ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: SSLC ಪರೀಕ್ಷೆ ಬರೆಯುವಾಗ ವಿದ್ಯಾರ್ಥಿನಿಗೆ ಹೃದಯಾಘಾತ, ಸಾವು

|
Google Oneindia Kannada News

ಮೈಸೂರು ಮಾರ್ಚ್ 28: SSLC ಪರೀಕ್ಷೆ ಬರೆಯುತ್ತಿದ್ದಾಗ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನಲ್ಲಿ SSLC ಪರೀಕ್ಷೆ ಬರೆಯುತ್ತಿದ್ದಾಗ 16 ವರ್ಷದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಮೃತರನ್ನು ಟಿ ನರಸೀಪುರ ತಾಲೂಕಿನ ಅಕ್ಕೂರು ನಿವಾಸಿ ಅನುಶ್ರೀ ಎಂದು ಗುರುತಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಮೈಸೂರಿನಲ್ಲಿ SSLC ವಿದ್ಯಾರ್ಥಿನಿ ಸಾವಿಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಸಂತಾಪ ಸೂಚಿಸಿದ್ದಾರೆ. 'ಮೈಸೂರು ಜಿಲ್ಲೆ ಟಿ. ನರಸೀಪುರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಅನುಶ್ರೀ(16) ಅಕಾಲಿಕವಾಗಿ ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅನುಶ್ರೀ ಪಾಲಕರು, ಸಂಬಂಧಿಕರು, ಸ್ನೇಹಿತರಿಗೆ ನನ್ನ ಸಾಂತ್ವನಗಳು. ಓಂ ಶಾಂತಿ' ಎಂದು ಟ್ವೀಟ್ ಮಾಡಿದ್ದಾರೆ.

ತಿ.ನರಸೀಪುರ ವಿದ್ಯೋದಯ ಬಾಲಕಿಯರ ಶಾಲೆಯ ಕೇಂದ್ರದಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ತಾಲೂಕಿನ ಮಾದಾಪುರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ, ತಲಕಾಡು ಹೋಬಳಿ ಅಕ್ಕೂರು ಗ್ರಾಮದವರು. ಇವರು ಮಾದಾಪುರ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಟಿ ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Mysuru : 16-year-old girl student dies due to cardiac arrest while appearing for SSLC exam

ಸೋಮವಾರ ಬೆಳಗ್ಗೆ ಕನ್ನಡ ಪರೀಕ್ಷೆಗೆ ಅನುಶ್ರೀ ಹಾಜರಾಗಿದ್ದರು. ಪರೀಕ್ಷಾ ವೀಕ್ಷಕರ ಪರಿಶೀಲನೆ ವೇಳೆ, ಅನುಶ್ರೀ ಬೇರೆ ಮತ್ತೊಂದು ಕೊಠಡಿಯಲ್ಲಿ ಪರೀಕ್ಷೆಗೆ ಹಾಜರಾಗಿರುವುದು ಕಂಡು ಬಂತು. ತಕ್ಷಣ ಶಿಕ್ಷಕರು ಆಕೆಗೆ ನೀಡಿದ್ದ ಹಾಜರಾತಿ ಸಂಖ್ಯೆಯ ಮತ್ತೊಂದು ಕಟ್ಟಡಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಅನುಶ್ರೀ ಕುಸಿತು ಬಿದ್ದಿದ್ದಾಳೆ.

ಸ್ಥಳದಲ್ಲಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ತಕ್ಷಣ ಆಕೆಯನ್ನು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಾರ್ಗಮಧ್ಯೆ ಆಕೆ ಮೃತಪಟ್ಟಿದ್ದಾಳೆ. ಲೋ ಬಿಪಿಯಿಂದ ಜೀವಾಪಾಯವಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಿಇಒ, ನರಸೀಪುರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜ್ಯಾದ್ಯಂತ ಶಾಲೆಗಳಲ್ಲಿ ಹೈಕೋರ್ಟ್ ತೀರ್ಪುನ್ನು ವಿದ್ಯಾರ್ಥಿನಿಯರು ಪಾಲಿಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ತೆಗೆದು ಪ್ರವೇಶಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರು ತಮಗೆ ಹಿಜಾಬ್ ಮುಖ್ಯವಲ್ಲ ಪರೀಕ್ಷೆ ಮುಖ್ಯ ಎಂದಿದ್ದಾರೆ. ಮೈಸೂರಿನಲ್ಲಿ ಮೂವತ್ತೆಂಟು ಸಾವಿರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯಲಿದ್ದು ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಬರೆಯುತ್ತಿದ್ದಾರೆ. ಈ ವೇಳೆ ಪೋಷಕರು ಹಿಜಾಬ್ ಮುಖ್ಯ ಅಲ್ಲ ಪರೀಕ್ಷೆ ಮುಖ್ಯ ಎಂದಿದ್ದಾರೆ. ಮಕ್ಕಳೂ ಕೂಡ ತಮಗೆ ಹಿಜಾಬ್ ಮುಖ್ಯವಲ್ಲ ಪರೀಕ್ಷೆ ಮುಖ್ಯ. ಪರೀಕ್ಷೆ ಕೊಠಡಿಯಲ್ಲಿ ಹಿಜಾಬ್ ಅನ್ನು ನಾವು ತೆಗೆಯುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಇಂದು (ಮಾರ್ಚ್ 28)8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳ ಪೈಕಿ 4,52,732 ಬಾಲಕರು ಮತ್ತು 4,21,110 ಮಂದಿ ಬಾಲಕಿಯರು ಇದ್ದಾರೆ. ಪರೀಕ್ಷೆಗೆ 15,387 ಶಾಲೆಗಳು ನೋಂದಾಯಿಸಿಕೊಂಡಿದ್ದು, 3,444 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ಸುತ್ತ 144ನೇ ಸೆಕ್ಷನ್ ಅನ್ವಯ ನಿರ್ಬಂಧ ಆದೇಶ ಜಾರಿ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ. ಪ್ರವೇಶ ಪತ್ರ ತೋರಿಸಿ ವಿದ್ಯಾರ್ಥಿಗಳು ಸಂಚರಿಸಬಹುದು.

ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಮತಿ ನೀಡಲ್ಲ ಅಂತ ಸರ್ಕಾರ ಈಗಾಗಲೇ ತಿಳಿಸಿದೆ. ಹೀಗಿದ್ದೂ, ರಾಜಾಜಿನಗರದ ಕೆಟಿಎಸ್​ವಿ ಹೈಸ್ಕೂಲ್ ಶಿಕ್ಷಕಿ ಪರೀಕ್ಷಾ ಕೊಠಡಿಗೆ ಹಿಜಾಬ್ ಧರಿಸಿ ಬಂದಿದ್ದರು. ಹೀಗೆ ಹಿಜಾಬ್ ಧರಿಸಿ ಬಂದ ಪರೀಕ್ಷಾ ಮೇಲ್ವಿಚಾರಕಿ ಫಾತಿಮಾ ಅವರನ್ನು ಅಮಾನತು ಮಾಡಲಾಗಿದೆ. ಪರೀಕ್ಷಾ ಕೆಲಸದಿಂದ ಮುಖ್ಯ ಅಧೀಕ್ಷಕರು ವಜಾಗೊಳಿಸಿದ್ದಾರೆ.

English summary
Mysore An incident where a student died of a heart attack while writing SSLC exam. A 16-year-old student has collapsed and died while writing an SSLC exam in Mysore. The deceased has been identified as Anushree, a resident of T Narasipur Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X