ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.21 ರಿಂದ ಮೈಸೂರು ದಸರಾ ಕುಸ್ತಿ ಪಂದ್ಯ ಆರಂಭ

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಮೈಸೂರು, ಸೆಪ್ಟೆಂಬರ್ 4: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರೆ ಆರಂಭವಾಗುವುದಕ್ಕೆ ಇನ್ನು ಕೆಲವೇ ದಿನ (ಸೆ.21 ರಿಂದ 30) ಬಾಕಿ ಇದೆ. ಈಗಾಗಲೇ ಅರಮನೆ ನಗರಿಯಲ್ಲಿ ಸಂಭ್ರಮದ ಜಾತ್ರೆ ಆರಂಭವಾಗಿದೆ.

ನಮ್ಮ ನಾಡಿನ ಜಾನಪದ ಸೊಗಡನ್ನು ಪ್ರತಿನಿಧಿಸುವ ಹಲವು ಕ್ರೀಡೆಗಳು ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿವೆ. ಅವುಗಳಲ್ಲಿ ಕುಸ್ತಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಈ ಬಾರಿ ದಸರೆ ಕುಸ್ತಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಲು ತೀರ್ಮಾನಿಸಲಾಗಿರುವುದು ವಿಶೇಷ. ಸೆ.೨೧ರಿಂದ ೨೬ರವರೆಗೆ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದ್ದು ಅವುಗಳ ವಿವರ ಇಂತಿದೆ.

ಮೈಸೂರು: ಮದಗಜಗಳ ಕಾಳಗಕ್ಕೆ ರಂಗೇರಿತ್ತು ಕುಸ್ತಿ ಅಖಾಡಮೈಸೂರು: ಮದಗಜಗಳ ಕಾಳಗಕ್ಕೆ ರಂಗೇರಿತ್ತು ಕುಸ್ತಿ ಅಖಾಡ

ಸೆ.21 ರಂದು ಬೆಳಿಗ್ಗೆ 8 ಗಂಟೆಯಿಂದ ಮೊದಲನೆ ಮೈಸೂರು ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಕುಸ್ತಿಪಟುಗಳು ದೇಹ ತೂಕವನ್ನು ತೆಗೆದುಕೊಳ್ಳುವ ಕಾರ್ಯವು ನಡೆಯಲಿದೆ. ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿಗಳು 2 ವಿಭಾಗಗಳಲ್ಲಿ ನಡೆಯಲಿದೆ.

Wrestling competition in Mysuru Dasara festival

ಮೊದಲನೆಯ ವಿಭಾಗ ಪುರುಷರ, ಕಿರಿಯರ ವಿಭಾಗ, 17 ವರ್ಷಕ್ಕಿಂತ ಕೆಳಪಟ್ಟವರಿಗೆ ಎರಡನೇ ವಿಭಾಗ ಪುರುಷರ ಹಿರಿಯ ವಿಭಾಗ 17 ವರ್ಷಕ್ಕಿಂತ ಮೇಲ್ಪಟ್ಟವರಿಗೆ. ಈ ಕುಸ್ತಿ ಪಂದ್ಯಾವಳಿಗಳು ತೂಕದ ಆಧಾರದ ಮೇಲೆ ನಡೆಯಲಿದೆ. ಒಟ್ಟು 8 ತೂಕಗಳಲ್ಲಿ ನಡೆಯಲಿದೆ. 50 ರಿಂದ 57 ಕೆ.ಜಿ., 61 ಕೆ.ಜಿ., 65 ಕೆ.ಜಿ., 70 ಕೆ.ಜಿ., 74 ಕೆ.ಜಿ., 86 ಕೆ.ಜಿ., 94 ಕೆ.ಜಿ. ಮತ್ತು 95+ .

ಸೆ.21 ರಂದು ಮಧ್ಯಾಹ್ನ 3-30 ಗಂಟೆಗೆ ದಸರಾ ಕುಸ್ತಿ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮ ಮತ್ತು ನಾಡಕುಸ್ತಿ ಪಂದ್ಯಾವಳಿ ನಡೆಯಲಿದೆ. ಸೆ.22 ರಂದು ಬೆಳಿಗ್ಗೆ 8 ಗಂಟೆಯಿಂದ ಮೊದಲನೇ ಮೈಸೂರು ವಿಭಾಗ ಮಟ್ಟದ ಬಾಲಕರ ಕುಸ್ತಿ ಪಂದ್ಯಾವಳಿ ನಡೆಯಲಿದೆ.

