ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅ.11 ರಿಂದ ಮಹಿಳಾ ದಸರಾ: ರಂಜಿಸಲಿವೆ ಮನಸೂರೆಗೊಳ್ಳುವ ಕಾರ್ಯಕ್ರಮಗಳು

|
Google Oneindia Kannada News

ಮೈಸೂರು, ಸೆಪ್ಟೆಂಬರ್.14: ಸಾಂಸ್ಕೃತಿಕ ಹಬ್ಬ ದಸರೆ ಎಲ್ಲರ ಕೈ ಬೀಸಿ ಕರೆಯುತಿದೆ. ಸಂಭ್ರಮದ ಹೊನಲು ಸೂಸುವ ನವರಾತ್ರಿ ಉತ್ಸವಕ್ಕೆ ತೆರೆಮರೆಯಲ್ಲಿ ಸಿದ್ಧಗೊಳ್ಳುತ್ತಿರುವ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೂ ಈ ಬಾರಿ ಹಲವು ವಿಶೇಷಗಳನ್ನು ಒಳಗೊಂಡ ದಸರಾ ಆಚರಣೆಗೆ ಸಿದ್ಧತೆ ನಡೆದಿದೆ.

ಅ.11 ರಿಂದ ಐದು ದಿನಗಳ ಕಾಲ ಮಹಿಳಾ ಹಾಗೂ ಮಕ್ಕಳ ದಸರಾ ನಡೆಯಲಿದ್ದು, ಐದು ದಿನಗಳ ಕಾಲ ವಿವಿಧ ಸ್ಪರ್ಧೆಗಳ ಸುಗ್ಗಿ ನೋಡುಗರ, ಭಾಗವಹಿಸುವವರ ಕಣ್ಮನ ಸೆಳೆಯಲಿದೆ.

ದಸರಾ ಕ್ರೀಡೆಗೆ ಹೊಸ ಸ್ವರೂಪ: ವಿಭಿನ್ನವಾಗಿ ನಡೆಸಲು ಭರ್ಜರಿ ತಯಾರಿದಸರಾ ಕ್ರೀಡೆಗೆ ಹೊಸ ಸ್ವರೂಪ: ವಿಭಿನ್ನವಾಗಿ ನಡೆಸಲು ಭರ್ಜರಿ ತಯಾರಿ

ಅ.11ರಂದು ಭಾವೈಕ್ಯತೆಯ ಹೆಸರಿನಲ್ಲಿ ನಡೆಯುವ ದಸರೆಯಲ್ಲಿ 12ಕ್ಕೂ ಹೆಚ್ಚು ಮಹಿಳಾ ತಂಡಗಳು ವಿವಿಧ ರಾಜ್ಯಗಳಿಂದ ಅಗಮಿಸಲಿದ್ದು , ಮೈಸೂರಿನ ಬಾಲಕಿಯರ ಮಂದಿರದ ಮಕ್ಕಳು ವಿವಿಧ ನೃತ್ಯ ಪ್ರಕಾರಗಳನ್ನು ಮಹಿಳಾ ದಸರೆಯಲ್ಲಿ ಉಣಬಡಿಸಲಿದ್ದಾರೆ.

Women and children dasara will be held for five days from October 11

ಸಂಜೆ ವೇಳೆಗೆ ಸ್ಥಳೀಯ ಮಹಿಳೆಯರು ಹಾಗೂ ಮಕ್ಕಳಿಂದ ವಿವಿಧ ರೀತಿಯ ಕಲಾ, ಮನರಂಜನಾ ಕಾರ್ಯಕ್ರಮಗಳು. ಅ.12ರಂದು ಚಿಣ್ಣರ ದಸರೆ ಉದ್ಘಾಟನೆಗೊಳ್ಳಲಿದ್ದು, ಬಾಂಧವ್ಯ' ಎಂಬ ಕಾರ್ಯಕ್ರಮದ ಮೂಲಕ ಅಮ್ಮ ಹಾಗೂ ಮಕ್ಕಳ ರಾಂಪ್ ವಾಕ್ ಸ್ಪರ್ಧೆ ಎಲ್ಲರನ್ನು ರಂಜಿಸಲಿದೆ. ಚಿಣ್ಣರ ಬೀಬಿ ಶೋ' ಸಹ ಅಂದು ನಡೆಯಲಿದೆ.

ಅ.13ರಂದು ವಿಶೇಷಚೇತನರು ಮಧ್ಯಾಹ್ನ ಮಂಗಳಮುಖಿಯರು ಸಂಜೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಅ.14ರಂದು ಜಾನಪದ ಸಿರಿ ಹೆಸರಿನಲ್ಲಿ ಸ್ಥಳೀಯ ಮಹಿಳಾ ಜಾನಪದ ಕಲಾತಂಡಗಳ ಕಲಾ ಪ್ರದರ್ಶನವಿರುತ್ತದೆ.

ಈ ಬಾರಿ ಎರಡು ಸಲ ನಡೆಯಲಿದೆ ವಿಶ್ವವಿಖ್ಯಾತ ಜಂಬೂ ಸವಾರಿ!ಈ ಬಾರಿ ಎರಡು ಸಲ ನಡೆಯಲಿದೆ ವಿಶ್ವವಿಖ್ಯಾತ ಜಂಬೂ ಸವಾರಿ!

