ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಮೈಸೂರು ಯುವ ದಸರಾ: ಸೆಲೆಬ್ರಿಟಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು?

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    Yuva Dasara Mysore 2018 : ಮೈಸೂರು ಯುವ ದಸರಾದಲ್ಲಿ ಸೆಲೆಬ್ರಿಟಿಗಳು ಪಡೆಯುವ ಸಂಭಾವನೆ ಎಷ್ಟು?

    ಮೈಸೂರು, ಅಕ್ಟೋಬರ್. 12: ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಲ್ಲೊಂದಾದ ಹಾಗೂ ಯುವ ಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುವ ಯುವದಸರಾ ಇಂದು ಸಂಜೆ ಶುಕ್ರವಾರ (ಅ.12) ಆರಂಭವಾಗಲಿದೆ.

    ಪ್ರಖ್ಯಾತ ಗಾಯಕರಾದ ಜಯಹೋ ಖ್ಯಾತಿಯ ವಿಜಯ ಪ್ರಕಾಶ್, ಬಾಲಿವುಡ್ ಗಾಯಕರಾದ ಬಾದಶಾ, ಆಸ್ತ ಗಿಲ್, ಅರ್ಮಾನ್ ಮಲ್ಲಿಕ್, ನೇಹ ಕಕ್ಕರ್, ಶೆರ್ಲಿ ಸೇಟಿಯಾ ಹಾಗೂ ಸ್ಯಾಂಡಲ್ ವುಡ್ ಖ್ಯಾತ ನಟ ನಟಿಯರು ಯುವ ಸಮೂಹವನ್ನು ಸಂತಸದ ಕಡಲಲ್ಲಿ ತೇಲಿಸಲು ರೆಡಿಯಾಗಿದ್ದಾರೆ.

    ಕಳೆದ 15 ವರ್ಷಗಳ ಹಿಂದೆ ಆರಂಭವಾದ ಯುವ ದಸರಾ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಂಡೇ ಬಂದಿದೆ. ಪ್ರತೀ ಬಾರಿ ದೇಶದ ಮುಂಬೈ, ಹೊಸದಿಲ್ಲಿ, ಇನ್ನಿತರ ರಾಜ್ಯಗಳ ಕಲಾವಿದರು, ಯುವ ದಸರಾ ವೇದಿಕೆಯ ಮೂಲಕ ಯುವ ಸಮೂಹವನ್ನು ರಂಜಿಸಿದ್ದಾರೆ.

    ಅಕ್ಟೋಬರ್ 12ರ ಮೈಸೂರು ದಸರಾ ಕಾರ್ಯಕ್ರಮಗಳ ವಿವರ

    ಈ ಬಾರಿಯೂ ಅದು ಮುಂದುವರಿದಿದೆ. ಇದರ ಜೊತೆಗೆ ಯುವ ಸಂಭ್ರಮದ ಮೂಲಕ ಆಯ್ಕೆಯಾದ 25 ತಂಡಗಳ ವಿದ್ಯಾರ್ಥಿಗಳು ಯುವ ದಸರಾದಲ್ಲಿ ತಮ್ಮ ಕಲಾ ಪ್ರದರ್ಶನವನ್ನು ಉಣಬಡಿಸಲಿದ್ದಾರೆ. ಪ್ರತೀ ದಿನ 6 ಗಂಟೆಯಿಂದ 7 ಗಂಟೆಯವರೆಗೆ ಐದು ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ. ಮುಂದೆ ಓದಿ...

