ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಸರ್ಕಾರದ ಜನಸ್ನೇಹಿ ನ್ಯಾಪ್ ಕಿನ್ 'ಶುಚಿ' ಯೋಜನೆ

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 9: ಕೇಂದ್ರ ಸರ್ಕಾರ ಜಾರಿಗೆ ತಂದ ಒಂದು ದೇಶ ಒಂದು ತೆರಿಗೆ ಕಾಯಿದೆಯಲ್ಲಿ ಮಹಿಳೆಯರ ನ್ಯಾಪ್ ಕಿನ್ ಅನ್ನು ಲಕ್ಸುರಿ ತೆರಿಗೆ ವ್ಯಾಪ್ತಿಗೆ ಸೇರಿಸಿದ ಕ್ರಮ ವಿರೋಧಕ್ಕೆ ತುತ್ತಾಗಿದೆ. ಆದರೆ, ರಾಜ್ಯ ಸರ್ಕಾರ 2013-2014ನೇ ಸಾಲಿನಿಂದಲೇ ಉಚಿತವಾಗಿ ನ್ಯಾಪ್ ಕಿನ್ ವಿತರಿಸುತ್ತ ಮಹಿಳಾ ಸ್ನೇಹಿಯಾಗಿದೆ.

ಸ್ಯಾನಿಟರಿ ನ್ಯಾಪ್ ಕಿನ್ ಬಳಕೆ ಬೇಡ ಎಂದು ಹೇಳಿಲ್ಲː ಮಾಳವಿಕಾಸ್ಯಾನಿಟರಿ ನ್ಯಾಪ್ ಕಿನ್ ಬಳಕೆ ಬೇಡ ಎಂದು ಹೇಳಿಲ್ಲː ಮಾಳವಿಕಾ

ಹೆಣ್ಣುಮಕ್ಕಳ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಹಾಗೂ 14ರಿಂದ 19 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಜನನಾಂಗದ ಸೋಂಕು ತಗುಲಿ ಗರ್ಭಕೋಶದ ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬ ಆರೋಗ್ಯ ಇಲಾಖೆಯ ವರದಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2014ರಲ್ಲಿ 'ಶುಚಿ' ಯೋಜನೆ ಆರಂಭಿಸಿತು.

Women friendly 'Shuchi' Scheme has been implemented by state government.

ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ, ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿನ 6ನೇ ತರಗತಿಯಿಂದ ಎಸ್‍ಎಸ್‍ ಎಲ್ ಸಿ ವಿದ್ಯಾರ್ಥಿನಿಯರಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯ ಕರ್ತೆಯರ ಮೂಲಕ 19 ವರ್ಷದ ಒಳಗಿನ ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳಿಗೆ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಡಿ ಬರುವ ಶಾಲೆಗಳ ವಿದ್ಯಾರ್ಥಿನಿಯರಿಗೆ ಉಚಿತವಾಗಿ ನ್ಯಾಪ್ ಕಿನ್ ನೀಡಲಾಗುತ್ತಿದೆ.

6.30 ಲಕ್ಷ ನ್ಯಾಪ್ ಕಿನ್ ವಿತರಣೆ:
ಋತುಸ್ರಾವದ ಶುಚಿತ್ವದ ಬಗ್ಗೆ ಅರಿವು ಮೂಡಿಸಲು ಸರ್ಕಾರ ಆರಂಭಿಸಿರುವ 'ಶುಚಿ' ಯೋಜನೆ ಅಡಿ ಮೈಸೂರು ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ ಒಟ್ಟು 6.30 ಲಕ್ಷ ನ್ಯಾಪ್ಕಿನ್ ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಕಳೆದ ಸಾಲಿನಲ್ಲಿ ಮೈಸೂರು ತಾಲ್ಲೂಕು, ನಗರ ಸೇರಿ ಒಟ್ಟು 2,28,600 ನ್ಯಾಪ್ಕಿನ್, ತಿ.ನರಸೀಪುರ, ನಂಜನಗೂಡು, ಹುಣಸೂರು ಮತ್ತು ಕೆ.ಆರ್.ನಗರ ಪತಿ ತಾಲ್ಲೂಕುಗಳಿಗೆ 75,600 ಹಾಗೂ ಎಚ್.ಡಿ.ಕೋಟೆ ಮತ್ತು ಪಿರಿಯಾಪಟ್ಟಣ ತಾಲ್ಲೂಕುಗಳಿಗೆ 50,400 ನ್ಯಾಪ್ಕಿನ್ ಗಳನ್ನು ಆರೋಗ್ಯ ಇಲಾಖೆ ವತಿಯಿಂದ ವಿತರಣೆ ಮಾಡಲಾಗಿದೆ.

