ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೊಮ್ಮೆ ಅವಕಾಶ: ಈ ಬಾರಿ ಮೈಸೂರಲ್ಲಿ 7 ಅರಮನೆಗಳನ್ನು ನೋಡಬಹುದು

|
Google Oneindia Kannada News

ಮೈಸೂರು, ಸೆಪ್ಟೆಂಬರ್. 17: ಅರಮನೆಗಳ ನಗರಿ ಮೈಸೂರಿನ ಪರಂಪರೆ, ಇತಿಹಾಸವನ್ನು ದೇಶ-ವಿದೇಶದ ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಕಳೆದ ಬಾರಿ ಆಯೋಜಿಸಿದ್ದ ಮೈಸೂರಿನಲ್ಲಿ ಪ್ರವಾಸಿಗರಿಗಾಗಿ ಪ್ಯಾಲೇಸ್ ಆನ್ ವ್ಹೀಲ್ಸ್' ಎಂಬ ವಿನೂತನ ಕಾರ್ಯಕ್ರಮ ಈ ವರ್ಷವೂ ಮುಂದುವರಿಯುತ್ತಿದೆ.

ನಗರದಲ್ಲಿರುವ 8 ಅರಮನೆಗಳನ್ನು ವೀಕ್ಷಿಸುವ ಕಾರ್ಯಕ್ರಮ ಇದಾಗಿದ್ದು, ಪ್ರವಾಸಿಗರ ಗಮನಕ್ಕೆ ಬಾರದಂತಹ ಅನೇಕ ಅರಮನೆಗಳನ್ನು, ಅದರ ವಿಶಿಷ್ಟತೆಗಳನ್ನು, ಇತಿಹಾಸವನ್ನು ಈ ಪ್ರವಾಸದಲ್ಲಿ ಪರಿಚಯಿಸಲಾಗುವುದು.

ಅರಮನೆಯ ಸೌಂದರ್ಯಕ್ಕೆ ಮಾರುಹೋದ ರಾಜ್ಯಪಾಲ ವಜುಭಾಯಿ ವಾಲಾಅರಮನೆಯ ಸೌಂದರ್ಯಕ್ಕೆ ಮಾರುಹೋದ ರಾಜ್ಯಪಾಲ ವಜುಭಾಯಿ ವಾಲಾ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹವಾ ನಿಯಂತ್ರಿತ ವೋಲ್ವೋ ಬಸ್ ನಲ್ಲಿ ಪ್ರವಾಸಿಗರನ್ನು ಕರೆದೊಯ್ಯಲಾಗುವುದು. ಬೆಳಗ್ಗೆ 10ರಿಂದ ಸಂಜೆ 6.30 ರವರೆಗೆ 8 ಅರಮನೆಗಳನ್ನು ಪರಿಚಯಿಸಿ ಲಲಿತಮಹಲ್ ಅರಮನೆಯಲ್ಲಿ ಮಧ್ಯಾಹ್ನ 1ರಿಂದ 2.20ರವರೆಗೆ ಭೋಜನ ವ್ಯವಸ್ಥೆ ಮಾಡಲಾಗುವುದು.

You have the opportunity to see 8 palaces in Mysore

ಸಂಜೆಯ ಲಘು ಉಪಾಹಾರ ನೀಡುವ ಬಗ್ಗೆ ಇನ್ನು ತೀರ್ಮಾನವಾಗಿಲ್ಲ ಎನ್ನಲಾಗಿದೆ. ಸಂಜೆ 6.30ಕ್ಕೆ ಮತ್ತೆ ಅರಮನೆಗೆ ಕರೆತಂದು ಬಿಡಲಾಗುವುದು. ಪ್ರವಾಸ ದರ ಕಳೆದ ಬಾರಿ ಒಬ್ಬರಿಗೆ 999 ರೂ. ಆಗಿತ್ತು. ಈ ಬಾರಿ ಇನ್ನು ದರ ನಿಗದಿಯಾಗಿಲ್ಲ.

ಮೈಸೂರು ಅರಮನೆ, ಲಲಿತಮಹಲ್ ಅರಮನೆ, ವಸಂತಮಹಲ್ ಅರಮನೆ, ಕಾರಂಜಿ ಅರಮನೆ, ಚಲುವರಾಜಮ್ಮಣ್ಣಿ ಮ್ಯಾನ್‍ಷನ್, ಕೃಷ್ಣರಾಜೇಂದ್ರ ವಿಲಾಸ ಅರಮನೆ ಸೇರಿದಂತೆ ಜಯಲಕ್ಷ್ಮಿ ವಿಲಾಸ ಮ್ಯಾನ್ ಷನ್ ಅರಮನೆಯನ್ನೂ ತೋರಿಸಲಾಗುವುದು. ಜಗನ್ಮೋಹನ ಅರಮನೆ ದುರಸ್ತಿಯಲ್ಲಿರುವುದರಿಂದ ಈ ಬಾರಿ ಅದನ್ನು ಪಟ್ಟಿಯಿಂದ ಕೈಬಿಡಲಾಗಿದೆ.

 ದಸರಾ ಪ್ರವಾಸಿಗರಿಗಾಗಿ ಪ್ಯಾಲೆಸ್ ಆನ್ ವೀಲ್ಸ್ ಎಂಬ ಹೊಸ ಪ್ಲಾನ್! ದಸರಾ ಪ್ರವಾಸಿಗರಿಗಾಗಿ ಪ್ಯಾಲೆಸ್ ಆನ್ ವೀಲ್ಸ್ ಎಂಬ ಹೊಸ ಪ್ಲಾನ್!

ಇದರ ಬದಲಾಗಿ ಮತ್ತೊಂದು ಅರಮನೆ ಇಲ್ಲವೇ ಮತ್ತಾವುದಾದರೂ ಐತಿಹಾಸಿಕ ಸ್ಥಳವನ್ನು ಸೇರಿಸುವ ಬಗ್ಗೆ ಚಿಂತನೆ ನಡೆದಿದೆ.

ಅ.10ರಿಂದ ಪ್ಯಾಲೇಸ್ ಆನ್ ವ್ಹೀಲ್ಸ್' ಆರಂಭವಾಗಲಿದ್ದು, ವಿಜಯದಶಮಿಯಂದು ಮಾತ್ರ ಕಾರ್ಯನಿರ್ವಹಿಸುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಇದನ್ನು ನಡೆಸುತ್ತಿದ್ದು, ಅಂತರ್ಜಾಲದಲ್ಲಿ ಟಿಕೆಟ್ ಗಳನ್ನು ಬುಕ್ ಮಾಡಬಹುದು.

You have the opportunity to see 8 palaces in Mysore

ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಸುತ್ತಾಟ ಆರಂಭಿಸಿ, ಕೊನೆಯಲ್ಲಿ ಪ್ರವಾಸಿಗರನ್ನು ಈ ದೇವಸ್ಥಾನದ ಬಳಿಯೇ ಇಳಿಸಲಾಗುವುದು.

ಅರಮನೆಗಳನ್ನು ಪರಿಚಯಿಸುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಪ್ರವಾಸೋದ್ಯಮದ ಅಂಗವಾಗಿ ರಾಯಲ್ ರೂಟ್ಸ್' ಎಂಬ ಕಾರ್ಯಕ್ರಮವನ್ನೂ ಆಯೋಜಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ.

English summary
A unique program called 'Palace on Wheels' is being organized this year also in Mysore. You have the opportunity to see 8 palaces in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X