ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮತ್ತೆ ನೋಟಿನ ಭಯ; ಮನೆ ಮುಂದೆ ಬಿದ್ದ ನೋಟು ತಂದ ಆತಂಕ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 27: ಈಗ ಜನರು ರಸ್ತೆಯಲ್ಲಿ ನೋಟು ಬಿದ್ದಿರುವುದನ್ನು ಕಂಡು ಬೆಚ್ಚಿಬೀಳುವಂತಾಗಿದೆ. ಕಳೆದ ವಾರವಷ್ಟೇ ಮೈಸೂರು ಹಾಗೂ ಮಂಡ್ಯದಲ್ಲಿ ರಸ್ತೆಯ ಮೇಲೆ ನೋಟು ಹಾಕಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇಂದು ಮೈಸೂರಿನಲ್ಲಿ ಅಂಥದ್ದೇ ಘಟನೆ ಪುನರಾವರ್ತನೆಯಾಗಿದೆ. ಮನೆಯ ಮುಂದೆ ಬಿದ್ದಿದ್ದ ನೂರು ರೂಪಾಯಿ ನೋಟೊಂದು ಇಂದು ಬೆಳ್ಳಂಬೆಳಿಗ್ಗೆ ಆತಂಕ ಸೃಷ್ಟಿಸಿದೆ.

ಮೈಸೂರಿನ ರಾಮಕೃಷ್ಣ ನಗರದ ಐ ಬ್ಲಾಕ್ ನಿವಾಸಿ ರಂಗನಾಥ್ ಎಂಬುವರ ಮನೆಯ ಎದುರು ನೂರು ರೂಪಾಯಿ ಮುಖ ಬೆಲೆಯ ನೋಟೊಂದು ಬಿದ್ದಿತ್ತು. ರಂಗನಾಥ್ ತಮ್ಮ ಅಕ್ಕಪಕ್ಕದ ಮನೆಯವರಲ್ಲಿ ಯಾರಾದರೂ ನೋಟು ಬೀಳಿಸಿದ್ದೀರಾ ಎಂದು ವಿಚಾರಿಸಿದ್ದಾರೆ. ಎಲ್ಲರೂ ತಮ್ಮದಲ್ಲವೆಂದು ತಿಳಿಸಿದ್ದಾರೆ.

ಕೊರೊನಾ ಭಯದಿಂದ ರಸ್ತೆಯಲ್ಲಿ ಅನಾಥವಾದ 3 ಸಾವಿರ ರೂಪಾಯಿ!ಕೊರೊನಾ ಭಯದಿಂದ ರಸ್ತೆಯಲ್ಲಿ ಅನಾಥವಾದ 3 ಸಾವಿರ ರೂಪಾಯಿ!

ಕೂಡಲೇ ಕುವೆಂಪು ನಗರ ಠಾಣೆಯ ಪೊಲೀಸರಿಗೆ ಅವರು ಫೋನಾಯಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸ್ಯಾನಿಟೈಸರ್ ಮಾಡುವ ಮೂಲಕ ನೋಟನ್ನು ಎತ್ತಿಕೊಂಡು ಪರಿಶೀಲನೆಗೆ ಕೊಂಡೊಯ್ದಿದ್ದಾರೆ.

100 Rs Note On Road Created Anxiety Among Ramakrishna nagar Residents

ಕುವೆಂಪುನಗರ ಠಾಣೆಯ ಎಎಸ್ ಐ ಕಾಂತರಾಜು ಮತ್ತು ದಫೇದಾರ್ ಗೌಡ್ರು ಸ್ಥಳಕ್ಕೆ ಭೇಟಿ ನೀಡಿದ್ದರು. ನೋಟಿನ ಮೂಲಕ ಕೊರೊನಾ ವೈರಸ್ ಹರಡಿಸುತ್ತಿರುವ ಕುರಿತು ವದಂತಿಗಳು ಹಬ್ಬಿದ್ದು, ಈ ರೀತಿ ನೋಟನ್ನು ರಸ್ತೆಗಳ ಮೇಲೆ ನೂರು ರೂಪಾಯಿ ನೋಟು ಬಿದ್ದಿರುವುದು ಇದೀಗ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

English summary
100 Rs note Infront Of Home has created anxiety among ramakrishna nagar residents in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X