ಇನ್ಮುಂದೆ ಮೈಸೂರು ಮಲ್ಟಿಪ್ಲೆಕ್ಸ್ ಗಳಲ್ಲಿ ಸಿಗಲಿದೆ ಎಳನೀರು!

Posted By:
Subscribe to Oneindia Kannada

ಮೈಸೂರು, ಆಗಸ್ಟ್ 11 : ಇನ್ಮುಂದೆ ಮಲ್ಟಿಪ್ಲೆಕ್ಸ್ ಗಳಲ್ಲಿ ಕಡ್ಡಾಯವಾಗಿ ಎಳೆನೀರು ಮಾರಾಟ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ನಗರದ ಎಲ್ಲಾ ಚಿತ್ರ ಮಂದಿರದವರಿಗೂ ಖಡಕ್ ಆದೇಶ ನೀಡಿದ್ದಾರೆ.

ಮಲ್ಟಿಪ್ಲೆಕ್ಸ್ ನಲ್ಲಿ ಎಳೆನೀರು ಮಾರಾಟಕ್ಕೆ ಬಿಜೆಪಿ ಆಗ್ರಹ

ಮೈಸೂರಿನ ಎಲ್ಲಾ ಮಾಲ್, ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲೂ ಎಳನೀರು ಮಾರಾಟ ಮಾಡುವಂತೆ ಆದೇಶ ಹೊರಡಿಸಿದ್ದು, ಈ ಮೂಲಕ ಮೈಸೂರಿನಲ್ಲಿ ಇನ್ಮುಂದೆ ಮಲ್ಟಿಪ್ಲೆಕ್ಸ್ ಮಾಲ್ ಗಳಲ್ಲಿ ತಂಪು ಪಾನಿಯಗಳಿಗೆ ಬ್ರೇಕ್ ಬೀಳಲಿದೆ.

You can get tender coconut in Mysuru multiplexes!

ಈ ಕುರಿತು ಜಿಲ್ಲಾಧಿಕಾರಿ ಡಿ. ರಂದೀಪ್ ಮೈಸೂರು ಚಲನಚಿತ್ರ ಒಕ್ಕೂಟಕ್ಕೆ ಪತ್ರ ಬರೆದಿದ್ದಾರೆ. ಚಿಕ್ಕಮಗಳೂರು ಪರಿಷತ್ ಸದಸ್ಯ ಎಂ.ಕೆ.ಪ್ರಾಣೀಶ್ ತೋಟಗಾರಿಕೆ ಸಚಿವರಿಗೆ ರೈತರ ಹಿತಕ್ಕಾಗಿ ರಾಜ್ಯದ ಎಲ್ಲಾ ಮಾಲ್ ಗಳು ಮಲ್ಟಿಪ್ಲೆಕ್ಸ್ ಗಳಲ್ಲಿ ಕೂಲ್ ಡ್ರಿಂಕ್ಸ್ ಮಾರಾಟಕ್ಕೆ ಬ್ರೇಕ್ ಹಾಕಿ. ಮಾಲ್ ಗಳಲ್ಲಿ ಎಳನೀರು ಮಾರುವಂತೆ ಪತ್ರ ಬರೆದಿದ್ದರು.

ರುಚಿಕರ ಬೊಂಡಾ ಹಿಂದಿದೆ ಕೂಲಿಗಾರರ ಬೆವರಿನ ಹನಿ

You can get tender coconut in Mysuru multiplexes!
GST Rates 2017 : Multiplex stops online ticket booking from Saturday, July 1st | Oneindia Kannada

ಬರದಲ್ಲಿ ತತ್ತರಿಸಿರುವ ರೈತರ ನೆರವಿಗೆ ಧಾವಿಸಲು ತೋಟಗಾರಿಕೆ ಆಯುಕ್ತರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ತಕ್ಷಣ ರೈತರ ನೆರವಿಗೆ ಧಾವಿಸಿರುವ ಮೈಸೂರು ಜಿಲ್ಲಾಧಿಕಾರಿಗಳು ಮಾಲ್ ಗಳು ಮಲ್ಟಿಪ್ಲೆಕ್ಸ್ ಗಳಲ್ಲಿ ಕೂಲ್ ಡ್ರಿಂಕ್ಸ್ ಬದಲಿಗೆ ಎಳನೀರು ಮಾರಾಟ ಮಾಡಲು ಸೂಚನೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here’s good news to tender coconut lovers of the city, now Mysureans can sip tender coconut water at all Multiplexes in the city.
Please Wait while comments are loading...