2.80 ಲಕ್ಷ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ನೀಡಲು ಪ್ರಸ್ತಾವನೆ:
ರಾಜ್ಯ ಸರ್ಕಾರ ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿನಿಯರಿಗೆ ಶುಚಿ ಯೋಜನೆ ಯಡಿ ಉಚಿತವಾಗಿ ನ್ಯಾಪ್ಕಿನ್ ವಿತರಣೆ ಮಾಡುತ್ತಿದೆ. ಅದನ್ನು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೂ ವಿಸ್ತರಣೆ ಮಾಡಬೇಕು. ಅನಂತರ ಗ್ರಾಮಾಂತರ ಪ್ರದೇಶದ ಎಲ್ಲಾ ಮಹಿಳೆಯರಿಗೂ ಪಡಿತರ ವ್ಯವಸ್ಥೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಚಿತ ನ್ಯಾಪ್ಕಿನ್ ವಿತರಿಸಲು ಕ್ರಮವಹಿಸಬೇಕು ಎನ್ನುತ್ತಾರೆ ಮಹಿಳಾ ವೈದ್ಯರು.

2017- 2018ನೇ ಸಾಲಿನಲ್ಲಿ 6 ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ 2,18,693 ಮತ್ತು ಪಿಯುಸಿಯ 64ಸಾವಿರ ಯುವತಿಯರಿಗೆ ನ್ಯಾಪ್ಕಿನ್ ವಿತರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಶುಶ್ರೂಷಾಧಿಕಾರಿ ಕಾವೇರಿ. 2013-14ನೇ ಸಾಲಿಗಿಂತ ಮುಂಚೆ ಆಶಾ ಕಾರ್ಯಕರ್ತೆಯರ ಮೂಲಕ ಕಡಿಮೆ ದರದಲ್ಲಿ ನ್ಯಾಪ್ಕಿನ್ ವಿತರಣೆ ಮಾಡಲಾಗುತ್ತಿದ್ದು, 2013- 14ನೇ ಸಾಲಿನಿಂದ 'ಶುಚಿ' ಯೋಜನೆಯಡಿ ಹೆಣ್ಣು ಮಕ್ಕಳಿಗೆ ಉಚಿತ ನ್ಯಾಪ್ಕಿನ್ ನೀಡಲಾಗುತ್ತಿದೆ.

ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಸಮನ್ವಯ ಸಮಿತಿ ರಚಿಸಿಕೊಂಡು ನ್ಯಾಪ್ಕಿನ್ ವಿತರಣೆ ಮಾಡಲಾಗುತ್ತಿದೆ. ಈ ಸಾಲಿನ ನ್ಯಾಪ್ಕಿನ್ ಗಳು ಸದ್ಯದಲ್ಲಿಯೇ ಬರಲಿದ್ದು, ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.ಒಟ್ಟಾರೆ ಹೆಣ್ಣು ಮಕ್ಕಳ ಆರೋಗ್ಯದ ಕಾಳಜಿ ದೃಷ್ಟಿಯಿಂದ ಹೊರತಂದಿರುವ ಈ ಯೋಜನೆ ಜನಸ್ನೇಹಿಯಾಗಿರುವದರಲ್ಲಿ ಸಂಶಯವಿಲ್ಲ.

English summary
The state government of Karanataka is women-friendly in distributing napkins for free from 2013-2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X