ಗಂಡನ ಸರಸಸಲ್ಲಾಪದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ತನ್ನ ಗಂಡ ತನ್ನ ಮನೆಯಲ್ಲೇ ಮತ್ತೊಬ್ಬಳೊಂದಿಗೆ ಸರಸಸಲ್ಲಾಪ ನಡೆಸುತ್ತಿದ್ದುದನ್ನು ಕಂಡು ಮನನೊಂದು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.

ಮಹದೇವಪುರ ನಿವಾಸಿ ನಯಾಜ್ ಎಂಬಾತನ ಪತ್ನಿ ರತ್ನ (27) ಎಂಬಾಕೆಯೇ ನೇಣಿಗೆ ಶರಣಾದ ದುರ್ದೈವಿ. ರತ್ನ ನಯಾಜ್‍ನನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದಳು.[ಕೆ.ಆರ್.ಪೇಟೆ: ಪತಿಯ ಕಿರುಕುಳಕ್ಕೆ ಬೇಸತ್ತು ಧರಣಿ ಕೂತ ಪತ್ನಿ]

ಈಕೆಗೆ ಎರಡು ಮಕ್ಕಳನ್ನು ಕರುಣಿಸಿದ್ದ ನಯಾಜ್ ಇವಳಲ್ಲದೆ ಇನ್ನಿಬ್ಬರು ಹಿಂದೂ ಯುವತಿಯರನ್ನು ಮದುವೆ ಮಾಡಿಕೊಂಡು ಅವರನ್ನು ಬೇರೆ ಮನೆಯಲ್ಲಿ ಇಟ್ಟಿದ್ದ ಎಂದು ಹೇಳಲಾಗಿದೆ.

Woman hangs himself over husband's extra marital affair

ಅಸಹಾಯಕ ಹುಡುಗಿಯರನ್ನು ತನ್ನ ಬಲೆಗೆ ಬೀಳಿಸಿಕೊಂಡು ಅವರನ್ನು ಮದುವೆಯಾಗಿ ಬಳಿಕ ಮದುವೆ ಫೋಟೋವನ್ನು ಹರಿದು ಹಾಕಿ ಸಾಕ್ಷಿ ಇಲ್ಲದಂತೆ ಮಾಡುತ್ತಿದ್ದ ಎನ್ನಲಾಗಿದೆ.

ರತ್ನ ಸೇರಿದಂತೆ ಮೂವರನ್ನು ಹೀಗೆ ಮದುವೆಯಾಗಿದ್ದನು ಎನ್ನಲಾಗಿದೆ. ಒಬ್ಬರೊಂದಿಗೆ ಮದುವೆಯಾಗಿ ಮತ್ತೊಬ್ಬರಿಗೆ ಆ ವಿಷಯ ಗೊತ್ತಾಗದಂತೆ ನಯಾಜ್ ಎಚ್ಚರಿಕೆ ವಹಿಸುತ್ತಿದ್ದ

ನಯಾಜ್‍ನ್ನು ನಂಬಿ ಎಲ್ಲರನ್ನು ಬಿಟ್ಟು ಬಂದಿದ್ದ ರತ್ನ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು. ಇತ್ತೀಚೆಗೆ ಮನೆಗೆ ಗೌರಿ ಎಂಬಾಕೆಯನ್ನು ಕರೆದುಕೊಂಡು ಬಂದ ನಯಾಜ್ ಈಕೆ ಸ್ನೇಹಿತನ ಹೆಂಡತಿ ಆಕೆಯ ಮನೆಯಲ್ಲಿ ಸಮಸ್ಯೆಯಾಗಿದೆಯಂತೆ ಸ್ವಲ್ಪ ದಿನದ ಮಟ್ಟಿಗೆ ಇಲ್ಲಿದ್ದು ಮತ್ತೆ ಹೋಗುತ್ತಾಳೆ ಎಂದಿದ್ದಾನೆ.

ಒಂದು ವಾರ ಮಾತ್ರ ಅಲ್ಲವೆ ಸರಿ ಎಂದು ರತ್ನ ಒಪ್ಪಿಕೊಂಡು ಸುಮ್ಮನಾಗಿದ್ದಾಳೆ. ವಾರ ಕಳೆದು ತಿಂಗಳಾದರೂ ಆಕೆ ಮನೆಯಿಂದ ಹೋಗಿದ್ದಾಗ ಗಂಡನನ್ನು ಕೇಳಿದ್ದಾಳೆ. ಆಗ ನಯಾಜ್ ಸಬೂಬು ಹೇಳುತ್ತಾ ಕಾಲ ತಳ್ಳಿಕೊಂಡು ಬಂದಿದ್ದಾನೆ.

