ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ವೈದ್ಯರ ಎಡವಟ್ಟಿನಿಂದ ಕೋಮಾ ಸ್ಥಿತಿ ತಲುಪಿದ 14 ವರ್ಷದ ಬಾಲಕ

|
Google Oneindia Kannada News

ಮೈಸೂರು, ನವೆಂಬರ್ 23: ಕಳೆದ ವಾರದ ಹಿಂದಷ್ಟೇ ಕಿವಿ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೋರ್ವ ಸದ್ಯ ಸಾವು - ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ಇದೆಂಥ ಆಸ್ಪತ್ರೆ? ಹೊಲಿಗೆ ಹಾಕೋನು ಜವಾನ, ನಿಂತು ನೋಡೋನು ವೈದ್ಯ!ಇದೆಂಥ ಆಸ್ಪತ್ರೆ? ಹೊಲಿಗೆ ಹಾಕೋನು ಜವಾನ, ನಿಂತು ನೋಡೋನು ವೈದ್ಯ!

ನಂಜನಗೂಡು ತಾಲ್ಲೂಕಿನ ಕಡುಬುರು ಗ್ರಾಮದ ಬಾಲಕ ಅಭಿ (14) ನಾಲ್ಕು ದಿನದ ಹಿಂದೆ ಕಿವಿ ನೋವು ಎಂದು ಕೆ ಆರ್ ಆಸ್ಪತ್ರೆಗೆ ದಾಖಲಾಗಿದ್ದನು. ಈ ನಡುವೆ ಕಳೆದ ರಾತ್ರಿ ವೈದ್ಯರು ಚುಚ್ಚು ಮದ್ದು ನೀಡಿದ್ದರು. ಆದರೆ ಚುಚ್ಚುಮದ್ದು ನೀಡಿದ ನಂತರ ಬಾಲಕ ಅಭಿ ಕೋಮಾ ಸ್ಥಿತಿಗೆ ತಲುಪಿದ್ದಾನೆ.

 ಬದುಕಿದ್ದ ಮಗುವನ್ನು ಸತ್ತಿದೆ ಎಂದ ಮ್ಯಾಕ್ಸ್ ಆಸ್ಪತ್ರೆ ಪರವಾನಗಿ ರದ್ದಾಗುತ್ತಾ? ಬದುಕಿದ್ದ ಮಗುವನ್ನು ಸತ್ತಿದೆ ಎಂದ ಮ್ಯಾಕ್ಸ್ ಆಸ್ಪತ್ರೆ ಪರವಾನಗಿ ರದ್ದಾಗುತ್ತಾ?

14-year-old boy has reached coma condition by doctors awkwardness

ಕಳೆದ ರಾತ್ರಿಯಷ್ಟೇ ವೈದ್ಯರು ಯಾವುದೋ ಮೆಡಿಸಿನ್ ಕೊಟ್ಟು ಈ ಸ್ಥಿತಿಗೆ ಬರುವಂತೆ ಮಾಡಿದ್ದಾರೆ ಎಂದು ಅಭಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.

English summary
14-year-old boy has reached coma condition by doctors awkwardness. This incident took place at KR Hospital in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X