ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5 ವರ್ಷದ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಸಮಾರಂಭ

|
Google Oneindia Kannada News

ಮೈಸೂರು, ಮಾರ್ಚ್ 5: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಇಂದು 16ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆಯಿತು.

ಸಮಾರಂಭದಲ್ಲಿ 17, 512 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿಗಳೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪದವಿ ಪ್ರದಾನ ಮಾಡಿದರು.

ಹುತಾತ್ಮ ಯೋಧ ಗುರು ಪತ್ನಿಗೆ ಕೆಎಸ್‌ಓಯುನಿಂದ ಉಚಿತ ಶಿಕ್ಷಣಹುತಾತ್ಮ ಯೋಧ ಗುರು ಪತ್ನಿಗೆ ಕೆಎಸ್‌ಓಯುನಿಂದ ಉಚಿತ ಶಿಕ್ಷಣ

ಇನ್ನು ಬೆಂಗಳೂರು ನ್ಯಾಕ್ ನಿರ್ದೇಶಕ ಪ್ರೊ. ಎಸ್. ಸಿ. ಶರ್ಮಾ ಕಾರ್ಯಕ್ರಮದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು. ವಿಚಾರಶಕ್ತಿ ಮತ್ತು ಕಾರ್ಯತತ್ಪರತೆ, ಸಮಾಜಮುಖಿಯಾದ ಗುಣಗಳಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ವಾಸ್ತವವಾಗಿ ಕರ್ಮ ಸಾಧನೆ ಒಂದು ರೀತಿಯ ಯಜ್ಞ. ಸೃಷ್ಟಿ, ನಿಯತಿ ರೂಪದ ಋತುವು ಮೂಲ ಮನುಷ್ಯನೆಂದು ಹೇಳಿಕೊಳ್ಳುವ ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ. ಅವನು ತನ್ನ ಸ್ವಾರ್ಥಕ್ಕಾಗಿ ಸಂಪಾದಿಸಿದ ಹಣ ಮೊದಲ್ಗೊಂಡು ಮುಕ್ತಿಗಾಗಿ ಮಾಡುವ ತಪಸ್ಸಿನವರೆಗೆ ಎಲ್ಲವೂ ಕರ್ಮ ಯಜ್ಞವಾಗಿದೆ ಎಂದು ತಿಳಿಸಿದರು.

16thannual convention ceremony of ksou held in Mysuru

ಈ ಸಂದರ್ಭದಲ್ಲಿ ಹತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ, 7 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 8 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಸೇರಿದಂತೆ ಹಲವು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನೆರವೇರಿತು.

 ಮುಕ್ತ ವಿವಿ ಬಗ್ಗೆ ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲರು ಮುಕ್ತ ವಿವಿ ಬಗ್ಗೆ ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲರು

ಈ ಹಿಂದೆ ರಾಜ್ಯ ಮುಕ್ತ ವಿವಿ ಮಾನ್ಯತೆಯನ್ನು ಯುಜಿಸಿಯು 2013-14ನೇ ಸಾಲಿನಿಂದ ಹಿಂಪಡೆದ ಪ್ರಯುಕ್ತ ಘಟಿಕೋತ್ಸವ ಏರ್ಪಡಿಸಲು ಸಾಧ್ಯವಾಗಿರಲಿಲ್ಲ.

16thannual convention ceremony of ksou held in Mysuru

 ಕೆಎಸ್ಓಯು ನಲ್ಲಿ ಎಂಬಿಎ, ಬಿಎಡ್ ಕೋರ್ಸ್ ಗೆ ಶೀಘ್ರ ಅರ್ಜಿ ಆಹ್ವಾನ ಕೆಎಸ್ಓಯು ನಲ್ಲಿ ಎಂಬಿಎ, ಬಿಎಡ್ ಕೋರ್ಸ್ ಗೆ ಶೀಘ್ರ ಅರ್ಜಿ ಆಹ್ವಾನ

ಪ್ರಸ್ತುತ, 2012-13 ಮತ್ತು ಹಿಂದಿನ ವರ್ಷಗಳಲ್ಲಿ ಪ್ರವೇಶಾತಿ ಹೊಂದಿ ಅಂತರ್- ಗೃಹ ಕಾರ್ಯಕ್ರಮಗಳಲ್ಲಿ ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ನಿರ್ಧರಿಸಲಾಗಿತ್ತು.

English summary
16th KSOU Convocation held in Mysuru. 17,512 students received the certificates of convocation. 10 research students got Phd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X