ಸೆ.22 ರಂದು ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಮಹಿಳಾ ಕುಸ್ತಿ ಪಟುಗಳ ದೇಹತೂಕ ತೆಗೆಯುವ ಕಾರ್ಯ ನಡೆಯಲಿದೆ. ಸೆ.23 ರಂದು ಬೆಳಿಗ್ಗೆ 8 ಗಂಟೆಯಿಂದ 9ನೇ ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ.

ಸೆ.23 ರಂದು ಬೆಳಿಗ್ಗೆ 8 ಗಂಟೆಯಿಂದ 35ನೇ ರಾಜ್ಯಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಪುರುಷರ ಮತ್ತು ಬಾಲಕರ ಕುಸ್ತಿ ಪಟುಗಳ ದೇಹತೂಕ ತೆಗೆಯುವ ಕಾರ್ಯ ನಡೆಯಲಿದೆ. ಸೆ.24 ಮತ್ತು ಸೆ.25 ರಂದು ಬೆಳಿಗ್ಗೆ 8 ಗಂಟೆಯಿಂದ 35ನೇ ರಾಜ್ಯಮಟ್ಟದ ಪುರುಷರ ಮತ್ತು ಬಾಲಕರ ಕುಸ್ತಿ ಪಂದ್ಯಾವಳಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಸೆ.25 ರಂದು ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಪಂಜ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಪುರುಷರ ಮತ್ತು ಮಹಿಳೆಯರ ದೇಹ ತೂಕ ತೆಗೆಯುವ ಕಾರ್ಯ ನಡೆಯಲಿದೆ. ಮದ್ಯಾಹ್ನ 1.30 ರಿಂದ ಮೊದಲನೇ ರಾಜ್ಯಮಟ್ಟದ ಪುರಷರ ಮತ್ತು ಮಹಿಳೆಯರ ಪಂಜ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ. ಈ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ಪುರುಷರಿಗೆ 11 ಅಂದರೆ; 55 ಕೆ.ಜಿ. ಗಿಂತ ಕಡಿಮೆ, 60, 65, 70, 75, 80, 85, 90, 100, 110+. ಮತ್ತು ಮಹಿಳೆಯರಿಗೆ 7 ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದೆ. ಅಂದರೆ 50 ಕ್ಕಿಂತ ಕಡಿಮೆ, 55, 60, 65, 70, 80, ಮತ್ತು 80, 80+ ವಿಭಾಗಗಳಲ್ಲಿ ನಡೆಯಲಿದೆ.

ಕುಸ್ತಿ ಪಂದ್ಯಾವಳಿಗಳ ಜೊತೆಗೆ ಕುಸ್ತಿ ಪಟುಗಳಿಗೆ ಕೆಲವೊಂದು ಸ್ಪರ್ಧೆಗಳು ಅಂದರೆ; ಬೆಟ್ಟ ಹತ್ತುವ ಸ್ಪರ್ಧೆ, ದಂಡ ಮತ್ತು ಸಪೋರ್ಟ್ ಹೊಡೆಯುವ ಬಗ್ಗೆ, ಗದೆ ತಿರುಗಿಸುವ ಬಗ್ಗೆ, ಗರ್ದನ್ ಕಲ್ಲು ಹೊತ್ತು ಬಸ್ಕಿ ಹೊಡೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.

ಸೆ.26 ರಂದು ಮೈಸೂರು ವಿಭಾಗ ಮಟ್ಟದ ಬಾಲಕರ, 35ನೇ ರಾಜ್ಯಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿಯ ಅಂತಿಮ ಕುಸ್ತಿ ಪಂದ್ಯಾವಳಿಗಳನ್ನು , ನಾಡಕುಸ್ತಿ ಪಂದ್ಯಾವಳಿ ಹಾಗೂ ಮೊದಲನೆ ಪಂಜ ಕುಸ್ತಿ ಪಂದ್ಯಾವಳಿಯ ಅಂತಿಮ ಪಂದ್ಯವಳಿಗಳು ನಡೆಯಲಿದೆ.

