ಮೈಸೂರು: ಯೋಗ ದಿನಾಚರಣೆ ಕಾರ್ಯಕ್ರಮ ಬೇರೆಡೆಗೆ ಶಿಫ್ಟ್

Posted By:
Subscribe to Oneindia Kannada

ಮೈಸೂರು, ಜೂನ್ 14 : ಜೂನ್ 21ರಂದು 3ನೇ ಅರಮನೆಯ ಮುಂಭಾಗ ನಡೆಸಲು ತೀರ್ಮಾನಿಸಲಾಗಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಗಿದೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂನ್ 21ರಂದು 3ನೇ ಅರಮನೆಯ ಮುಂಭಾಗ ನಡೆಸಲು ತೀರ್ಮಾನಿಸಲಾಗಿದ್ದ ಕಾರ್ಯಕ್ರಮವನ್ನು ರೇಸ್ ಕೋರ್ಸ್ ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ವಿಶ್ವ ಯೋಗ ದಿನ: ರಾಜಪಥ್ ಹಿಂದಿಕ್ಕಿ ಗಿನ್ನೆಸ್ ದಾಖಲೆಗೆ ಮೈಸೂರು ಸಜ್ಜು

Yoga day; venue shifted from Mysuru palace to Race Course

ಈ ಮೊದಲು ಮೈಸೂರು ಅರಮನೆ, ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಕೃಷ್ಣರಾಜೇಂದ್ರ ವೃತ್ತ, ದೇವರಾಜ್ ಅರಸು ರಸ್ತೆ, ಮಹಾರಾಣಿ ಕಾಲೇಜು ವೃತ್ತ, ರಾಮಸ್ವಾಮಿ ವೃತ್ತ, ಮಹಾರಾಜ ಕಾಲೇಜು ಮೈದಾನ ಒವೆಲ್ ಮೈದಾನಗಳಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿತ್ತು.

ಸಿಂಗಲ್ ವೆನ್ಯೂ ಕೆಟಗರಿಯಲ್ಲಿ ಲಾರ್ಜೆಸ್ಟ್ ಯೋಗ ಕ್ಲಾಸ್ ದಾಖಲೆ ನಿರ್ಮಿಸಲು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಗೆ ನೋಂದಣಿ ಮಾಡಿಕೊಳ್ಳಲಾಗಿತ್ತು.

ಈ ಹಿಂದೆ ನಿಗದಿಪಡಿಸಿದ್ದ ಸ್ಥಳವನ್ನು ತಾಂತ್ರಿಕವಾಗಿ ಪರಿಗಣಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಒಂದೇ ಕಡೆ ಯೋಗ ಪ್ರದರ್ಶನ ರೇಸ್ ಕೋರ್ಸ್ ನಲ್ಲಿ ನಡೆಯಲಿದೆ.

ಗಿನ್ನಿಸ್ ಸಂಸ್ಥೆಯವರು ತಿಳಿಸಿದ ಹಿನ್ನೆಲೆ 139.30ಎಕರೆ ವಿಸ್ತೀರ್ಣವಿರುವ ರೇಸ್ ಕೋರ್ಸ್ ನಲ್ಲಿ ಮಧ್ಯಭಾಗದ ಪ್ರದೇಶವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಇನ್ನು ಕಾರ್ಯಕ್ರಮಕ್ಕೆ ಯೋಗಪಟು ಖುಷಿ, ಮೈಸೂರು ಸ್ವಚ್ಛತಾ ಅಭಿಯಾನದ ರಾಯಭಾರಿ ಜಾವಗಲ್ ಶ್ರೀನಾಥ್ ಪಾಲ್ಗೊಳ್ಳಲಿದ್ದಾರೆ.

ಇನ್ನು ಪಾರ್ಕಿಂಗ್ ವ್ಯವಸ್ಥೆಯನ್ನು ವಸ್ತು ಪ್ರದರ್ಶನ ಪ್ರಾಧಿಕಾರ, ಮೃಗಾಲಯದ ಪಾರ್ಕಿಂಗ್ ಆವರಣ, ಕಾರಂಜಿಕೆರೆ ಪಾರ್ಕಿಂಗ್ ಆವರಣ ಸೇರಿದಂತೆ ಹಲವು ಜಾಗಗಳನ್ನು ಗುರುತಿಸಲಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The sprawling 139.30 acre Mysuru Race Course land at the foot of the iconic Chamundi Hill will now be the new venue for guinness record attempt on International Yoga Day celebration on June 21.
Please Wait while comments are loading...