ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಕ್ಕದಲ್ಲೇ ಕುಳಿತಿದ್ದರೂ ಮುಖವನ್ನೇ ನೋಡದ ಬಿಎಸ್ವೈ

|
Google Oneindia Kannada News

ಮೈಸೂರು, ಮೇ 7: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಈಶ್ವರಪ್ಪ ಅವರ ನಡುವಿನ ಮನಸ್ತಾಪ, ಶನಿವಾರ ಆರಂಭವಾದ ಬಿಜೆಪಿ ಕಾರ್ಯಕಾರಿಣಿಯಲ್ಲೂ ಪ್ರತಿಫಲಿಸಿತು.

ನಗರದ ರಾಜೇಂದ್ರ ಕಲಾಮಂದಿರದಲ್ಲಿ ಬೆಳಗ್ಗೆ ಸುಮಾರು 10: 30ಕ್ಕೆ ಆರಂಭವಾದ ಕಾರ್ಯಕಾರಿಣಿಯಲ್ಲಿ ಇಬ್ಬರೂ ನಾಯಕರು ಅಕ್ಕಪಕ್ಕದಲ್ಲೇ ಕುಳಿತಿದ್ದರೂ ಪರಸ್ಪರ ಮಾತನಾಡಲಿಲ್ಲ.

Yeddyurappa-Eshwarappa's rift continues at BJP working committee meet

ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಆಗಮಿಸಿದ ಈಶ್ವರಪ್ಪ, ಯಡಿಯೂರಪ್ಪ ಅವರಿಗೆ ನಮಸ್ಕರಿಸಿದರೂ, ಯಡಿಯೂರಪ್ಪ ಕ್ಯಾರೇ ಅನ್ನಲಿಲ್ಲ. ಆನಂತರ, ಈಶ್ವರಪ್ಪ ಕೂಡ ಸುಮ್ಮನೇ ಕುಳಿತುಕೊಂಡರು. ಎಲ್ಲರ ಗಮನ ಈ ಇಬ್ಬರ ನಾಯಕರ ಮೇಲೇ ನೆಟ್ಟಿತ್ತು.

ರಾಜ್ಯಸಭೆ ಸದಸ್ಯತ್ವ ಬೇಡ: ಶ್ರೀನಿವಾಸ್ ಪ್ರಸಾದ್
ಇನ್ನು, ಇತ್ತೀಚೆಗಷ್ಟೇ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ವಿ.ಶ್ರೀನಿವಾಸ ಪ್ರಸಾದ್ ರಾಜ್ಯ ಕಾರ್ಯಕಾರಿಣಿ ಸಭೆಗೆ ಆಗಮಿಸಿದರು. ಬಿಜೆಪಿ ಸೇರಿದ ಮೇಲೆ, ಉಪಾಧ್ಯಕ್ಷನಾದ ತರುವಾಯ ಇದು ನಾನು ಪಾಲ್ಗೊಳ್ಳುತ್ತಿರುವ ಮೊದಲ ಕಾರ್ಯಕಾರಣಿ ಸಭೆ ಎಂದು ಅವರು ತಿಳಿಸಿದರು.

''ವರಿಷ್ಠರು ಉತ್ತಮ ಸ್ಥಾನ ನೀಡುವ ಕುರಿತು ಮಾತನಾಡಿದ್ದಾರೆ. ಆದರೆ ನನಗೆ ರಾಜ್ಯಸಭಾ ಸದಸ್ಯ ಸ್ಥಾನದ ಬಗ್ಗೆ ಆಸಕ್ತಿ ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ನಾನು ದೆಹಲಿಯಲ್ಲಿ 25 ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ. ಸಕ್ರಿಯವಾಗಿ ರಾಜಕಾರಣದಲ್ಲಿದ್ದು ಪಕ್ಷ ಸಂಘಟನೆ ಮಾಡುತ್ತೇನೆ'' ಎಂದರು.

ಪಕ್ಷದಲ್ಲಿ ನಾಯಕರ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ವರಿಷ್ಠರ ಗಮನದಲ್ಲಿ ಇದೆ. ಅವರು ಎಲ್ಲವನ್ನೂ ಸರಿ ಮಾಡುತ್ತಾರೆ ಎಂದು ತಿಳಿಸಿದರು.

English summary
Broken relation of BS Yeddyurappa and Eshwarappa reflected in BJP's two-days working committee meeting in Mysore which started on May 6th, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X