ಮೈಸೂರಲ್ಲಿ ಹೊಸವರ್ಷಕ್ಕೆ ವಿತರಣೆಯಾಯ್ತು 2ಲಕ್ಷ ಲಡ್ಡು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 2 : ಮೈಸೂರಿನ ವಿಜಯ ನಗರ ಒಂದನೇ ಹಂತದಲ್ಲಿರುವ ಶ್ರೀಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ 4ಗಂಟೆಯಿಂದ ತಿರುಪತಿ ಮಾದರಿಯ ಲಡ್ಡುಗಳನ್ನು ಹಾಗೂ ಪುಳಿಯೋಗರೆಯನ್ನು ಭಕ್ತಾದಿಗಳಿಗೆ ಪ್ರೊ.ಭಾಷ್ಯಂ ಸ್ವಾಮೀಜಿ ವಿತರಿಸಿದರು.

ನೂತನ ವರ್ಷಾಚರಣೆಯ ಪ್ರಯುಕ್ತ ದೇವಸ್ಥಾನದಲ್ಲಿ ಲಡ್ಡು ವನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದ್ದು, ಭಾನುವಾರ ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತಾದಿಗಳು ಲಡ್ಡು ಪ್ರಸಾದವನ್ನು ಸ್ವೀಕರಿಸಿದರು.[ತಿರುಪತಿ ಲಡ್ಡುಗೂ ಪರವಾನಗಿಯೇ? ಗೋವಿಂದಾ ಗೋವಿಂದ]

Yoga Narasimha temple were delivered the 2 lakh laddu for new year

ಧರ್ನುಮಾಸ ವಾದ ಕಾರಣ ಬೆಳಿಗ್ಗೆ 4ಗಂಟೆಯಿಂದಲೇ ದೇವರಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವರಿಗೆ ಹತ್ತು ಕ್ವಿಂಟಾಲ್ ಪುಳಿಯೋಗರೆ, ಎರಡು ಲಕ್ಷ ಲಾಡು ನೈವೇದ್ಯ ಮಾಡಲಾಯಿತು.

ಬೆಳಗ್ಗೆಯಿಂದಲೇ ದೇವರ ದರ್ಶನಕ್ಕೆ ಮುಗಿಬಿದ್ದಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದು ಸಕ್ಕರೆ ಪೊಂಗಲ್, ಪುಳಿಯೊಗರೆಯನ್ನು ಸವಿದರು. ಜನರಿಗೆ ಎರಡು ಲಕ್ಷ ಲಾಡನ್ನು ಪ್ರೊ. ಭಾಷ್ಯ ಸ್ವಾಮೀಜಿ ವಿತರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Sri Yoga Narasimha temple were delivered the 2 lakh laddu as part of the new year.
Please Wait while comments are loading...