ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರ್ತ್ ಡೇ ದಿನ ಬೈಕ್ ಕೊಡಿಸಲಿಲ್ಲ ಎಂದು 13 ವರ್ಷದ ಬಾಲಕ ನೇಣಿಗೆ ಶರಣು

|
Google Oneindia Kannada News

ಮೈಸೂರು, ಏಪ್ರಿಲ್ 22:ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜನತಾ ನಗರದ ಕೂಲಿ ಕಾರ್ಮಿಕ ರವಿ ಅವರ ಪುತ್ರ ಗಣೇಶ್ (13) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಗಣೇಶ್‌ ನೇಣು ಹಾಕಿಕೊಂಡಿದ್ದಾರೆ. ಗಣೇಶ್ ತನ್ನ ಜನ್ಮದಿನದಂದು ಬೈಕ್ ಕೊಡಿಸುವಂತೆ ಪೋಷಕರಿಗೆ ದುಂಬಾಲು ಬಿದ್ದಿದ್ದನು ಎನ್ನಲಾಗಿದೆ. ಆ ನಂತರ ಬೈಕ್ ಕೊಡಿಸಲಿಲ್ಲ ಎಂದು ಕೋಪ ಮಾಡಿಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಸ್ಥಾನ ಧ್ವಂಸ

ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಪರಿಣಾಮ ದೇವಸ್ಥಾನದ ಕಾಂಪೌಂಡ್ ಕುಸಿದು ಬಿದ್ದ ಘಟನೆ ಮೈಸೂರಿನ ಗಾಯತ್ರಿಪುರಂನಲ್ಲಿ ನಡೆದಿದೆ.

ಕನ್ನಡ ವಿಷಯದಲ್ಲಿ ಅನುತ್ತೀರ್ಣ: ಹೆಬ್ರಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣುಕನ್ನಡ ವಿಷಯದಲ್ಲಿ ಅನುತ್ತೀರ್ಣ: ಹೆಬ್ರಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಗಾಯತ್ರಿಪುರಂನಲ್ಲಿರುವ ಪಟ್ಟಲದಮ್ಮನ ದೇವಸ್ಥಾನದ ಬಳಿ ಮಹಾನಗರ ಪಾಲಿಕೆಗೆ ಸೇರಿದ ಅಭಯ ವಾಹನ ಚಾಲಕ ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಪರಿಣಾಮ ವಾಹನ ದೇವಸ್ಥಾನದ ಕಾಂಪೌಂಡ್ ಗೆ ಗುದ್ದಿದ್ದು, ಇದರಿಂದ ಕಾಂಪೌಂಡ್ ಮುರಿದು ಬಿದ್ದಿದೆಯಲ್ಲದೇ ಹಾನಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

13 year old boy committed suicide in Mysuru

 ಶಾಲೆಯಲ್ಲಿ ಡ್ಯಾನ್ಸ್‌ಮಾಸ್ಟರ್ ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ ಶಾಲೆಯಲ್ಲಿ ಡ್ಯಾನ್ಸ್‌ಮಾಸ್ಟರ್ ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಈ ಕುರಿತು ಎನ್.ಆರ್.ಸಂಚಾರಿ ಠಾಣೆಗೆ ದೂರು ನೀಡಲಾಗಿದೆ. ಅಷ್ಟೇ ಅಲ್ಲದೇ, ಮಹಾನಗರ ಪಾಲಿಕೆಯ ಆಯುಕ್ತರಿಗೂ ದೂರು ನೀಡಿದ್ದು, ಆಯುಕ್ತರು ಅಭಯ ವಾಹನ ಚಾಲಕನ ಮೇಲೆ ಯಾವ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ.

English summary
13 year old boy committed suicide in Mysuru.He wanted bike but his parents refused, on this reason he committed suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X