ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ನಿಯಮ ಉಲ್ಲಂಘನೆ; ಮೈಸೂರಿನಲ್ಲಿ 6 ವರ್ಷದಲ್ಲಿ 18 ಕೋಟಿ ದಂಡ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 17: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಪಾಠ ಕಲಿಸಲು ಹೊಸ ತಂತ್ರಜ್ಞಾನದ ಬಳಕೆಗೆ ಮುಂದಾಗಿರುವ ಮೈಸೂರು ಸಂಚಾರಿ ಪೊಲೀಸರು ಕಳೆದ ಆರು ವರ್ಷದಲ್ಲಿ ಬರೋಬ್ಬರಿ 18 ಕೋಟಿ ದಂಡ ವಸೂಲಿ ಮಾಡಿದ್ದಾರೆ.

ಸಂಚಾರಿ ನಿಯಮ ಪಾಲಿಸಿ ಎಂದು ಪೊಲೀಸರು ಸಂಚಾರಿ ಪಾಠ ಮಾಡುತ್ತಿದ್ದಾರೆ. ಆದರೆ ವಾಹನ ಸವಾರರು ನಿಯಮ ಉಲ್ಲಂಘನೆ ಮಾಡುವುದನ್ನು ಮುಂದುವರೆಸಿದ್ದಾರೆ. ಹೇಗೋ ಪೊಲೀಸರ ಕಣ್ತಪ್ಪಿಸಿಕೊಂಡು ಹೋಗುತ್ತಿದ್ದ ಸವಾರರಿಗೆ ಬುದ್ಧಿ ಕಲಿಸಲು ಪೊಲೀಸರೂ ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ಹೀಗಾಗಿ ನಿಯಮ ಉಲ್ಲಂಘಿಸಿದವರು ದಂಡ ಪಾವತಿಸಿದೆ ತಪ್ಪಿಸಿಕೊಳ್ಳುವ ಮಾತೇ ಇಲ್ಲ.

ಭಾರೀ ದಂಡದ ಭಯ: ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಇಳಿಕೆ ಆಯ್ತಾ?ಭಾರೀ ದಂಡದ ಭಯ: ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಇಳಿಕೆ ಆಯ್ತಾ?

ಸಂಚಾರಿ ನಿಯಮ‌ ಉಲ್ಲಂಘನೆ‌ ಮಾಡಿದವರಿಗೆ ಪೊಲೀಸರು ರಸ್ತೆಯಲ್ಲಿ ನಿಂತು ದಂಡ ಹಾಕುತ್ತಿದ್ದರು. ಆದರೆ ಕೆಲವು ಕಿಲಾಡಿ ವಾಹನ ಸವಾರರು ತಪ್ಪಿಸಿಕೊಂಡು ಹೋಗುತ್ತಿದ್ದರು. ಇದನ್ನರಿತ ಮೈಸೂರು ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿ ಟ್ರಾಫಿಕ್ ಸಿಗ್ನಲ್ ಗಳಲ್ಲಿರುವ ಸಿ.ಸಿ. ಕ್ಯಾಮರಾ ಬಳಸಿ‌ ನಿಯಮ ಉಲ್ಲಂಘನೆ ಮಾಡಿದವರ ಗುರುತು ಪತ್ತೆ ಹಚ್ಚಿ ದಂಡ ಹಾಕುವ ಕೆಲಸ ಮಾಡಿದರು. ಮನೆಗೆ ದಂಡದ ನೋಟಿಸ್ ಹೋಗುತ್ತಿತ್ತು.

18 Crore Fine Collected For Traffic Violation Since 6 Years In Mysuru

ಇಷ್ಟೆಲ್ಲಾ ಮಾಡಿದರೂ ಸವಾರರು ಮಾತ್ರ ದಂಡ ಕಟ್ಟುತ್ತಿರಲಿಲ್ಲ. ಇದರಿಂದ ಪೊಲೀಸರು ವಾಹನ ಇರುವ ಜಾಗಕ್ಕೆ ಬಂದು ದಂಡ ಕಟ್ಟಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿ ಎಲ್ಲಿ ವಾಹನ ನಿಲ್ಲಿಸಿದರೂ ಆ ವಾಹನದ ಮೇಲೆ ದಂಡ ಇದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದಾರೆ. ಒಂದು ವೇಳೆ ದಂಡ ಇದ್ದರೆ, ಆ ವಾಹನವನ್ನು ಲಾಕ್ ಮಾಡಿ ವಾಹನದ ಮೇಲೆ ಪೊಲೀಸರ ಫೋನ್ ನಂಬರ್ ಸ್ಟಿಕರ್ ಅಂಟಿಸಿ ಹೋಗುತ್ತಾರೆ. ದಂಡ ಕಟ್ಟಲೇಬೇಕಾದ ಪರಿಸ್ಥಿತಿ ಸವಾರರದ್ದು.

ಸಂಚಾರ ನಿಯಮ ಉಲ್ಲಂಘನೆ; ವಾಹನ ಸವಾರರಿಗೆ ಕೇಂದ್ರದ ಅಘಾತಸಂಚಾರ ನಿಯಮ ಉಲ್ಲಂಘನೆ; ವಾಹನ ಸವಾರರಿಗೆ ಕೇಂದ್ರದ ಅಘಾತ

ಕಳೆದ ಆರು ವರ್ಷದಲ್ಲಿ ಮೈಸೂರಿನಲ್ಲಿ ಬರೋಬ್ಬರಿ 18 ಕೋಟಿ ದಂಡ ವಸೂಲಿ ಮಾಡಿದ್ದಾರೆ ಪೊಲೀಸರು. 2019ರಲ್ಲಿ 8.80 ಲಕ್ಷ ನಿಯಮ‌ ಉಲ್ಲಂಘನೆ‌ ಪ್ರಕರಣ ದಾಖಲಾಗಿದ್ದರೆ, ಕಳೆದ 6 ವರ್ಷದಲ್ಲಿ 62 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

English summary
Rs 18 crore fine collected for traffic violation over the past six years by Mysuru traffic police,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X