ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್

|
Google Oneindia Kannada News

Recommended Video

ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್ | Oneindia Kannada

ಮೈಸೂರು, ಅಕ್ಟೋಬರ್.18 : ನವರಾತ್ರಿಯ ಅಂಗವಾಗಿ ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಮನೆಮಾಡಿದ್ದು, ಮೈಸೂರು ಅರಮನೆಯಲ್ಲೂ ಪೂಜೆ ನಡೆಯುತ್ತಿದೆ.

ರಾಜವಂಶಸ್ಥರಾದ ಶ್ರೀಕಂಠರಾಜೇ ಅರಸ್, ಮಹೇಂದ್ರ ರಾಜೇ ಅರಸ್ ಅವರಿಂದ ಪೂಜೆ ನಡೆಸಲಾಗುತ್ತಿದೆ. ದೇವಾಲಯದ ಪ್ರಾಂಗಣದಲ್ಲಿ ಆಯುಧಗಳನ್ನು ಇರಿಸಿ ಪೂಜೆ ಮಾಡಿದ ನಂತರ ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ಮಾಡಲಾಗುತ್ತದೆ.

ಮೈಸೂರು ದಸರಾ - ವಿಶೇಷ ಪುರವಣಿ

ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನಡೆದಿದ್ದು, ರಾಜವಂಶಸ್ಥರು ಬಳಸುತ್ತಿದ್ದ ಖಾಸಗಿ ಆಯುಧಗಳಿಗೆ ರಾಜಪೋಷಕ ತೊಟ್ಟಿರುವ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿದ್ದಾರೆ.

Yaduveer Wadiyar performed the Ayudha pooja at the palace of Mysore

ಜಯಾ ಮಾರ್ತಾಂಡ ದ್ವಾರದ ಮಾರ್ಗವಾಗಿ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಯೊಂದಿಗೆ ಹೋಗಿ ಪಟ್ಟದ ಕತ್ತಿ ಹಾಗೂ ಇನ್ನಿತರ ಕೆಲವು ಆಯುಧಗಳನ್ನು ತೊಳೆದು ವಿಶೇಷವಾಗಿ ಪೂಜಿಸಲಾಗುತ್ತದೆ.

ರಾಜವಂಶದ ವಿಶಾಲಾಕ್ಷಿದೇವಿ ಸ್ಥಿತಿ ಚಿಂತಾಜನಕ: ಬೆಂಗಳೂರಿಗೆ ಹೊರಟ ರಾಜಮಾತೆ ಪ್ರಮೋದಾದೇವಿರಾಜವಂಶದ ವಿಶಾಲಾಕ್ಷಿದೇವಿ ಸ್ಥಿತಿ ಚಿಂತಾಜನಕ: ಬೆಂಗಳೂರಿಗೆ ಹೊರಟ ರಾಜಮಾತೆ ಪ್ರಮೋದಾದೇವಿ

ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳಗ್ಗೆ 10 ರಿಂದ 10.35 ರ ಶುಭ ಲಗ್ನದಲ್ಲಿ ಆಯುಧ ಪೂಜೆ ಆರಂಭಿಸಿದ್ದು, ಕಲ್ಯಾಣ ತೊಟ್ಟಿಯಲ್ಲಿ ಆನೆ, ಕುದುರೆ, ಒಂಟೆ, ಹಸುಗಳಿಗೆ ಪೂಜೆ ಸಲ್ಲಿಸಿದ್ದಾರೆ. ರಾಜ ಮನೆತನದವರು ಬಳಸುವ ಆಯುಧಗಳಿಗೂ ಪೂಜೆ ಸಲ್ಲಿಸಲಿದ್ದಾರೆ.

ಅರಮನೆಯಲ್ಲಿ ಸರಸ್ವತಿ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್ಅರಮನೆಯಲ್ಲಿ ಸರಸ್ವತಿ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್

ನಂತರ ಕಲ್ಯಾಣ ತೊಟ್ಟಿಯಿಂದ ಮೆರವಣಿಗೆಯಲ್ಲಿ ಹೊರಟು ಕನ್ನಡಾಂಬೆ ದೇವಾಲಯದ ಆವರಣದಲ್ಲಿರುವ ಶನಿ ವೃಕ್ಷಕ್ಕೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆ ಪೂರ್ಣಗೊಳ್ಳಲಿದೆ.

Yaduveer Wadiyar performed the Ayudha pooja at the palace of Mysore

ಸಂಜೆ ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್​​​ನಲ್ಲಿ ರತ್ನ ಖಚಿತ ಸಿಂಹಾಸನಕ್ಕೆ ಅಳವಡಿಸಿರುವ ಸಿಂಹಗಳನ್ನು ವಿಸರ್ಜನೆ ಮಾಡಿ, ವಾಣಿ ವಿಲಾಸ ದೇವರ ಮನೆಯಲ್ಲಿ ಯದುವೀರ್ ಕಂಕಣ ವಿಸರ್ಜನೆ ಮಾಡಲಿದ್ದು ಇಂದಿನ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

408ನೇ ಮೈಸೂರು ದಸರಾ: ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ408ನೇ ಮೈಸೂರು ದಸರಾ: ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ

ಅಂದಹಾಗೆ ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬುಧವಾರ ರಾತ್ರಿ ಕಾಳರಾತ್ರಿ ಪೂಜೆ ನೆರವೇರಿಸಿದರು. ದುರ್ಗಾಷ್ಟಮಿ ಅಂಗವಾಗಿ ರಾತ್ರಿ 8 ರ ಸುಮಾರಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನವರಾತ್ರಿ ಪೂಜಾ ಕೈಂಕರ್ಯಗಳಲ್ಲಿ ಕಾಳರಾತ್ರಿ ಪೂಜಾ ಪ್ರಧಾನವಾದ ಆಚರಣೆಯಾಗಿದೆ.

Yaduveer Wadiyar performed the Ayudha pooja at the palace of Mysore

ಸಂಜೆ ದರ್ಬಾರ್ ನಂತರ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ, ಮಹಿಷಾಸುರನ ಸಂಹಾರ ನಡೆಯಿತು.

English summary
Maharaja Yaduveer Krishnadatta Chamaraja Wadiyar performed the Ayudha pooja at the palace of Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X