ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಕರ್ನಾಟಕದಲ್ಲಿ ಸಾವಿರ ವಿದ್ಯುತ್ ಚಾರ್ಜಿಂಗ್ ಸೆಂಟರ್ ಆರಂಭ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 07; "ಜೂನ್ ತಿಂಗಳಲ್ಲಿ ಇಡೀ ರಾಜ್ಯದಲ್ಲಿ ವಿದ್ಯುತ್ ಚಾರ್ಜಿಂಗ್ ಸೆಂಟರ್‌ಗಳ ಅಭಿಯಾನ ಪ್ರಾರಂಭಿಸಲಾಗುತ್ತದೆ. ಜೂನ್ 30ರೊಳಗಾಗಿ ಸಾವಿರ ವಿದ್ಯುತ್ ಚಾರ್ಜಿಂಗ್ ಸೆಂಟರ್ ಆರಂಭ ಮಾಡಲಿದ್ದೇವೆ" ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಶನಿವಾರ ಮೈಸೂರಿನ ಕಡಕೋಳದ ಕೆಇಬಿಇಎ ತರಬೇತಿ ಕೇಂದ್ರದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮತ್ತು ಅದರ ಚಾರ್ಜಿಂಗ್ ತಂತ್ರಜ್ಞಾನಗಳ ಕುರಿತು ವಿಚಾರ ಸಂಕೀರ್ಣ ಹಾಗೂ ನೂತನವಾಗಿ ನಿರ್ಮಿಸಲಾಗಿರುವ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ಸಚಿವರು ಉದ್ಘಾಟಿಸಿದರು.

ಆರ್‌ಟಿಪಿಎಸ್‌ ವಿದ್ಯುತ್ ಘಟಕಗಳಿಂದ ಮೇ 5ರಂದು 32 ಸಾವಿರ ಮಿಲಿಯನ್ ಯೂನಿಟ್‌ ಉತ್ಪಾದನೆಆರ್‌ಟಿಪಿಎಸ್‌ ವಿದ್ಯುತ್ ಘಟಕಗಳಿಂದ ಮೇ 5ರಂದು 32 ಸಾವಿರ ಮಿಲಿಯನ್ ಯೂನಿಟ್‌ ಉತ್ಪಾದನೆ

ನಂತರ ಮಾತನಾಡಿದ ಅವರು, "ವಾಯು ಮಾಲಿನ್ಯವನ್ನು ತಡೆಗಟ್ಟಲು ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗುವುದು. ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಸರ್ಕಾರದಿಂದ ಸಬ್ಸಿಡಿ ನೀಡಲಾಗುವುದು" ಎಂದರು.

ವಿದ್ಯುತ್ ಆಘಾತ ಅನುಭವಿಸುತ್ತಿರುವ ರಾಜ್ಯಗಳು ಯಾವ್ಯಾವು? ವಿದ್ಯುತ್ ಆಘಾತ ಅನುಭವಿಸುತ್ತಿರುವ ರಾಜ್ಯಗಳು ಯಾವ್ಯಾವು?

1000 Electric Vehicle Charging Station Will Set Up In State Says Sunil Kumar

"ಕೇಂದ್ರ ಸರ್ಕಾರವು ಸಹ ವಿದ್ಯುತ್ ವಾಹನಗಳ ಖರೀದಿಗೆ ಮಾತ್ರವಲ್ಲದೇ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣದ ಮೇಲೂ ಆಕರ್ಷಕ ಸಬ್ಸಡಿಗಳನ್ನು ನೀಡುತ್ತಿದೆ. ಈಗಾಗಲೇ ಹೆಚ್ಚು ಸ್ಟೇಷನ್ ನಿರ್ಮಾಣ ಮಾಡಲು ಸಭೆಗಳನ್ನು ಮಾಡಿದ್ದೇವೆ" ಎಂದು ಸಚಿವರು ಹೇಳಿದರು.

ದೋಷಯುಕ್ತ ಎಲೆಕ್ಟ್ರಿಕ್ ವಾಹನ ಉತ್ಪಾದಿಸಿದರೆ ಕಂಪನಿಗೆ 'ಭಾರೀ ದಂಡ' : ನಿತಿನ್ ಗಡ್ಕರಿ ಎಚ್ಚರಿಕೆದೋಷಯುಕ್ತ ಎಲೆಕ್ಟ್ರಿಕ್ ವಾಹನ ಉತ್ಪಾದಿಸಿದರೆ ಕಂಪನಿಗೆ 'ಭಾರೀ ದಂಡ' : ನಿತಿನ್ ಗಡ್ಕರಿ ಎಚ್ಚರಿಕೆ

"ಎಲ್ಲಾ ಜಿಲ್ಲಾ ಕೇಂದ್ರ, ರಾಷ್ಟ್ರೀಯ , ರಾಜ್ಯ ಹೆದ್ದಾರಿ, ಪ್ರವಾಸಿ ತಾಣಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಎಲೆಕ್ಟ್ರಿಕ್ ವಾಹನ ಉಪಯೋಗ ಮಾಡುವ ಕುರಿತು ಚಿಂತಿಸಲಾಗಿದೆ . ರಾಜ್ಯದ ಎಲ್ಲ ಭಾಗಗಳಲ್ಲಿ ಕೂಡ ವಿದ್ಯುತ್ ಚಾರ್ಜಿಂಗ್ ಸೆಂಟರ್‌ಗಳನ್ನು ಪ್ರಾರಂಭ ಮಾಡಬೇಕು ಎಂಬ ಪೂರ್ವ ತಯಾರಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದೇವೆ" ಎಂದು ಸಚಿವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ. ಟಿ. ದೇವೇಗೌಡ, ತಾಂತ್ರಿಕ ನಿರ್ದೇಶಕರಾದ ಸೋಮಶೇಖರ್, ಶಾಸಕ ಹರ್ಷವರ್ಧನ್, ಎಂಎಲ್‌ಸಿ ಮಂಜೇಗೌಡ ಮುಂತಾದವರು ಉಪಸ್ಥಿತರಿದ್ದರು.

English summary
In the month of June 1000 electric vehicle charging station will be set-up in Karnataka said V. Sunil Kumar minister of energy department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X