ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಬೇಕರಿಯೊಂದರ ಕೇಕ್ ನಲ್ಲಿ ಹುಳು

By Yashaswini
|
Google Oneindia Kannada News

ಮೈಸೂರು, ಜುಲೈ 17: ಬೇಕರಿ ಅಂದರೆ ಸಾಕು, ಅಲ್ಲಿ ತರಹೇವಾರಿ ತಿಂಡಿಗಳದ್ದೇ ಕಾರುಬಾರು. ಅದರಲ್ಲೂ ಇಂತಹ ಬೇಕರಿಗಳಲ್ಲಿ ಸಿಗುವ ಕೇಕ್ ಅಂದರೆ ಯಾರಿಗೆ ತಾನೇ ಹಿಡಿಸೋಲ್ಲ ಹೇಳಿ? ಆದರೆ ಇನ್ನು ಮುಂದೆ ಬೇಕರಿಯ ಪದಾರ್ಥಗಳನ್ನು ತಿನ್ನೋದಕ್ಕೆ ಹೋಗೋಕೂ ಮೊದಲು ನಿಮ್ಮ ಆರೋಗ್ಯದ ಕುರಿತು ಎಚ್ಚರವಹಿಸಿ. ಯಾಕೆಂದರೆ ಹುಳು ಹುಪ್ಪಡಿಗಳಿರಬಹುದು ಎಚ್ಚರ. ಸರಸ್ವತಿಪುರಂನಲ್ಲಿರುವ ಬೇಕರಿಯೊಂದರ ಮಳಿಗೆಯಲ್ಲಿನ ಕೇಕೊಂದರಲ್ಲಿ ಹುಳುಹುಪ್ಪಡಿಗಳು ಪತ್ತೆಯಾಗಿವೆ.

ತುಂಬಾ ವರ್ಷಗಳಿಂದ ಸರಸ್ವತಿಪುರಂನಲ್ಲಿರುವ ಬೇಕರಿಯೊಂದರಲ್ಲಿ ಗ್ರಾಹಕರೊಬ್ಬರು ಕೇಕ್ ಖರೀದಿಗೆಂದು ಬಂದಿದ್ದರು. ಕೇಕ್ ನ್ನು ತೆರೆದು ನೋಡಲಾಗಿದೆ. ಅದರಲ್ಲಿ ಹುಳುಗಳು ಮೊಟ್ಟೆ ಇಟ್ಟಿದ್ದು, ಮರಿಗಳು ಹೊರಬರುತ್ತಿವೆ. ಇದರಿಂದ ಆಕ್ರೋಶಗೊಂಡ ಗ್ರಾಹಕರು ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ರಿಗೆ, ಪಾಲಿಕೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

Worms found in cake Mysuru Saraswatipuram Bakery

ಈಗಾಗಲೇ ಮೈಸೂರಿನಲ್ಲಿ ಅನಾರೋಗ್ಯ ಕಾಡುತ್ತಿದ್ದು ಈ ರೀತಿಯ ತಿಂಡಿ ತಿನಿಸುಗಳನ್ನು ತಿಂದಲ್ಲಿ ಮತ್ತಷ್ಟು ರೋಗ ಉಲ್ಬಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ

Worms found in cake Mysuru Saraswatipuram Bakery
English summary
Whenever you want to eat cake at a bakery, be careful about your health. In a cake at Bakery, Saraswatipuram, Mysuru worms have found! A person who bought the cake had filed a complaint against bakery now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X