ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ 2 ಕ್ಷೇತ್ರಗಳಿಂದ ಸ್ಪರ್ಧಿಸಿದರೆ ತಪ್ಪೇನಿಲ್ಲ: ಯತೀಂದ್ರ

By Yashaswini
|
Google Oneindia Kannada News

Recommended Video

ಸಿದ್ದರಾಮಯ್ಯ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುವ ಬಗ್ಗೆ ತಮ್ಮ ಮಗ ಹೇಳಿದ್ದೇನು? | Oneindia Kannada

ಮೈಸೂರು, ಏಪ್ರಿಲ್ 13: ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ನಿಂತರೆ ತಪ್ಪೇನೂ ಇಲ್ಲ, ರಾಜಕೀಯ ಪ್ರವೇಶ ಮಾಡಿದ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಕೊನೆಯ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

2 ಕ್ಷೇತ್ರಗಳಲ್ಲಿ ಸ್ಪರ್ಧೆ: ಸಿದ್ದು, ಪರಂ ಬೇಡಿಕೆಗೆ ಹೈಕಮಾಂಡ್ ನಕಾರ?!2 ಕ್ಷೇತ್ರಗಳಲ್ಲಿ ಸ್ಪರ್ಧೆ: ಸಿದ್ದು, ಪರಂ ಬೇಡಿಕೆಗೆ ಹೈಕಮಾಂಡ್ ನಕಾರ?!

ಮೈಸೂರಿನ ಆಂದೋಲನ ವೃತ್ತದಲ್ಲಿ ಪ್ರಚಾರ ನಡೆಸಿ ಪ್ರಗತಿ ಪರರೊಂದಿಗೆ ವೇದಿಕೆ ಹಂಚಿಕೊಂಡು ಅವರು ಮಾತನಾಡಿದರು. ಸಂವಿಧಾನದ ಉಳಿವಿಗೆ ಪ್ರಗತಿ ಪರರು ಹೋರಾಟ ಮಾಡುತ್ತಿದ್ದಾರೆ. ಬಾದಾಮಿ ಕಾಂಗ್ರೆಸ್ ನಾಯಕರು ನಮ್ಮ ತಂದೆಯೇ ಸ್ಪರ್ಧಿಸಲಿ ಎಂದು ಒತ್ತಾಯ ಮಾಡಿದ್ದಾರೆ ಈ ಕಾರಣಕ್ಕೆ ಎರಡೂ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡುತ್ತಿದ್ದಾರೆ. ಚಾಮುಂಡೇಶ್ವರಿ ಹಾಗೂ ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದು ಯತೀಂದ್ರ ಹೇಳಿದ್ದಾರೆ.

Yathindra says no wrong in contesting my father in two constituencies

ಸಮಾಜದಲ್ಲಿ ಸಮಾನತೆ ತರುವುದು ಪ್ರಗತಿ ಪರರ ಜವಬ್ದಾರಿ, ಭಾರತದಲ್ಲಿ ಜಾತಿಯ ಹೆಸರಲ್ಲಿ ಸಮಾಜ ಒಡೆಯುವ ಪ್ರವೃತ್ತಿ ಮುಂದುವರೆದಿದೆ, ಈ ವ್ಯವಸ್ಥೆಯ ವಿರುದ್ದ ಹೋರಾಡಬೇಕಿದೆ, ಭಾರತ ಸಂವಿದಾನಕ್ಕೆ ಸಂಚಕಾರ ಬಂದಿದೆ. ಅಧಿಕಾರಕ್ಕೆ ಬಂದ ಪಕ್ಷದ ಸಚಿವರೇ ಸಂವಿಧಾನವನ್ನ ಬದಲಾಯಿಸುವ ಮಟ್ಟಕ್ಕೆ ಹೋಗಿದ್ದಾರೆ. ಇಂತಹ ಪರಿಸ್ಥಿಯಯಲ್ಲಿ ಶೋಷಿತ ಸಮಾಜ ಜಾಗೃತರಾಗಬೇಕು. ಕಾಂಗ್ರೆಸ್ ಪಕ್ಷ ಶೋಷಿತರ ಪರ ನಿಂತಿದೆ ಎಂದರು.

ಎರಡು ಕ್ಷೇತ್ರಗಳಿಂದ ಸಿದ್ದರಾಮಯ್ಯ ಕಣಕ್ಕಿಳಿಯುವುದು ಖಾತ್ರಿಎರಡು ಕ್ಷೇತ್ರಗಳಿಂದ ಸಿದ್ದರಾಮಯ್ಯ ಕಣಕ್ಕಿಳಿಯುವುದು ಖಾತ್ರಿ

ಪ್ರೋ ಕೆ ಎಸ್ ಭಗವಾನ್ ,ಮುಖ್ಯಮಂತ್ರಿ ಚಂದ್ರು, ಜನಾರ್ಧನ (ಜನ್ನಿ), ಅರವಿಂದ ಮಾಲಗತ್ತಿ , ಡಾ ಎಸ್ ಜಿ ಸಿದ್ದರಾಮಯ್ಯ ,ಡಾ ಮರುಳಸಿದ್ದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

English summary
Dr. Yathindra said no wrong in contesting my father Siddaramaiah in two constituencies. He was addressing election campaign in Mysuru on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X