ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐತಿಹಾಸಿಕ ಮೈಸೂರಿನ ಲಲಿತ್ ಮಹಲ್ ಹೋಟೆಲ್‌ಗೆ 100ರ ಸಂಭ್ರಮ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನೆವರಿ 4: ಮೈಸೂರಿನ ಐತಿಹಾಸಿಕ ಲಲಿತ್ ಮಹಲ್ ಹೋಟೆಲ್‌ಗೆ 100 ವರ್ಷ ತುಂಬಿದ್ದು, ಬರುವ ನವೆಂಬರ್ ತಿಂಗಳಿನಲ್ಲಿ ಶತಮಾನೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್ಸ್ ಲಿಮಿಟೆಡ್ ಅಧ್ಯಕ್ಷ ಎಂ.ಅಪ್ಪಣ್ಣ ತಿಳಿಸಿದ್ದಾರೆ.

ಮೈಸೂರಿನ ಲಲಿತ ಮಹಲ್ ಪ್ಯಾಲೆಸ್ ಹೋಟಲ್‍ಗೆ ಅಧಿಕಾರಿಗಳೊಂದಿಗೆ ಅಧ್ಯಕ್ಷ ಎಂ.ಅಪ್ಪಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಲಿತ ಮಹಲ್ ಹೋಟೆಲ್ ದೇಶದ ಏರಿಟೇಜ್ ಕಟ್ಟಡಗಳಲ್ಲಿ ಒಂದಾಗಿದೆ ಎಂದರು.

ನಾಲ್ವಡಿ ಕೃಷ್ಣ ಒಡೆಯರ್ ಕಟ್ಟಿಸಿರುವ ಕಟ್ಟಡ ಬರುವ ನವೆಂಬರ್ ಗೆ 100ನೇ ವರ್ಷ ಪೂರೈಸುತ್ತದೆ. ಈ ಹಿನ್ನೆಲೆ ಶತಮಾನೋತ್ಸವ ಸಂಭ್ರಮಾಚರಣೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಂತ್ರಿಗಳನ್ನು ಆಹ್ವಾನಿಸುತ್ತೇವೆ ಎಂದು ಹೇಳಿದರು.

100th Year Celebration Of Lalit Mahal Hotel In Mysuru

51 ಎಕರೆ 15 ಗುಂಟೆ ಜಾಗದಲ್ಲಿರುವ ಲಲಿತ ಮಹಲ್ ಹೋಟೆಲ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೊಟ್ಟಿರುವ ಕೊಡುಗೆಯಾಗಿದ್ದು, ನೂರನೇ ವರ್ಷದ ಸಂಭ್ರಮದ ಹಿನ್ನೆಲೆ ಹೋಟೆಲ್ ವೀಕ್ಷಣೆ ಮಾಡಿದೆವು. 1920ರಲ್ಲಿ ಕೇವಲ 13 ಲಕ್ಷ ರೂ.ಗಳಲ್ಲಿ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.

ಆಗಿನ ಮೈಸೂರು ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜು ಅರಸು ಅವರು ಸರ್ಕಾರದ ಆಡಳಿತಕ್ಕೆ ರಾಜರಿಂದ ಹಸ್ತಾಂತರವಾಗಿದೆ. ನಮ್ಮ ಆಸ್ತಿಯನ್ನು ಯಾರೂ ಕಬಳಿಸಿಲ್ಲ, ಆದರೆ ಕೆಲವೆಡೆ ಬೇಲಿಗಳು ಕಿತ್ತುಹೋಗಿದೆ ಅದನ್ನು ಬಂದೋಬಸ್ತ್ ಮಾಡಿದ್ದೇವೆ ಅಷ್ಟೇ ಎಂದು ಎಂ.ಅಪ್ಪಣ್ಣ ಹೇಳಿದರು.

100th Year Celebration Of Lalit Mahal Hotel In Mysuru

ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್ಸ್ ಲಿಮಿಟೆಡ್‍ನ ಅಧ್ಯಕ್ಷ ಎಂ.ಅಪ್ಪಣ್ಣ ಅವರು ಇದೇ ವೇಳೆ ಮಾತನಾಡಿ, ಲಲಿತ್ ಮಹಲ್ ಹೋಟೆಲ್ ನಲ್ಲಿ ಸಾಮಾನ್ಯ ಜನರು ಬಂದು ಹೋಗಬೇಕು. ಕೂಡಲೇ ಹೋಟೆಲ್ ನಲ್ಲಿ ಸಿಗುವ ಸೌಲಭ್ಯಗಳ ಎಲ್ಲ ದರಗಳನ್ನು ಕಡಿಮೆಗೊಳಿಸುತ್ತೇವೆ ಎಂದರು.

ಲಲಿತ ಮಹಲ್ ಹೋಟೆಲ್ ಕೇವಲ ಶ್ರೀಮಂತರಿಗೆ ಮಾತ್ರ ಎನ್ನುವಂತಾಗಿದೆ, ಇದನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ಸ್ಥಳೀಯರು ಹಾಗೂ ಬಡವರು ಬರುವಂತಗಬೇಕು. ಈ ಹಿನ್ನೆಲೆ ಎರಡು ದಿನಗಳ ಬಳಿಕ ಬೋರ್ಡ್ ಮೀಟಿಂಗ್ ಮಾಡಲಿದ್ದೇವೆ. ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ ಎಂದು ಪತ್ರಿಕಾಗೋಷ್ಟಿಯಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಲಿಮಿಟೆಡ್ ನ ಅಧ್ಯಕ್ಷ ಎಂ.ಅಪ್ಪಣ್ಣ ಹೇಳಿದರು.

English summary
"The 100th anniversary of the historic Lalit Mahal Hotel in Mysuru will be celebrated in the month of November," Jungle Lodges and Resorts Limited Chairman M Appanna said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X