ಅಮ್ಮನಾದ ಸಂಭ್ರಮದಲ್ಲಿ ಮೈಸೂರು ಮೃಗಾಲಯದ ರಿದ್ಧಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 22 : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆಗಾಗ ಪ್ರಾಣಿಗಳ ಸಾವಿನ ಸುದ್ದಿ ಕೇಳಿದ ಜನರಿಗೆ ಸಿಹಿ ಸುದ್ದಿಯೊಂದಿದೆ. ಇಲ್ಲಿನ 'ರಿದ್ಧಿ' ಎಂಬ ಜೀಬ್ರಾ ಮರಿಗೆ ಜನ್ಮ ನೀಡುವ ಮೂಲಕ ಸಂತಸದ ಸುದ್ದಿ ನೀಡಿದೆ. ಮೃಗಾಲಯದ ಇತಿಹಾಸದಲ್ಲಿ ಮೊಟ್ಟ ಮೊದಲ ಜೀಬ್ರಾ ಮರಿಯೊಂದಕ್ಕೆ ಜನ್ಮ ನೀಡಿದೆ. [ಅಮ್ಮನಿಂದ ತಿರಸ್ಕೃತ ಕೋತಿಮರಿಗೆ ಗೊಂಬೆಯೇ ತಾಯಿ!]

ಮೂರು ವರ್ಷ 3 ತಿಂಗಳ ಪ್ರಾಯದ 'ರಿದ್ಧಿ' ಏ.21ರಂದು ಮರಿಗೆ ಜನ್ಮ ನೀಡಿದೆ. ರಿದ್ಧಿ ಮತ್ತು ಅದರ ಮರಿಯ ಆರೈಕೆಯನ್ನು ಚೆನ್ನಾಗಿ ಮಾಡುತ್ತಿದ್ದು, ಮರಿಯು ಆರೋಗ್ಯವಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ. [ಮೃಗಾಲಯದ 'ಟಿಂಬೋ' ಇನ್ನಿಲ್ಲ]

 zoo

ಮೊಟ್ಟ ಮೊದಲ ಬಾರಿಗೆ 1990ರಲ್ಲಿ ಮೈಸೂರು ಮೃಗಾಲಯಕ್ಕೆ ಜರ್ಮನಿಯ ಹಾಮ್‍ಬರ್ಗ್‌ನಿಂದ ಎರಡು ಜೀಬ್ರಾ ತರಿಸಿಕೊಳ್ಳಲಾಗಿತ್ತು. ಗಂಡು ಜೀಬ್ರಾಗೆ 'ಎಡ್‍ವರ್ಡ್' ಮತ್ತು ಹೆಣ್ಣು ಜೀಬ್ರಾಗೆ 'ಎರೀನ್' ಎಂದು ನಾಮಕರಣ ಮಾಡಲಾಗಿತ್ತು. [ಮೈಸೂರು ಮೃಗಾಲಯದ 'ವಾಲಿ' ವಿಧಿವಶ]

ಈ ಎರಡು ಜೀಬ್ರಾಗಳು ಮೃಗಾಲಯವನ್ನು ವೀಕ್ಷಿಸಲು ಬರುವವರನ್ನು ರಂಜಿಸುತ್ತಿದ್ದವು. ಇವು ಸಾವನ್ನಪ್ಪಿದ ಬಳಿಕ 2007ರಲ್ಲಿ ಲಕ್ನೋ ಮೃಗಾಲಯದಿಂದ 'ರಾಜ' ಎಂಬ ಗಂಡು ಜೀಬ್ರಾವನ್ನು ತರಿಸಿಕೊಳ್ಳಲಾಯಿತು. ಆದರೆ, ಸೋಂಕಿನ ಕಾರಣದಿಂದಾಗಿ 2010ರಲ್ಲಿ ಅದು ಸಾವನ್ನಪ್ಪಿತು. 2014ರಲ್ಲಿ ಇಸ್ರೇಲ್‌ನ Ramat Gan National Park ನಿಂದ 4 ಜೀಬ್ರಾಗಳನ್ನು ತರಿಸಲಾಯಿತು. [ಬಿಸಿಲ ಧಗೆಯಲ್ಲೂ ಮೈಸೂರು ಮೃಗಾಲಯ ಪ್ರಾಣಿಗಳು ಕೂಲ್ ಕೂಲ್]

ಈ ಜೀಬ್ರಾಗಳಿಗೆ ಡಾನ್, ಡ್ಯಾಜಲ್, ರಿದ್ಧಿ ಮತ್ತು ಸುಧೀರ್ ಎಂದು ಹೆಸರಿಡಲಾಯಿತು. 2015ರ ಡಿಸೆಂಬರ್‌ನಲ್ಲಿ ಡಾನ್ ಮತ್ತು ಡ್ಯಾಜಲ್ ಸಾವನ್ನಪ್ಪಿದವು. ರಿದ್ಧಿ ಮತ್ತು ಸುಧೀರ್ ಉಳಿದುಕೊಂಡಿದ್ದು, ರಿದ್ದಿಗೆ ಈಗ 3 ವರ್ಷ 3 ತಿಂಗಳ ಪ್ರಾಯವಾದರೆ, ಸುಧೀರ್‌ಗೆ 3 ವರ್ಷ 7 ತಿಂಗಳಾಗಿದೆ.[ಮೃಗಾಲಯದ ವೆಬ್ ಸೈಟ್]

zebra

ಈ ನಡುವೆ ಗರ್ಭ ಧರಿಸಿದ್ದ ರಿದ್ಧಿ ಏ.21ರಂದು ಮರಿಗೆ ಜನ್ಮ ನೀಡಿದೆ. ಆ ಮೂಲಕ ಮೈಸೂರು ಮೃಗಾಲಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜೀಬ್ರಾ ಮರಿಯೊಂದಕ್ಕೆ ಜನ್ಮ ನೀಡಿದ ಖ್ಯಾತಿಗಳಿಸಿದೆ. ಸುಧೀರ್ ಮತ್ತು ರಿದ್ಧಿ ಮತ್ತು ಮರಿಯ ಆರೈಕೆಯನ್ನು ಚೆನ್ನಾಗಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Riddhi a zebra at the Sri Chamarajendra Zoological Gardens Mysuru gave birth to a foal on Thursday. At present, Riddhi and Sudhir are the only two zebras in the zoo.
Please Wait while comments are loading...