ಮೇ ನಲ್ಲಿ ಮಹಾರಾಜ ಯದುವೀರ್‌ ಒಡೆಯರ್‌ ವಿವಾಹ?

By: ಭಾಸ್ಕರ ಭಟ್
Subscribe to Oneindia Kannada

ಮೈಸೂರು, ಫೆಬ್ರವರಿ 29 : ಮೈಸೂರಿನ ಅಂಬಾ ವಿಲಾಸ ಅರಮನೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. 2016ರ ಮೇ ತಿಂಗಳಿನಲ್ಲಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ವಿವಾಹ ಅರಮನೆಯಲ್ಲಿ ನಡೆಯಲಿದೆ.

ರಾಣಿ ಪ್ರಮೋದಾದೇವಿ ಅವರು, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ಗಾಯಿತ್ರಿ ದೇವಿಯವರ ಪುತ್ರಿ ತ್ರಿಪುರಸುಂದರಿ ದೇವಿ ಮತ್ತು ಸ್ವರೂಪ್ ಆನಂದ್ ಗೋಪಾಲರಾಜ ಅರಸ್ ದಂಪತಿಗಳ ಪುತ್ರ, ಯದುವೀರ ಗೋಪಾಲರಾಜ ಅರಸ್ ಅವರನ್ನು ದತ್ತು ಪಡೆದಿದ್ದಾರೆ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]

yaduveer urs

2015ರ ಫೆಬ್ರವರಿ 23ರಂದು ದತ್ತು ಸ್ವೀಕಾರ ಸಮಾರಂಭ ಅರಮನೆಯಲ್ಲಿ ನಡೆದಿತ್ತು. ಮೇ 28ರಂದು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಪಟ್ಟಾಭಿಷೇಕ ಕಾರ್ಯಕ್ರಮ ನಡೆದಿತ್ತು. ನಂತರ ದಸರಾದಲ್ಲಿ ಅವರು ಖಾಸಗಿ ದರ್ಬಾರ್ ನಡೆಸಿದ್ದರು. [ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]

ದತ್ತು ಸ್ವೀಕಾರ ಸಮಾರಂಭ ನಡೆದ ನಂತರ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿವಾಹದ ಬಗ್ಗೆ ಮಾತನಾಡಿದ್ದರು. ವಿದ್ಯಾಭ್ಯಾಸದ ನಂತರ ಈ ಬಗ್ಗೆ ಚಿಂತನೆ ನಡೆಸುತ್ತೇನೆ ಎಂದು ಹೇಳಿದ್ದರು. [ಯುವರಾಣಿ ತ್ರಿಷಿಕಾ ಕಾಣದೆ ನಿರಾಶರಾದ ಜನ]

ರಾಜಸ್ಥಾನದ ಡುಂಗರಾಪುರ್ ಮನೆತನದ ಹರ್ಷವರ್ಧನ್ ಸಿಂಗ್, ಮಹೇಶ್ರೀ ಕುಮಾರಿ ಅವರ ಕಿರಿಯ ಪುತ್ರಿ ತ್ರಿಷಿಕಾ ಕುಮಾರಿ ಸಿಂಗ್ ಅವರ ಜೊತೆ ಯದುವೀರ್ ಒಡೆಯರ್ ಅವರ ವಿವಾಹ ನಿಶ್ಚಯವಾಗಿದೆ. ಮೇ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು ಮೇ 8 ಅಥವ 18ರಂದು ವಿವಾಹ ನೆರವೇರುವ ಸಾಧ್ಯತೆ ಇದೆ.[ಪಟ್ಟಾಭಿಷೇಕದ ಚಿತ್ರಗಳು]

ರಾಣಿ ಪ್ರಮೋದಾದೇವಿ ಅವರು ಅರಮನೆಯ ರಾಜಗುರುಗಳು, ಧರ್ಮಾಧಿಕಾರಿಗಳು, ಜ್ಯೋತಿಷಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ರಾಜಮನೆತನದ ಸದಸ್ಯರೊಂದಿಗೆ ಮತ್ತೊಮ್ಮೆ ಸುಧೀರ್ಘವಾಗಿ ಸಮಾಲೋಚನೆ ನಡೆಸಿದ ಬಳಿಕ ವಿವಾಹದ ದಿನಾಂಕದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಅರಮನೆಯಲ್ಲಿ ನಡೆದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ದತ್ತು ಸ್ವೀಕಾರ ಮತ್ತು ಪಟ್ಟಾಭಿಷೇಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡ ಜನರಿಗೆ, ಶೀಘ್ರದಲ್ಲಿಯೇ ಅವರ ವಿವಾಹ ಮಹೋತ್ಸವನ್ನು ನೋಡುವ ಅವಕಾಶ ದೊರೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amba Vilas Palace in Mysuru city is gearing up for another historical event, with the marriage of Yaduveer Krishnadatta Chamaraja Wadiyar likely to take place in 2016 May. Yaduveer is engaged to Trishika Kumari Singh, daughter of Harshavardhan Singh and Maheshri Kumari of Dungarpur royal family from Rajasthan.
Please Wait while comments are loading...