ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ತಂಗಿದ್ದ ಜರ್ಮನ್ನರು ದೇಶಕ್ಕೆ ವಾಪಸ್...

By ಮೈಸೂರು ಸುದ್ದಿ
|
Google Oneindia Kannada News

ಮೈಸೂರು, ಮಾರ್ಚ್ 27: ನಗರದಲ್ಲಿ ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ತಂಗಿದ್ದ ಜರ್ಮನ್ ಪ್ರಜೆಗಳನ್ನು ವಾಪಸ್ ಕಳುಹಿಸಲಾಗುತ್ತಿದೆ.

ಯೋಗ ಕಲಿಕೆ ಸೇರಿದಂತೆ ಹಲವು ಕಾರಣಗಳಿಗೆ ಮೈಸೂರಿನಲ್ಲಿ ಹದಿನೆಂಟು ಮಂದಿ ಜರ್ಮನ್ ಪ್ರಜೆಗಳು ನೆಲೆಸಿದ್ದರು. ಇದೀಗ ಜರ್ಮನ್ ದೇಶದ ರಾಯಭಾರ ಕಚೇರಿಯಿಂದ ಮನವಿ ಬಂದ ಮೇರೆಗೆ ಇವರನ್ನು ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.

 ಕೊರೊನಾದಿಂದ ನಂಜನಗೂಡು ಕೈಗಾರಿಕಾ ಪ್ರದೇಶ ಈಗ ರೆಡ್ ಝೋನ್ ಕೊರೊನಾದಿಂದ ನಂಜನಗೂಡು ಕೈಗಾರಿಕಾ ಪ್ರದೇಶ ಈಗ ರೆಡ್ ಝೋನ್

ಕೇಂದ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಜರ್ಮನಿ ಸರ್ಕಾರ ಮನವಿ ಮಾಡಿಕೊಂಡಿದ್ದು, ಅವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಜರ್ಮನ್ ಪ್ರಜೆಗಳ ಆರೋಗ್ಯ ತಪಾಸಣೆ ನಡೆಯುತ್ತಿದ್ದು, ಪ್ರಯಾಣ ಮಾಡಲು ಯೋಗ್ಯ ಇರುವವರು ಮಾತ್ರ ವಿದೇಶಕ್ಕೆ ವಾಪಸ್ ಹೋಗಲಿದ್ದಾರೆ.

18 Germans Who Were In Mysuru Leaving To Their Country

ಆರೋಗ್ಯ ತಪಾಸಣೆ ನಂತರ ಪ್ರವಾಸೋದ್ಯಮ ಇಲಾಖೆ ವಿಶೇಷ ಬಸ್ ನಲ್ಲಿ ಇವರನ್ನು ಬೆಂಗಳೂರಿಗೆ ಕಳುಹಿಸಿಕೊಡಲಿದೆ. ನಾಳೆ ವಿಶೇಷ ವಿಮಾನದ ಮೂಲಕ ಜರ್ಮನ್‌ಗೆ ತೆರಳಲಿದ್ದಾರೆ.

English summary
18 germans who came to mysuru for different purposes leaving to their country, They are under medical test in mysuru kalamandira,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X