ಯದುವೀರ್-ತ್ರಿಷಿಕಾ ದಂಪತಿಗಳಿಗೆ ಶುಭ ಕೋರಿದ ಗಣ್ಯರು

Posted By:
Subscribe to Oneindia Kannada

ಮೈಸೂರು, ಜೂನ್ 27 : ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಸಿಂಗ್ ದಂಪತಿಗಳಿಗೆ ಹಲವು ಗಣ್ಯರು ಶುಭಾಶಯ ಕೋರಿದರು. ಸೋಮವಾರ ಬೆಳಗ್ಗೆ ಕರ್ಕಾಟಕ ಶುಭ ಲಗ್ನದಲ್ಲಿ ಮಹಾರಾಜರ ವಿವಾಹ ನಡೆಯಿತು.

ಸೋಮವಾರ ಸಂಜೆ 7ಗಂಟೆಗೆ ದರ್ಬಾರ್ ಹಾಲ್‍ನಲ್ಲಿ ಉಯ್ಯಾಲೆ ಕಾರ್ಯಕ್ರಮ ನಡೆಯಿತು. ನೂರಾರು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ನವದಂಪತಿಗಳಿಗೆ ಶುಭಾಶಯ ಸಲ್ಲಿಸಿದರು. [ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಯದುವೀರ್-ತ್ರಿಷಿಕಾ]

siddaramaiah

ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಅಂಬರೀಶ್ ನವ ದಂಪತಿಗಳಿಗೆ ಶುಭ ಕೋರಿದರು. ಕೇಂದ್ರ ಸರ್ಕಾರದ ಪರವಾಗಿ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು, ದಂಪತಿಗಳಿಗೆ ಶುಭ ಹಾರೈಸಿದರು. [ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]

yeddyurappa

ಚಿತ್ರ : ಶುಭ ಕೋರಿದ ಸಿದ್ದರಾಮಯ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Many elite guests including Chief Minister Siddaramaiah came to bless the Yaduveer Wadiyar And Trishika Kumari Singh at Mysuru on Monday, June 27th, 2016 evening.
Please Wait while comments are loading...