ಪ್ರತಿದಿನ ನಡೆಯುವ ನಾಡಕುಸ್ತಿ ಪಂದ್ಯಾವಳಿಯಲ್ಲಿ ಕನಿಷ್ಠ 1 ಅಥವಾ 2 ಮಹಿಳಾ ಕುಸ್ತಿಯನ್ನು ಸಹ ನಡೆಸಲು ತೀರ್ಮಾನಿಸಲಾಯಿತು. ಸ್ಥಳೀಯ ಕುಸ್ತಿ ಪಟುಗಳಿಗೆ ಪ್ರೋತ್ಸಾಹಿಸಲು ಹಾಗೂ ಹೊಸ ಕುಸ್ತಿ ಪ್ರೇಕ್ಷಕರನ್ನು ಹುಟ್ಟು ಹಾಕುವ ಸಲುವಾಗಿ, ಈ ವರ್ಷ ವಿಶೇಷವಾಗಿ ನಗರದ ನಾಲ್ಕು ದಿಕ್ಕುಗಳಲ್ಲಿ [ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗೆ] ನಾಡಕುಸ್ತಿ ಪಂದ್ಯಾವಳಿಯನ್ನು ಸ್ಥಳೀಯ ಹಿರಿಯ ಕುಸ್ತಿಪಟುಗಳು ತೀರ್ಪುಗಾರರು ಹಾಗೂ ಇತರರ ಸಹಕಾರದಿಂದ ನಡೆಸಲು ತೀರ್ಮಾನಿಸಲಾಯಿತು.

ಇದರನ್ವಯ ಕೆ.ಆರ್. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ, ಅಶೋಕಪುರಂನಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೆ.ಜಿ. ಕೊಪ್ಪಲಿನಲ್ಲಿ, ಎನ್‍ಆರ್. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ, ರಾಜೀವ್ ‍ನಗರದಲ್ಲಿ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತೊಣಚಿಕೊಪ್ಪಲಿನಲ್ಲಿ ನಡೆಯಲಿದೆ

ಈ ವರ್ಷ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವವರಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ. ಈ ವರ್ಷ ಕುಸ್ತಿ ಪಟುಗಳು ತೀರ್ಪುಗಾರರು ಸ್ವಯಂ ಸೇವಕರು ಹಾಗೂ ಇತರರಿಗೆ ಮತ್ತು ಸರಬರಾಜುದಾರರ ಮತ್ತು ವಿವಿಧ ಸೇವೆಯನ್ನು ಒದಗಿಸಿರುವವರಿಗೆ ಡಿಜಿಟಲ್ ಮೂಲಕ ಹಣ ಪಾವತಿಯನ್ನು ಮಾಡಲಾಗುತ್ತದೆ. ನಗದು ಅಥವಾ ಚೆಕ್ ಮೂಲಕ ಯಾವುದೆ ಪಾವತಿಯನ್ನು ಮಾಡಲಾಗುವುದಿಲ್ಲ.

ಆದ್ದರಿಂದ ಕುಸ್ತಿ ಸಮಿತಿಯಿಂದ ಹಣ ಸ್ವೀಕರಿಸುವವರು ಕಡ್ಡಾಯವಾಗಿ ತಾವು ಹೊಂದಿರುವ ಬ್ಯಾಂಕ್ ಖಾತೆಯ ವಿವರ ಅಂದರೆ ಬ್ಯಾಂಕ್ ನ ಹೆಸರು , ವಿಳಾಸ ಹಾಗೂ ಬ್ಯಾಂಕ್ ಕೋಡ್, ಬ್ಯಾಂಕಿನ ಐ.ಎಫ್.ಎಸ್.ಸಿ ಕೋಡ್‍ನ ಸಂಖ್ಯೆ, ಖಾತೆಯ ವಿವರ (ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆ) ಸಂಖ್ಯೆಯನ್ನು ಕಡ್ಡಾಯವಾಗಿ ಸಮಿತಿವತಿಯಿಂದ ನೀಡುವ ನಮೂನೆಯಲ್ಲಿ ನೀಡತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಕುಸ್ತಿ ಉಪಸಮಿತಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ, ಕಾವೇರಿ ನೀರಾವರಿ ನಿಗಮ ಮಂಜುನಾಥಪುರ ಗೋಕುಲಂ ಇಲ್ಲಿ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಅಥವಾ ದೂರವಾಣಿ ಸಂ : 0821 6554955 ಅನ್ನು ಸಂಪರ್ಕಿಸುವುದು. ಅವಶ್ಯಕತೆ ಇದ್ದಲ್ಲಿ ಫ್ಯಾಕ್ಸ್ 0821 2424291

ಇಮೇಲ್ : [email protected] | ವೆಬ್ಸೈಟ್. www.mysoredasara.gov.in ಅನ್ನು ಉಪಯೋಗಿಸಬಹುದು.

English summary
Wrestling competition which takes place every year in Mysuru Dasara, will be started from September 21st to 30th this year. Here is a time table of Wrestling competition of Dasara festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X