಪರೀಕ್ಷೆಯ ದಿನ ಹಾಜರಾಗಿಲ್ಲ.

ಶಿರಸಿಯ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್‌ ಬಿಟ್ಟ ಸಾರಿಗೆ ಇಲಾಖೆಶಿರಸಿಯ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್‌ ಬಿಟ್ಟ ಸಾರಿಗೆ ಇಲಾಖೆ

ಪರೀಕ್ಷೆ ಗೈರಾದವರ ಕಾರಣ ಏನು ಅಂತ ನೋಡಿದರೆ, ಇದರಲ್ಲಿ ಅನೇಕ ವಿದ್ಯಾರ್ಥಿಗಳು ಹಾಜರಾತಿ ತೊಂದರೆ ಹೊಂದಿದ್ದಾರೆ. ಹಾಜರಾತಿ ಕಡಿಮೆ ಇದ್ದ ಹಾಗೂ ಹಾಲ್‌ ಟಿಕೆಟ್‌ ಸಿಗದ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಬರದ ಕಾರಣವಾಗಿದೆ.

1803 Students Not Attended The First Day Of SSLC Exam

ಇನ್ನು ಪರೀಕ್ಷೆಗೆ ಕಂಟೈನ್ಮೆಂಟ್‌ ವಲಯದಿಂದ ಬಂದ 40 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದೆ. ಎಲ್ಲ ರೀತಿಯ ಸುರಕ್ಷತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದ 4 ವಿದ್ಯಾರ್ಥಿಗಳಿಗೆ ಸಹ ಬೇರೆ ಕೊಠಡಿಯಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಮಾಸ್ಕ್‌ ಧರಿಸುವುದು ಕಡ್ಡಾಯವಾಗಿತ್ತು.

ಮೊದಲ ದಿನ ದ್ವಿತೀಯ ಭಾಷೆ ಕನ್ನಡ, ಇಂಗ್ಲೀಷ್ ಭಾಷೆಯ ಪರೀಕ್ಷೆ ನಡೆದಿದೆ. ಪರೀಕ್ಷೆಯ ವೇಳೆ ಕಾಪಿ ಹೊಡೆದ ಪ್ರಕರಣಗಳು, ನಕಲಿ ಮಾಡಿದ ಪ್ರಕರಣಗಳು ಜಿಲ್ಲೆಯ ಯಾವ ಭಾಗದಲ್ಲಿಯೂ ನಡೆದಿಲ್ಲ ಎಂದು ಡಿಡಿಪಿಐ ಪಾಂಡುರಂಗ ಹೇಳಿದ್ದಾರೆ.

English summary
SSLC exam karnataka 2020: 1803 Mysore students are not attend the first day of SSLC exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X