ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ನಡೆಯಲಿದೆ ದಕ್ಷಿಣ ಏಷ್ಯಾಭಾಷೆಗಳ ಅಂತರಾಷ್ಟ್ರೀಯ ಸಮ್ಮೇಳನ

By Yashaswini
|
Google Oneindia Kannada News

ಮೈಸೂರು, ಜನವರಿ 6 : ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ, ದೆಹಲಿಯ ಭಾರತೀಯ ಭಾಷೆಗಳ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ದಕ್ಷಿಣ ಏಷ್ಯಾದ ಭಾಷೆಗಳು ಮತ್ತು ಸಾಹಿತ್ಯದ 13ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ನಗರದ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ಜನವರಿ 8 ರಿಂದ 10 ವರೆಗೆ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಭಾಷಾ ಸಂಸ್ಥೆ ಮೈಸೂರಿನ ನಿರ್ದೇಶಕ ಡಿ. ಜಿ ರಾವ್ ಅವರು, ಈ ಹಿಂದಿನ 12 ಸಮ್ಮೇಳನವನ್ನು ಏಷಿಯಾ ಮತ್ತು ಆಫ್ರಿಕನ್ ಅಧ್ಯಯನ ಸಂಸ್ಥೆ, ಮಾಸ್ಕೋ ರಾಜ್ಯ ವಿಶ್ವವಿದ್ಯಾಲಯ ಆಯೋಜಿಸಿತ್ತು. ಈ ಹಿಂದಿನ ಸಮ್ಮೇಳನಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ - ಕಿರಿಯ ಭಾರತೀಯ ಹಾಗೂ ವಿದೇಶೀಯ ವಿದ್ವಾಂಸರನ್ನು, ಸಂಶೋಧಕರನ್ನು ದಕ್ಷಿಣ ಏಷ್ಯಾದ ಭಾಷೆಗಳ ಸಂಸ್ಕೃತಿ - ಸಾಹಿತ್ಯಗಳ ವಿವಿಧ ಚಿಂತನೆಗಳನ್ನು ಆಕರ್ಷಿಸಿದೆ ಎಂದರು.

ದಕ್ಷಿಣ ಏಷ್ಯಾದ ಭಾಷೆಗಳ ಮತ್ತು ಸಾಹಿತ್ಯಗಳ 8 ಅಂತಾರಾಷ್ಟ್ರೀಯ ಸಮ್ಮೇಳನಗಳು ಭಾರತದ ವಿಶ್ವವಿದ್ಯಾಲಯಗಳಾದ ಪಂಜಾಬ್ ವಿವಿ, ಹೈದರಾಬಾದ್ ವಿವಿ, ಅಣ್ಣಾಮಲೈ ವಿವಿ, ಓಸ್ಮಾನಿಯಾ ವಿವಿ, ಅಲಿಗರ್ ಮುಸ್ಲಿಂ ವಿವಿ, ಬನಾರಸ್ ಹಿಂದೂ ವಿವಿ ಪುನಃ ಹೈದರಾಬಾದ್ ವಿವಿಯಲ್ಲಿ ನಡೆದಿದೆ.

13th International Meet on South Asian languages and literature from Jan 8.

ಸಮ್ಮೇಳನದಲ್ಲಿ 200 ವಿದ್ವಾಂಸರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ರಷ್ಯಾ, ಅಮೇರಿಕ, ನೇಪಾಳ, ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ, ಸಿಂಗಪೂರ್, ಇಸ್ಲಾಮಾಬಾದ್ ಮತ್ತು ದಕ್ಷಿಣ ಏಷ್ಯಾದ ವಿವಿಧ ದೇಶಗಳಿಂದ ಭಾಷಾ ಪಂಡಿತರು ಆಗಮಿಸುತ್ತಿದ್ದಾರೆ.

ಸಮ್ಮೇಳನಕ್ಕೆ ಆಗಮಿಸುವ ವಿದ್ವಾಂಸರು ದಕ್ಷಿಣ ಏಷ್ಯಾದ ಭಾಷೆಯ ಸಂಸ್ಕೃತಿಗಳ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಕೈಗೊಂಡವರಾಗಿದ್ದಾರೆ, ಮಾಸ್ಕೋ ರಾಜ್ಯ ವಿವಿಯ ಪ್ರೊ. ಬೋರಿಸ್ ಝಕಾರಿನ್ ಮತ್ತು ಲೂದ್ ಮಿಲಾ ಖೊಖ್ಲವಾ ಮತ್ತು ಪ್ರೊ. ಓಂಕಾರ್ ಎನ್ ಕೌಲ್ ಇವರು ಪ್ರಧಾನಗೋಷ್ಠಿ ನಡೆಸಿಕೊಡಲಿದ್ದಾರೆಂದು ತಿಳಿಸಿದರು

English summary
The south Asian languages and literature (CIIL), Mysuru, in collaboration with the Indian Institute of Language Studies (IILS), New Delhi, is organizing the 13th International Conference of South Asian Language and Literature ( ICOSAL 013 )in the Mysuru city from January 8 to 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X