ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೃಗಾಲಯಕ್ಕೆ ನಾಲ್ಕು ಹೊಸ ಅತಿಥಿಗಳು

|
Google Oneindia Kannada News

ಮೈಸೂರು, ಜೂ. 19 : ಮೈಸೂರು ಮೃಗಾಲಯದ ಆಕರ್ಷಣೆ ಮತ್ತಷ್ಟು ಹೆಚ್ಚಾಗಿದೆ. ಇಸ್ರೇಲ್ ನ ರಾಮತ್ ಗಾನ್ ಮೃಗಾಲಯದಿಂದ ತರಲಾದ ಎಳೆಯ ವಯಸ್ಸಿನ ನಾಲ್ಕು ಜೀಬ್ರಾಗಳನ್ನು ಸಾರ್ವಜನಿಕರ ದರ್ಶನಕ್ಕೆ ಬುಧವಾರದಿಂದ ಮುಕ್ತಗೊಳಿಸಲಾಗಿದೆ.

ಬುಧವಾರ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪತ್ನಿ ಪ್ರಮೋದಾದೇವಿ ಒಡೆಯರ್ ಜೀಬ್ರಾಗಳನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಿದರು. [ಮೈಸೂರು ಮೃಗಾಲಯದ ವೆಬ್ ಸೈಟ್ ನೋಡಿ]

Zebras

ಇಸ್ರೇಲ್ ನ ರಾಮತ್ ಗಾನ್ (ಸಫಾರಿ), ಮೃಗಾಲಯದಿಂದ 12 ರಿಂದ 14 ತಿಂಗಳುಗಳ ಎಳೆಯ ವಯಸ್ಸಿನ ನಾಲ್ಕು ಜೀಬ್ರಾಗಳನ್ನು ಮೈಸೂರು ಮೃಗಾಲಯಕ್ಕೆ ತರಲಾಗಿದೆ. ಮೈಸೂರು ಮೃಗಾಲಯದ ಅಂಗೀಕೃತ ಮಾಸ್ಟರ್ ಪ್ಲಾನ್ ನಲ್ಲಿರುವ ಪ್ರಾಣಿ ಸಂಗ್ರಹಣ ಯೋಜನೆಯಡಿ ಇವುಗಳನ್ನು ಪಡೆಯಲಾಗಿದೆ.

ರಾಣಿ ಪ್ರಮೋದಾ ದೇವಿ ಅವರು ಎರಡು ಜೀಬ್ರಾಗಳಿಗೆ Dazzle ಮತ್ತು Dawn ಎಂದು ನಾಮಕರಣ ಮಾಡಿದ್ದಾರೆ. ಪ್ರಾಣಿಪ್ರಿಯರು ಕಳುಹಿಸಿದ 350ಕ್ಕೂ ಹೆಚ್ಚು ಹೆಸರುಗಳಲ್ಲಿ ಆಯ್ಕೆ ಮಾಡಿ ಇನ್ನೆರಡು ಜೀಬ್ರಾಗಳಿಗೆ Sudheer ಮತ್ತು Riddhi ಎಂದು ಹೆಸರಿಡಲಾಗಿದೆ. [ಮೈಸೂರು ಮೃಗಾಲಯದ ವಾಲಿ ಇನ್ನಿಲ್ಲ]

ಜೀಬ್ರಾಗಳ ಬಗ್ಗೆ ಮಾಹಿತಿ ನೀಡಿದ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಜೀಬ್ರಾಗಳು ಇನ್ನೂ ಮೃಗಾಲಯಕ್ಕೆ ಹೊಂದಿಕೊಳ್ಳಲು ಕಾಲಾವಕಾಶ ತೆಗೆದುಕೊಳ್ಳುತ್ತವೆ ಎಂದು ಹೇಳಿದ್ದಾರೆ. ನಾಲ್ಕು ಜೀಬ್ರಾಗಳು ಆರೋಗ್ಯವಾಗಿದ್ದು, ಸದ್ಯ ಮೃಗಾಲಯದಲ್ಲಿ 5 ಜೀಬ್ರಾಗಳಿವೆ ಎಂದು ತಿಳಿಸಿದರು. [ಮೃಗಾಲಯದ ಪೊಲೋ ಇನ್ನಿಲ್ಲ]

English summary
Now, there is one more reason to visit Mysore’s famed Sri Chamarajendra Zoological Gardens, popularly known as Mysore Zoo. The Zoo authorities on Wednesday added four more zebras for public display.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X