ಯುವ ದಸರಾ 2016 : ಅಯ್ಯೋ! ಕನ್ನಡಿಗರ ಕಡೆಗಣನೆ

By: ಜಯಂತ್ ಸಿದ್ಮಲ್ಲಪ್ಪ, ಶಿವಮೊಗ್ಗ
Subscribe to Oneindia Kannada

ಪಾರಂಪರಿಕ, ವಿಶ್ವ ಪ್ರಸಿದ್ದ ಎಂದೆಲ್ಲ ಅನೇಕ ಬಿರುದುಗಳನ್ನು ಹೊತ್ತ ನಮ್ಮ ಮೈಸೂರು ದಸರಾದ ತಯಾರಿಗಳು ಇನ್ನು ಕೆಲವು ದಿನಗಳಲ್ಲಿ ಶುರುವಾಗಲಿದೆ. ಕರ್ನಾಟಕದ ಶ್ರೀಮಂತ ಹಾಗು ಸಮೃದ್ದ ಸಂಸ್ಕೃತಿಯ ಅನಾವರಣ ನಮ್ಮ ದಸರಾದಲ್ಲಿ ನಡೆಯ ಬೇಕಿದೆ. ಆದರೆ, ಯುವ ದಸರಾ 2016ರಲ್ಲಿ ಪರಭಾಷಿಕರಿಗೆ ಮೀಸಲಾದ ಕಾರ್ಯಕ್ರಮವೇ ಎದ್ದು ಕಾಣುತ್ತಿರುವುದು ಕನ್ನಡಿಗರನ್ನು ಕೆರಳಿಸಿದೆ.

ಈ ವರ್ಷದ ದಸರಾ ಕೆಲಸ ಹಾಗು ಕಾರ್ಯಕ್ರಮಗಳು ಎಲ್ಲ ಸಾಂಗವಾಗಿಯೇ ನಡೆಯುತ್ತಿದೆ. ಆದರೆ ಅದರಲ್ಲಿ ಕೆಲವು ದೋಷಗಳು ಎದ್ದು ಕಾಣುತ್ತಿದೆ! ಅವೇನೆಂದರೆ, ದಸರಾದ ಮುಖ್ಯ ಕಾರ್ಯಕ್ರಮಗಳಲ್ಲಿ ಕನ್ನಡ ಹಾಗು ಕನ್ನಡಿಗರ ಕಡೆಗಣನೆ.

ಮಹತ್ತಕರ್ಷಣೆಯ 'ಯುವ ದಸರಾ'ದಲ್ಲಿ ಕೇವಲ ಒಂದು ದಿನ ಕಾಟಾಚಾರಕ್ಕೆ ಎಂಬಂತೆ ಮಾತ್ರ ಕನ್ನಡಿಗರಿಂದ ಸಂಗೀತ ರಸಸಂಜೆ ಏರ್ಪಡಿಸಿ, ಉಳಿದ ದಿನಗಳು ಪರಭಾಷಿಕರಿಗೆ ಮೀಸಲಿಡಲಾಗಿದೆ!

Yuva Dasara 2016 Lack Kannada flavour

ಕಳೆದ ಬಾರಿಯಂತೆ ಈ ಬಾರಿಯೂ ಪರಭಾಷಾ ಮತ್ತು ಪರಭಾಷಿಕರ ವೈಭವ ನಡೆಸಲಾಗುತ್ತಿದೆ. ಹಿಂದಿ/ಇಂಗ್ಲಿಷ್ ಹಾಡುಗಳನ್ನು ಕೇಳಲು ಯಾರಾದರು ಕರ್ನಾಟಕದ ಮೈಸೂರು ದಸರಾಕ್ಕೆ ಬರುವರೆ? ಕನ್ನಡಿಗರು ಕಟ್ಟುವ ತೆರಿಗೆಯಿಂದ ನಡೆಸುವ ಹಬ್ಬದಲ್ಲಿ ಪರಭಾಷಿಕರನ್ನು ಕರೆದು, ಅವರು ಕೇಳಿದಷ್ಟು ಹಣವನ್ನು ಕೊಟ್ಟು ಇಲ್ಲಿ ಕಾರ್ಯಕ್ರಮ ನಡೆಸುವ ಅವಶ್ಯಕತೆಯಾದರು ಏನಿತ್ತು?
ಇದನ್ನು ಗಮನಿಸಿದಾಗ ದಸರಾ ಹೊರಗಿನವರಿಗೆ ಹಬ್ಬವಾಗಿ ಕಂಡರೂ ಕನ್ನಡಿಗನಾಗಿ ನನಗೆ ಕನ್ನಡಿಗರ ಹಬ್ಬ ಅನಿಸುತ್ತಿಲ್ಲ.

