ಮಕ್ಕಳೊಂದಿಗೆ ಬೆರೆತು ಆನಂದಿಸಿದ ಯುವರಾಜ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜೂನ್ 18 : ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಮೈಸೂರಿನ ಯುವರಾಜ ಯದುವೀರ ಕೃಷ್ಣದತ್ತ ನರಸಿಂಹರಾಜ ಒಡೆಯರ್ ನಗರದ ವಿನಾಯಕ ನಗರದ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಬೆರೆತು ಅವರಿಗೆ ಪಾಠ ಹೇಳಿ ಖುಷಿಪಟ್ಟಿದ್ದಾರೆ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]

ಶುಕ್ರವಾರ ಜಾಲಿ ಮೂಡ್‍ನಲ್ಲಿದ್ದ ಯದುವೀರ್ ಬೆಳಿಗ್ಗೆ 10.40ರ ವೇಳೆಗೆ ಶಾಲೆಗೆ ಆಗಮಿಸಿದರು ಅವರನ್ನು ಶಿಕ್ಷಕ ವೃಂದ ಆತ್ಮೀಯವಾಗಿ ಸ್ವಾಗತಿಸಿತು. ಯುವರಾಜರು ಆಗಮಿಸಿದ ಸುದ್ದಿ ತಿಳಿದ ಸಾರ್ವಜನಿಕರು ಕುತೂಹಲದಿಂದ ಶಾಲೆಯತ್ತ ಧಾವಿಸತೊಡಗಿದರು. ವಿದ್ಯಾರ್ಥಿಗಳೊಂದಿಗೆ ಯುವರಾಜ ಸಂವಾದ ನಡೆಸುವುದನ್ನು ಸಾರ್ವಜನಿಕರು ನೋಡಲು ಹೊರಗೆ ಬೃಹತ್ ಪರದೆಯನ್ನು ಹಾಕಲಾಗಿತ್ತು. [ಯದುವೀರ್-ತ್ರಿಷಿಕಾ ವಿವಾಹಕ್ಕೆ ಮೈಸೂರು ಅರಮನೆ ಸಿಂಗಾರ]

yaduveer urs

ಶಾಲೆಯ ತರಗತಿಯೊಂದಕ್ಕೆ ಭೇಟಿ ನೀಡಿದ ಯದುವೀರ್ ಕಪ್ಪು ಹಲಗೆಯ ಮುಂದೆ ನಿಂತು ಸೀಮೆ ಸುಣ್ಣ ಹಿಡಿದು ಪಾಠ ಆರಂಭಿಸಿ ಬಿಟ್ಟರು. ಕನ್ನಡ ನಿರರ್ಗಳವಾಗಿ ಮಾತನಾಡಲು ಬಾರದಿದ್ದರೂ ಕನ್ನಡ ಮತ್ತು ಇಂಗ್ಗಿಷ್ ಸೇರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿರುವ ಸಾಮಾನ್ಯ ಜ್ಞಾನವನ್ನು ಪರೀಕ್ಷೆ ಮಾಡಿದರು. ಮೊದಲು ಪರಿಸರ ಮತ್ತು ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಹೇಳಿ ಅವರಿಗೆ ಹೇಳಿಕೊಟ್ಟು ಅರಿವು ಮೂಡಿಸಿದರು. [ಮೈಸೂರು : ಜನರ ನಿದ್ದೆಗೆಡಿಸಿದ ಶಾಲಾ ಕಾಂಪೌಂಡ್!]

ಈ ಸಂದರ್ಭ ವಿದ್ಯಾರ್ಥಿಗಳು ನಿವೇನ್ ಓದಿರೋದು? ಎಂದು ಪ್ರಶ್ನೆ ಎಸೆದರು. ಅದಕ್ಕೆ ಉತ್ತರಿಸಿದ ಯುವರಾಜ 'ನಾನು 12ನೇ ತರಗತಿವರೆಗೆ ಬೆಂಗಳೂರಿನಲ್ಲಿ ಬಳಿಕ ಅಮೇರಿಕಾದಲ್ಲಿ ಎಕಾನಮಿಕ್ಸ್ ಮತ್ತು ಇಂಗ್ಲೀಷ್ ಓದಿದೆ' ಎಂದು ಮಕ್ಕಳಿಗೆ ಅರ್ಥವಾಗುವಂತೆ ವಿವರಣೆ ಕೊಟ್ಟರು. [ಬೀಗ ಹಾಕಬೇಕಿದ್ದ ಕನ್ನಡ ಶಾಲೆ ಉಳಿದು, ಬೆಳೆದ ಕಥೆ!]

yaduveer

ತಕ್ಷಣ ನೀವು ಹೇಗೆ ಮಹಾರಾಜ ಆದ್ರಿ? ಎಂಬ ಪ್ರಶ್ನೆ ವಿದ್ಯಾರ್ಥಿಗಳಿಂದ ಬಂತು. ಅದಕ್ಕೆ ರಾಜಮಾತೆ ಪ್ರಮೋದಾದೇವಿ ಅವರು ತನ್ನನ್ನು ದತ್ತು ಪಡೆಯಲು ಕೇಳಿದರು. ಬಹುದೊಡ್ಡ ಜವಬ್ದಾರಿಯಾಗಿದ್ದು ಅದನ್ನು ಒಪ್ಪಿಕೊಂಡೆ ಎಂದು ಹೇಳಿದರು.

ಕಲಿಸು ಫೌಂಡೇಷನ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮುಂದೆ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡುವ ಉದ್ದೇಶ ಹೊಂದಿರುವುದಾಗಿ ಯದುವೀರ ಒಡೆಯರ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Children of the Government Primary School at Vinayakanagar, Mysuru city will get lessons from a special teacher on Friday. Scion of Mysuru royal family Yaduveer Krishnadatta Chamaraja Wadiyar turn a teacher and interact with the children.
Please Wait while comments are loading...