ರತ್ನ ಇದ್ದಾಗ ನಯಾಜ್ ಗಂಭೀರವಾಗಿರುತ್ತಿದ್ದನಾದರೂ ಆಕೆ ಹೊರಗೆ ಹೋದ ಕೂಡಲೇ ಗೌರಿಯೊಂದಿಗೆ ಚಕ್ಕಂದ ಆಡುತ್ತಿದ್ದ. ಈ ವಿಚಾರ ರತ್ನಳಿಗೆ ಗೊತ್ತಾಗಿರಲಿಲ್ಲ.

ಮಂಗಳವಾರ ರತ್ನ ಹೊರಗೆ ಹೋಗಿದ್ದಾಗ ನಯಾಜ್ ಮತ್ತು ಗೌರಿ ಬೆಡ್ ರೂಂ ಸೇರಿಕೊಂಡಿದ್ದಾರೆ. ಸುಖದ ಅಮಲಿನಲ್ಲಿದ್ದ ಅವರಿಗೆ ರತ್ನ ಮರಳಿ ಬಂದಿದ್ದು ಗೊತ್ತಾಗಲಿಲ್ಲ. ಪರಿಣಾಮ ಸಿಕ್ಕಿ ಬಿದ್ದಿದ್ದಾರೆ.

ಗಂಡ ಬೇರೆ ಹೆಂಗಸಿನೊಂದಿಗೆ ಸರಸ ಸಲ್ಲಾಪದಲ್ಲಿರುವುದನ್ನು ಕಂಡು ಆಕ್ರೋಶಗೊಂಡ ರತ್ನ ಜಗಳ ಮಾಡಿದ್ದಾಳೆ. ಈ ಸಂದರ್ಭ ನಯಾಜ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ನೊಂದ ರತ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರಿಣಾಮ ಮಕ್ಕಳಿಬ್ಬರು ತಬ್ಬಲಿಯಾಗಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈತ ನಾಲ್ಕು ಮದುವೆಯಾಗಿದ್ದು, ನಾಲ್ವರು ಕೂಡ ಹಿಂದೂ ಯುವತಿಯರಾಗಿದ್ದಾರೆ ಎನ್ನಲಾಗಿದೆ.

ಮದುವೆಯಾಗುವುದನ್ನೇ ಖಯಾಲಿ ಮಾಡಿಕೊಂಡಿದ್ದ ನಯಾಜ್‍ನನ್ನು ನಂಬಿ ಬಂದಿರುವ ಯುವತಿಯರು ಇದೀಗ ಆತನ ವಿಕೃತ ಆಟ ಬಯಲಾಗುತ್ತಿದ್ದಂತೆಯೇ ಆತಂಕಕ್ಕೀಡಾಗಿದ್ದಾರೆ.

ಸದ್ಯ ನಯಾಜ್‍ನನ್ನು ವಿದ್ಯಾರಣ್ಯ ಠಾಣೆ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಈತ ಇನ್ನೆಷ್ಟು ಹೆಣ್ಣು ಮಕ್ಕಳ ಬಾಳಿಗೆ ಕೊಳ್ಳಿಯಿಟ್ಟಿದ್ದಾನೆಯೋ ಎಂಬುದು ತನಿಖೆಯಿಂದಷ್ಟೆ ತಿಳಿಯಬೇಕಿದೆ.

ಈ ಸಮಾಜದಲ್ಲಿ ನಯಾಜ್‍ನಂಥ ವಂಚಕರು ಇನ್ನೆಷ್ಟು ಮಂದಿ ಇದ್ದಾರೋ? ಪ್ರೀತಿ ಪ್ರೇಮ ಅಂಥ ಹುಡುಗರ ಹಿಂದೆ ಬೀಳುವ ಮುನ್ನ ಯುವತಿಯರು ಎಚ್ಚರವಾಗಿರುವುದು ಒಳಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 27 year woman committed suicide by hanging him self over husband's extra martial affair in Mysuru on wednesday
Please Wait while comments are loading...