ಹಬ್ಬದಿಂದ ಕನ್ನಡ/ಕನ್ನಡ ಕಲಾವಿದರೇ ಮರೆಯಾದರೆ ನಾಡ ಹಬ್ಬವಾಗಲು ಹೇಗೆ ಸಾದ್ಯ? ನಮ್ಮ ಭಾಷೆಯು ಕೂಡ ನಮ್ಮ ಸಂಸ್ಕೃತಿಯ ಒಂದು ಭಾಗವಲ್ಲವೆ? ಜಗತ್ತಿನ ವಿವಿಧ ಕಡೆಯಿಂದ ಬರುವ ಜನರಿಗೆ ನಮ್ಮ ಭಾಷೆಯ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲವೇ? ಈ ಮೂಲಕ ಕನ್ನಡವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯ ಬಹುದಲ್ಲವೇ?

ಹಾಗಾಗಿ ದಯವಿಟ್ಟು ನಾಡ ಹಬ್ಬದಲ್ಲಿ ಕನ್ನಡಿಗರ ಪ್ರತಿಬೆ, ಸಂಸ್ಕೃತಿಯ ಅನಾವರಣವಾಗಲಿ, ಅನ್ಯರದ್ದಲ್ಲ. ಚಿಕ್ಕ ಚಿಕ್ಕ ಬದಲಾವಣೆಗಳು ದಸರಾ ಹಬ್ಬವನ್ನು ನಮ್ಮದಾಗಿಸುತ್ತವೆ.

ಹಬ್ಬವನ್ನು ಬರಿ ವ್ಯವಹಾರಿಕವಾಗಿ ನೋಡದೆ, ನಮ್ಮ ಸಂಸ್ಕೃತಿಯ, ನಮ್ಮ ಪ್ರತಿನಿಧಿಯಾಗಿ ದೇಶ-ವಿದೇಶಗಳಿಗೆ ಪರಿಚಯ ಮಾಡುವುದು ಒಳಿತು. ಹಾಗೆಯೇ "ಆಹಾರ ಮೇಳ"ದಲ್ಲಿ ಸಹ ಹೆಚ್ಚು-ಹೆಚ್ಚು ಕರ್ನಾಟಕದ ಖಾದ್ಯಗಳ ಪರಿಚಯ ಮಾತ್ರ ಮಾಡಿಕೊಡುವುದರ ಮೂಲಕ ಈ ಬಾರಿಯ "ನಾಡ ಹಬ್ಬ"ವನ್ನಾದರು ಸಂಪೂರ್ಣವಾಗಿ ಕನ್ನಡಮಯವಾಗಿಸಿ, ಕನ್ನಡಿಗರಾದಗಿಸಿ ಎಂದು ನಿಮ್ಮಲ್ಲಿ ನಾನು ವಿನಂತಿ ಮಾಡುತ್ತಿದ್ದೇನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This year’s Yuva Dasara, to be held from October 3 to 9, will feature artistes like Benny Dayal, Raghu Dixit and Shalmali Kholgade. But, Kannadigas unhappy that Yuva Dasara is lacking Kannada flavour.
Please Wait while comments are loading...