ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಭಗವದ್ಗೀತೆ ಸುಟ್ಟು ಹಾಕಿದ ಯುವ ಹೋರಾಟಗಾರ ಹಾರೋಹಳ್ಳಿ ರವೀಂದ್ರ!

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 12 :ನವದೆಹಲಿಯ ಜಂತರ್- ಮಂತರ್ ಬಳಿ ಸಂವಿಧಾನವನ್ನು ಸುಟ್ಟಿರುವುದನ್ನು ಖಂಡಿಸಿ ವ್ಯಕ್ತಿಯೊಬ್ಬರು ಮೈಸೂರಿನಲ್ಲಿ ಭಗವದ್ಗೀತೆಯನ್ನು ಸುಟ್ಟಿರುವ ಘಟನೆ ನಡೆದಿದೆ.

ಯುವ ಹೋರಾಟಗಾರ ಹಾರೋಹಳ್ಳಿ ರವೀಂದ್ರ ಎಂಬುವವರು ಭಗವದ್ಗೀತೆಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದು, ಈ ದೃಶ್ಯವನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಕೂಡ ಮಾಡಿದ್ದಾರೆ.

ಶಿವಮೊಗ್ಗ: ಕಳ್ಳತನ ಮಾಡಿ ಬೀರುಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳುಶಿವಮೊಗ್ಗ: ಕಳ್ಳತನ ಮಾಡಿ ಬೀರುಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

"ಮನುವಾದಿಗಳನ್ನು ಗಡಿಪಾರು ಮಾಡಬೇಕು. ಸಂವಿಧಾನವನ್ನು ಸುಡುವ ಶಕ್ತಿಗಳು ದೇಶಕ್ಕೇ ಬೆಂಕಿ ಹಚ್ಚುತ್ತವೆ. ಅಂತಹ ಶಕ್ತಿಗಳು ಬೆಳೆಯದಂತೆ ನೋಡಿಕೊಳ್ಳಬೇಕು" ಎಂದು ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.

Young fighter Harohalli Ravindra burned Bhagavad gita in Mysore

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣೇಶ್ವರ ರಾವ್, ಭಗವದ್ಗೀತೆ ಪ್ರತಿ ಸುಟ್ಟು ಹಾಕಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು, ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದು ಧೃಢಪಟ್ಟರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ಈ ಕೃತ್ಯ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹಾರೋಹಳ್ಳಿ ಗ್ರಾಮದಲ್ಲಿ ರವೀಂದ್ರ ಅವರು ಭಗವದ್ಗೀತೆಗೆ ಬೆಂಕಿ ಹಚ್ಚುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ ಈ ವಿಡಿಯೋವನ್ನು ಕೇವಲ ಐದು ಗಂಟೆ ಅವಧಿಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

200 ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದು, ನೂರಾರು ಮಂದಿ ಪರ ಮತ್ತು ವಿರೋಧ ಪ್ರತಿಕ್ರಿಯೆ ನೀಡಿದ್ದಾರೆ.

English summary
Young fighter Harohalli Ravindra burned Bhagavad gita in Mysore. He burned Bhagavad Gita for condemning burned constitution at Jantar-Mantar, New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X