ಇದರಲ್ಲಿ ಸ್ಥಳೀಯ ಸ್ವ ಸಹಾಯ ಮಹಿಳಾ ಸಂಘಗಳು, ಕಾಲೇಜು ಯುವತಿಯರ ತಂಡವೂ ಭಾಗವಹಿಸಬಹುದಾಗಿದೆ. ಕಿಶೋರಿಯರು, ಯುವತಿಯರು, ಮಹಿಳೆಯರೆಂಬ ಮೂರು ವಿಭಾಗದಲ್ಲಿ ಮಿಸಸ್ ದಸರಾ ಹೆಸರಿನಲ್ಲಿ ಫ್ಯಾಷನ್ ಶೋ ಜನಾಕರ್ಷಿಸಲಿದೆ.

ಅ.15ರ ಕೊನೆಯ ದಿನದಂದು ಹಾಸ್ಯ -ಲಾಸ್ಯ, ಸಾಮೂಹಿಕ ಮಹಿಳೆಯರು, ಮಕ್ಕಳು ಹಾಗೂ ಯುವತಿಯರ ಸಾಂಸ್ಕೃತಿಕ ನೃತ್ಯ, ಸಂಗೀತ ಕಾರ್ಯಕ್ರಮಗಳು ಎಲ್ಲರನ್ನೂ ಸೆಳೆಯಲಿವೆ. ಹೀಗೆ ಐದು ದಿನಗಳ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆ ಎಲ್ಲರನ್ನೂ ರಂಜಿಸಲಿವೆ.

 ಮೈಸೂರು: ಈ ಬಾರಿ ದಸರಾ ಪ್ರಮುಖ ಆಕರ್ಷಣೆ ಟೆಂಟ್ ಟೂರಿಸಂ ಮೈಸೂರು: ಈ ಬಾರಿ ದಸರಾ ಪ್ರಮುಖ ಆಕರ್ಷಣೆ ಟೆಂಟ್ ಟೂರಿಸಂ

ಕೌಶಲ ತರಬೇತಿ
ಸಂಭ್ರಮದೊಟ್ಟಿಗೆ ಮಹಿಳೆಯರ ಸಬಲೀಕರಣದ ಬಗ್ಗೆಯೂ ಇಲಾಖೆ ಚಿಂತನೆ ನಡೆಸಿದ್ದು, ಇದೇ ಪ್ರಥಮ ಬಾರಿಗೆ ಹೊಸದಿಲ್ಲಿಯಿಂದ 10 ಮಂದಿ ಆಗಮಿಸುತ್ತಿದ್ದಾರೆ. ಮಹಿಳೆಯರಿಗೆ ಕಸೂತಿ, ಕರಕುಶಲ, ಹ್ಯಾಂಡ್ ಕ್ರಾಫ್ಟ್ ಕಲೆಗಳ ಕುರಿತು ಸ್ಥಳದಲ್ಲೇ ತರಬೇತಿ ನೀಡಲಿದೆ. ಆ ಮೂಲಕ ಸ್ಥಳೀಯ ಸಾಧಕ ಮಹಿಳೆಯರಿಂದಲೂ ತರಬೇತಿ ಕೊಡಿಸುವ ಚಿಂತನೆ ನಡೆಸಿದೆ.

ಮಿನಿ ಆಹಾರ ಮೇಳ
ಮಹಿಳಾ ದಸರೆಯನ್ನು ಮತ್ತಷ್ಟು ಜಗಮಗಿಸುವ ನಿಟ್ಟಿನಲ್ಲಿ ಮಹಿಳೆಯರಿಂದಲೇ ತಯಾರಿಸಲ್ಪಟ್ಟ ಆಹಾರ ಪ್ರದರ್ಶನ, ಮಾರಾಟಕ್ಕೆ ಈ ಬಾರಿ ಹೆಚ್ಚಿನ ಆದ್ಯತೆ ಸಿಗಲಿದೆ. ಮಹಿಳೆಯರಿಂದ ತಯಾರಿಸಲ್ಪಟ್ಟ ಆಹಾರ ಮೇಳದ ರುಚಿಯನ್ನು ಈ ಬಾರಿ ಸವಿಯಬಹುದಾಗಿದೆ.

ಪ್ರತಿ ಬಾರಿ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಎದುರು ರಂಗೋಲಿ ಸ್ಪರ್ಧೆ ನಡೆಸುವುದು ಸಾಮಾನ್ಯ. ರಂಗೋಲಿ ಸ್ಪರ್ಧೆಯನ್ನು ಮತ್ತಷ್ಟು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಅರಮನೆ ಅಂಗಳದೊಳಗೆ ರಂಗೋಲಿ ಸ್ಪರ್ಧೆ ನಡೆಸಲು ಚಿಂತನೆ ನಡೆದಿದೆ.

English summary
Women and children dasara will be held for five days from October 11. More than 12 women teams will be come from various states to Dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X