ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವದಸೆರೆಯಲ್ಲಿ ಬಾಲಿವುಡ್‌ ಗಾಯಕಿ ಫಲಕ್ ಮುಚ್ಚಲ್ ಕಲರವ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 23: ದಸರೆಯ ಪ್ರಮುಖ ಆಕರ್ಷಣೆ ಯುವ ದಸರಾ. ಮೈಸೂರು ದಸರಾ ಮಹೋತ್ಸವದಲ್ಲಿನ ಪ್ರಮುಖ ಆಕರ್ಷಣೆ, ಯುವ ಮನಸ್ಸುಗಳನ್ನು ಮನಸೂರೆಗೊಳಿಸುವ, ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಯುವ ದಸರಾಕ್ಕೆ ಸೆ.22 ರ ಸಂಜೆ ಚಾಲನೆ ದೊರೆಯಿತು.

ವೈಭವದ ದಸರಾ ವಿಶೇಷ ಪುಟ

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಯುವದಸರಾಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಮ್ಮ ಐಕ್ಯತೆ, ಅಖಂಡತೆ,ಸಮಗ್ರತೆ, ಕಾಪಾಡಲು ಯುವ ಜನತೆಯ ಸಹಭಾಗಿತ್ವ ಅಗತ್ಯ. ಧಾರ್ಮಿಕ ಸಹಿಷ್ಣುತೆ , ಕೋಮುವಾದ ಎಲ್ಲವನ್ನೂ ಮರೆತು ರಾಷ್ಟ್ರೀಯ ಭಾವೈಕ್ಯತೆ ಬೆಳೆಸಬೇಕು. ಯುವಕರು ಒಗ್ಗಟ್ಟಾಗಿದ್ದರೆ, ಭಾರತವನ್ನು ಯಾವ ದುಷ್ಟ ಶಕ್ತಿಗಳು ಒಡೆಯಲು ಸಾಧ್ಯವಿಲ್ಲ. ಈ ಯುವ ದಸರಾ ಕಾರ್ಯಕ್ರಮದ ಮೂಲಕ ಸಾಮಾಜಿಕ ನೈತಿಕತೆ ಹೆಚ್ಚಿಸುವಂತೆ ಮಾಡಲಿ ಎಂದು ಶುಭ ಹಾರೈಸಿದರು.

Yuva Dasara inaguarted on 22nd Sep in Mysuru

ನಟ ಸೃಜನ ಲೋಕೋಶ್, ನಟಿ ರಚಿತರಾಮ್ ಕಾರ್ಯಕ್ರಮಕ್ಕೆ ತಾರಾ ಮೆರಗು ನೀಡಿದರು. ನಟ ಸೃಜನ್ ಲೋಕೇಶ್ ಮಾತನಾಡಿ, ಮೈಸೂರು ಎರಡು ಬಾರಿ ಸ್ವಚ್ಛನಗರಿ ಬಿರುದು ಪಡೆಕೊಂಡಿತ್ತು. ಆದರೆ ಕಳೆದ ಬಾರಿ ಮೈಸೂರು ಸ್ವಚ್ಛ ನಗರಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿತ್ತು. ಮುಂದಿನ ಬಾರಿ ಮತ್ತೆ ನಂ 1 ಸ್ಥಾನಕ್ಕೆ ಬರುವಂತೆ ನಾವು ಮೈಸೂರಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು

ಹಲವಾರು ವರ್ಷಗಳ ಹಿಂದೆ ದಸರಾ ಮಹೋತ್ಸವದ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿದರೆ 100 ರೂ. ಕೊಡುತ್ತಿದ್ದರು. ಆಗಲೇ ಮೊದಲ ಬಾರಿಗೆ ನಾನು ಸಾವಿರಾರು ಜನರನ್ನು ನೋಡಿದ್ದು. ನಾನು ಕೆಲಸ ಪ್ರಾರಂಭಿಸಿದ್ದು ಮೈಸೂರಿನಿಂದಲೇ. ಇನ್ನೂ ಮೈಸೂರಿನಿಂದ ಕೆಲಸಗಳನ್ನು ಮಾಡುತ್ತೇವೆ ಎಂದರು. ಮೈಸೂರು ನನಗೆ ಬಹಳ ಇಷ್ಟವಾದ ಸ್ಥಳ. ಈ ನಗರದಲ್ಲಿ ಯಾವುದಾದರೂ ಒಂದು ಕಟ್ಟಡಕ್ಕೆ, ಉದ್ಯಾನಕ್ಕೆ ನಮ್ಮ ತಾತ ಸುಬ್ಬಯ್ಯ ನಾಯ್ಡು ಅವರ ಹೆಸರನ್ನು ಇಡಬೇಕು ಎಂಬುದು ನಮ್ಮ ತಂದೆಯ ಆಸೆಯಾಗಿತ್ತು. ಇದನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು

Yuva Dasara inaguarted on 22nd Sep in Mysuru

ಯುವಜನರನ್ನು ಸೆಳೆದ ನೃತ್ಯಗಳು :
ಯುವಜನತೆಯ ಮನ ಕದಿಯುವ ಕಾರ್ಯಕ್ರಮಗಳಿಗೆ ಅಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ, ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಎಂದು ತಮ್ಮ ಅದ್ಭುತ ನೃತ್ಯದ ಮೂಲಕ ಲಲಿತಕಲಾ ಕಾಲೇಜು ವಿದ್ಯಾರ್ಥಿಗಳು ಎಲ್ಲರ ಮೆಚ್ಚುಗೆ ಪಡೆದರು. ಜಾನಪದ ನೃತ್ಯಗಳಲ್ಲಿ ಒಂದಾದ ದೊಡ್ಡಾಟ ನೃತ್ಯ ಪ್ರಕಾರವನ್ನು ಶಿಗ್ಗಾಂವ್ ನ ಶ್ರೀ ಶೈಲ ಮತ್ತು ತಂಡ ಪ್ರದರ್ಶಿಸಿ ಜಾನಪದ ಲೋಕದ ಮಹತ್ವ ಸಾರಿದರು. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ವಿದ್ಯಾರ್ಥಿಗಳು ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದರು.

Yuva Dasara inaguarted on 22nd Sep in Mysuru

ಫಲಕ್ ಮುಚ್ಚಲ್ ಹಾಡಿಗೆ ಹುಚ್ಚೆದ್ದು ಕುಣಿದ ಅಭಿಮಾನಿಗಳು:
ಹಿಂದಿಯ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿ 30 ಕ್ಕೂ ಹೆಚ್ಚು ಕಡೆಗಳಲ್ಲಿ ತಮ್ಮ ನೃತ್ಯ ಪ್ರದರ್ಶಿಸಿರುವ ರೋಬೋ ಗಣೇಶ್ ಅಶಿಕಿ 2 ಚಿತ್ರದ ಅಬ್ ತೇರೆ ಬಿನ್ ರೆಹೆನಹಿ ಸಕ್ ತ ಗೀತೆಗೆ ನೃತ್ಯ ಪ್ರದರ್ಶಿಸಿ ಎಲ್ಲರ ಚಪ್ಪಾಳೆ ಗಿಟ್ಟಿಸಿದರು. ಏ ದಿಲ್ ಹೈ ಮುಷ್ಕಿಲ್, ಅಬ್ ಹೈ ಸಾಮನೇ ..., ಮರ್ ಜಾವೂ ಯಾ ಜಿಲೂ ಜರ, ಅಬ್ ತೇರೆ ಬಿನ್ ರೆಹೆನಯೀ ಸಕ್ ತ ಗೀತೆಗಳು ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

ಯುವ ದಸರಾದ ಮೊದಲ ದಿನದ ಕಾರ್ಯಕ್ರಮದಲ್ಲಿ ಬಾಲಿವುಡ್‌ ಗಾಯಕಿ ಫಲಕ್ ಮುಚ್ಚಲ್ ತಮ್ಮ ಅದ್ಭುತ ಕಂಠಸಿರಿಯಲ್ಲಿ ಅದ್ಭುತ ಗೀತೆಗಳನ್ನು ಹಾಡಿ ಯುವ ದಸರಾ ಕಳೆಕಟ್ಟುವಂತೆ ಮಾಡಿದರು. ಫಲಕ್ ಮುಚ್ಚಲ್ ಒಂದೊಂದು ಗೀತೆಗಳನ್ನು ಹಾಡುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಹಾಕಿ ಕುಣಿದು ಕುಪ್ಪಳಿಸಿ ಯುವ ದಸರಾವನ್ನು ಆನಂದಿಸಿದರು. ಲಂಬೀ ಜುದಾಯಿ, ತೇರಿ ದಿವಾನಿ ಸೇರಿದಂತೆ ಅನೇಕ ಗೀತೆಗಳನ್ನು ಹಾಡಿ ಎಲ್ಲರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು.

English summary
Yuva Dasara for youths has inaugurated on 22nd September in Mysuru. Many Kannada actors took part of the programme
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X