ಅಂಧನ ಬಾಳಿಗೆ ಬೆಳಕಾದ ಕೆಆರ್ ಪೇಟೆಯ ಯುವತಿ

Posted By: ಮೈಸೂರು ಪ್ರತಿನಿಧಿ
Subscribe to Oneindia Kannada

ಕೆ.ಆರ್.ಪೇಟೆ, ಅಕ್ಟೋಬರ್ 28 : ಅಂಧ ಯುವಕನನ್ನು ಯುವತಿಯೊಬ್ಬಳು ಸರಳ ವಿವಾಹವಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮಂಗಳೂರಿನ ಡಿ.ಸಿ ಕಛೇರಿಯಲ್ಲೊಬ್ಬ ಕಣ್ಣು ಕಾಣದ ಅಸಾಮಾನ್ಯ ವ್ಯಕ್ತಿ

ತಾಲೂಕಿನ ವಳಗೆರೆಮೆಣಸ ಗ್ರಾಮದ ಮಾಯಮ್ಮ ಮತ್ತು ಈರಯ್ಯ ದಂಪತಿಗಳ ಪುತ್ರ ಮಂಜುನಾಥ್ ಅಂಧನಾಗಿದ್ದು, ಈತನನ್ನು ಪಾಂಡವಪುರ ತಾಲೂಕಿನ ದಿ. ಸುಜಾತ ಮತ್ತು ಬಸವರಾಜು ಅವರ ಪುತ್ರಿ ವೀಣಾ ಎಂಬಾಕೆ ಪಟ್ಟಣದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ ಸರಳ ವಿವಾಹವಾಗಿದ್ದು, ಆ ಮೂಲಕ ಅಂಧ ಯುವಕನ ಬಾಳಿಕೆ ಬೆಳಕು ನೀಡಿದ್ದಾರೆ.

Woman gives life to blind man in KR Pet

ಎರಡೂ ಕಣ್ಣಿಲ್ಲದಿದ್ದರೂ ಬೇರೆಯವರ ಆಶ್ರಯದಲ್ಲಿ ಬದುಕದೇ ಸ್ವಾವಲಂಬಿಯಾಗಿ ಬದುಕುವ ಛಲವನ್ನು ರೂಢಿಸಿಕೊಂಡಿದ್ದ ಮಂಜುನಾಥನಿಗೆ ಯಾರೂ ಸಹ ಹೆಣ್ಣು ಕೊಡಲು ಮುಂದೆ ಬಂದಿರಲಿಲ್ಲ. ಇದರಿಂದಾಗಿ ವಿವಾಹವಾಗುವ ಆಸೆಯನ್ನು ಕೈಬಿಟ್ಟು ತನ್ನ ಪಾಡಿಗೆ ತಾನು ತೆಂಗಿನಕಾಯಿ ಸುಲಿಯುವ ಕಾಯಕವನ್ನು ಮಾಡುತ್ತಾ ತನ್ನ ಜೀವನಕ್ಕೆ ಸಾಕಾಗುವಷ್ಟು ಸಂಪಾದನೆ ಮಾಡುವ ಮೂಲಕ ಸಮಾಜದಲ್ಲಿ ಮಾದರಿಯಾಗಿ ಬದುಕುತ್ತಿದ್ದನು.

ಅಂಧತ್ವವನ್ನು ಸವಾಲಾಗಿ ಸ್ವೀಕರಿಸಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಶೇಖರ್

ಈತನನ್ನು ತುಂಬಾ ಹತ್ತಿರದಿಂದ ನೋಡಿದ್ದ ಮಂಜುನಾಥ್ ಅವರ ಹತ್ತಿರದ ಸಂಬಂಧಿಯೂ ಆಗಿರುವ ವೀಣಾ ಅವರ ಸಾಕು ತಾಯಿಯಾದ ಆದ ಹರವು ಗ್ರಾಮದ ಪಾರ್ವತಿ ಅವರಿಗೆ, ಮಂಜುನಾಥನಿಗೆ ತಮ್ಮ ಸಾಕು ಮಗಳನ್ನು ವಿವಾಹ ಮಾಡಿದರೆ ಇಬ್ಬರೂ ಸುಖವಾಗಿ ಬಾಳುತ್ತಾರೆ ಅಂತ ಅನ್ನಿಸಿದೆ. ಅಂಧನಾದ ಮಂಜುನಾಥನಿಗೂ ಆಸರೆಯೂ ಆಗುತ್ತದೆ ಎಂದು ಇಬ್ಬರಿಗೂ ತಮ್ಮ ಬಂಧುಗಳ ಸಮ್ಮುಖದಲ್ಲಿ ಗುರುವಾರ ಸರಳ ವಿವಾಹ ನೆರವೇರಿಸಿದರು.

ಸರಳ ವಿವಾಹವಾದ ನೂತನ ವಧೂ-ವರರನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಎಸ್.ಕೃಷ್ಣಮೂರ್ತಿ, ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ಜಿಲ್ಲಾ ಛಲವಾದಿ ಮಹಸಭಾ ಅಧ್ಯಕ್ಷ ಮಾಂಬಹಳ್ಳಿ ಜಯರಾಂ, ತಾಲೂಕು ಅಧ್ಯಕ್ಷ ಮುದುಗೆರೆ ಮಹೇಂದ್ರ, ಎಪಿಎಂಸಿ ನಿರ್ದೇಶಕ ಸೋಮಸುಂದರ್, ಗ್ರಾ.ಪಂ.ಸದಸ್ಯ ಶಿವರಾಂ ಸೇರಿದಂತೆ ಹಲವು ಗಣ್ಯರು ಹಾಜರಿದ್ದು ಶುಭಹಾರೈಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A woman from KR Pet has married a blind man. Veena married Manjunath in a simple function in front of close relatives. Manjunath was blind by birth, but was eaking his livelyhood by doing some small work. ಅಂಧನ ಬಾಳಿಗೆ ಬೆಳಕಾದ ಕೆಆರ್ ಪೇಟೆಯ ಯುವತಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