     ಸ್ಥಳೀಯ ಕಲಾವಿದರಿಗೆ ಅವಕಾಶ

    ಸ್ಥಳೀಯ ಕಲಾವಿದರಿಗೆ ಅವಕಾಶ

    7 ರಿಂದ 8.30ರವರೆಗೆ ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಇನ್ನಿತರ ಜಿಲ್ಲೆಗಳ ಕಲಾವಿದರು ನೃತ್ಯ, ನೃತ್ಯ ರೂಪಕ, ಪಾಪ್ ಡ್ಯಾನ್ಸ್, ಭರತ ನಾಟ್ಯ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

    ದಸರಾ ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿಗೆ ಡಿಮ್ಯಾಂಡೋ ಡಿಮ್ಯಾಂಡು

     ಮುಖ್ಯಮಂತ್ರಿಗಳಿಂದ ಉದ್ಘಾಟನೆ

    ಮುಖ್ಯಮಂತ್ರಿಗಳಿಂದ ಉದ್ಘಾಟನೆ

    ಸಂಜೆ 6.30ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವರಾದ ಸಾ.ರಾ.ಮಹೇಶ್, ಡಾ.ಜಯಮಾಲ, ಎನ್.ಮಹೇಶ್, ಸಿ.ಪುಟ್ಟರಂಗಶೆಟ್ಟಿ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ಭಾಗವಹಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು.

    ಸರ್ಕಾರದಿಂದ ಮಹಿಳೆಯರಿಗಾಗಿ 25 ಸಾವಿರ ತುರ್ತುನಿಧಿ: ಸಚಿವೆ ಜಯಮಾಲಾ

     ಸಿದ್ಧತೆಗಳು ಪೂರ್ಣ

    ಸಿದ್ಧತೆಗಳು ಪೂರ್ಣ

    ಯುವ ದಸರಾ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು, ಮೈದಾನದಲ್ಲಿ 30 ಸಾವಿರ ಮಂದಿ ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ದೊಡ್ಡ ಪರದೆಯ ಮೂಲಕ ಮೈದಾನದ ಹೊರಗಿನವರಿಗೂ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತಿದೆ.

     ಕಾರ್ಯಕ್ರಮಗಳ ವಿವರ

    ಕಾರ್ಯಕ್ರಮಗಳ ವಿವರ

    ಉದ್ಘಾಟನೆ ದಿನ ವಿಜಯಪ್ರಕಾಶ್ ತಂಡದಿಂದ ಸಂಗೀತ, ಸಂಜೆ 13ರ ರಾತ್ರಿ ಬಾದಶಾ ಸಂಗೀತ ರಸಮಂಜರಿ, 14ರಂದು ಅರ್ಮಾನ್ ಮಲಿಕ್ ಸಂಗೀತೋತ್ಸವ, 15ರಂದು ಕನ್ನಡ ನಟಿಯರಿಂದ ಸ್ಯಾಂಡಲ್ ವುಡ್ ನೈಟ್ಸ್, 16ರಂದು ಸಂಗೀತಗಾರ ನವೀನ್ ಸಜ್ಜು ತಂಡ, ಶೆರ್ಲಿ ಸೇಟಿ ತಂಡದಿಂದ ಸಂಗೀತ, 17ರಂದು ಯಶ್ ಮನರಂಜನೆ, ನೇಹಾ ಕಕ್ಕರ್ ರಸಸಂಜೆ ಕಾರ್ಯಕ್ರಮವಿರುತ್ತದೆ.

     ಸೆಲೆಬ್ರಿಟಿಗಳ ಸಂಭಾವನೆ

    ಸೆಲೆಬ್ರಿಟಿಗಳ ಸಂಭಾವನೆ

    ವಿಜಯಪ್ರಕಾಶ್ ತಂಡ 60 ಲಕ್ಷ + ಜಿಎಸ್ಟಿ, ಅರ್ಮಾನ್ ಮಲಿಕ್: 35 ಲಕ್ಷ + ಜಿಎಸ್ಟಿ, ನೇಹಾ ಕಕ್ಕರ್: 35 ಲಕ್ಷ + ಜಿಎಸ್ಟಿ, ಬಾದಶಾ-30 ಲಕ್ಷ +ಜಿಎಸ್ಟಿ, ಶ್ರೀಧರ್ ಜೈನ್ ತಂಡ: 1.5 ಲಕ್ಷ
    ನವೀನ್ ಸಜ್ಜು: 1.5 ಲಕ್ಷ ಸಂಭಾವನೆ ಪಡೆದಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Yuva Darsara will begin on Friday evening (October 12). Here celebrity remuneration details and Programs details given.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more