ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಿಟನ್‌ನಿಂದ ಮೈಸೂರಿಗೆ 137 ಜನ ಆಗಮನ; ಎಲ್ಲರಿಗೂ ಕೋವಿಡ್ ಪರೀಕ್ಷೆ: ಡಿಸಿ ರೋಹಿಣಿ ಸಿಂಧೂರಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 23: ರೂಪಾಂತರಗೊಂಡ ಕೋವಿಡ್ ವೈರಸ್ ಬ್ರಿಟನ್ ದೇಶದಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಮೈಸೂರು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಬುಧವಾರ ಸಂಜೆ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಡಿಸೆಂಬರ್ 1 ರಿಂದ 20 ರವರೆಗೆ 119 ಜನರು ಹಾಗೂ ಡಿಸೆಂಬರ್ 21 ರಂದು 18 ಜನರು ಸೇರಿದಂತೆ ಒಟ್ಟು 137 ಜನರು ಬ್ರಿಟನ್‌ನಿಂದ ಮೈಸೂರಿಗೆ ಬಂದಿದ್ದಾರೆ ಎಂದು ಹೇಳಿದರು.

ಮೈಸೂರು: ಬ್ರಿಟನ್‌ನಿಂದ ಬಂದಿದ್ದವರಿಗೆ ಕೊರೊನಾ ತಪಾಸಣೆಮೈಸೂರು: ಬ್ರಿಟನ್‌ನಿಂದ ಬಂದಿದ್ದವರಿಗೆ ಕೊರೊನಾ ತಪಾಸಣೆ

ಡಿ.21ರಂದು ವಾಪಾಸ್ಸಾದ ಎಲ್ಲಾ ಬ್ರಿಟನ್ ಪ್ರಯಾಣಿಕರ ಕೋವಿಡ್-19 ಪರೀಕ್ಷೆ ಆಗಿದೆ. ಡಿ‌.20ಕ್ಕೂ ಮೊದಲು ಬಂದ ಕೆಲವರ ಪರೀಕ್ಷೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 21ರಂದು ಬಂದಿರುವ ಎಲ್ಲಾ 18 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಡಿಸೆಂಬರ್ 20ಕ್ಕೂ ಮೊದಲು ಬಂದಿರುವ ಎಲ್ಲರು ಮುನ್ನೆಚ್ಚರಿಕೆಯಾಗಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

137 Arrivals From Britain To Mysuru; Covid-19 Test For Everyone: DC Rohini Sindhuri

ಬ್ರಿಟನ್‌ನಿಂದ ವಾಪಾಸ್ಸಾದವರ ಕೋವಿಡ್ ಪರೀಕ್ಷೆಗೆ ಡಿಸೆಂಬರ್ 24 ರಂದು ಗುರುವಾರ ಮೈಸೂರಿನ ಟೌನ್‌ಹಾಲ್‌ನಲ್ಲಿ ಪ್ರತ್ಯೇಕವಾದ ಕೌಂಟರ್ ತೆರೆಯಲಾಗಿದೆ. ಬೆಳಗ್ಗೆ‌ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಕೌಂಟರ್ ತೆರೆದಿರುತ್ತದೆ. ವಾರ್ ರೂಂ ನಿಂದ ಅವರೆಲ್ಲರಿಗೂ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ರೋಗ ಲಕ್ಷಣ ಇರುವವರು ಹಾಗೂ ಈ 137 ಜನರೊಂದಿಗೆ ಪ್ರಾಥಮಿಕ ಸಂಪರ್ಕ ಇದ್ದವರೂ ಕೂಡ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

137 Arrivals From Britain To Mysuru; Covid-19 Test For Everyone: DC Rohini Sindhuri

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ನಂಜರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಮರನಾಥ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

English summary
Mysuru DC Rohini Sindhuri held a meeting of various department officials including the Health Department on Wednesday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X