ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಬರೋಬ್ಬರಿ 5 ಕೆ.ಜಿ.ತೂಕದ ಮಗುವಿಗೆ ಜನ್ಮ ಕೊಟ್ಟ ತಾಯಿ

|
Google Oneindia Kannada News

ಮೈಸೂರು, ಡಿಸೆಂಬರ್ 8: ಬರೋಬ್ಬರಿ 5 ಕೆ.ಜಿ. 100 ಗ್ರಾಂ ತೂಕ ಹೊಂದಿರುವ ಮಗುವೊಂದು ಮೈಸೂರಿನಲ್ಲಿ ಜನಿಸಿದೆ.

ಮಕ್ಕಳ ದತ್ತು ಪಡೆಯುವಲ್ಲೂ ಬೆಂಗಳೂರು 'ಸಾಫ್ಟ್' ಮನಸು!ಮಕ್ಕಳ ದತ್ತು ಪಡೆಯುವಲ್ಲೂ ಬೆಂಗಳೂರು 'ಸಾಫ್ಟ್' ಮನಸು!

ತಿಲಕ್ ನಗರದ ನಿವಾಸಿ ಸಿದ್ದರಾಜು ಅವರ ಪತ್ನಿ ರಾಜೇಶ್ವರಿ ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಅಪರೂಪದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ತೂಕ ಜಾಸ್ತಿಯಿದ್ದ ಕಾರಣ ವೈದ್ಯಾಧಿಕಾರಿಗಳು ಸಿಸೇರಿಯನ್ ಮೂಲಕ ಹೊರತೆಗೆದಿದ್ದಾರೆ.

 ವಿಡಿಯೋ: ಹಳಿ ಮೇಲೆ ಬಿದ್ದ ಮಗು, ಅದರ ಮೇಲೆ ಚಲಿಸಿದ ರೈಲು! ವಿಡಿಯೋ: ಹಳಿ ಮೇಲೆ ಬಿದ್ದ ಮಗು, ಅದರ ಮೇಲೆ ಚಲಿಸಿದ ರೈಲು!

Woman gave birth to a 5 KG baby in Mysuru

ಇನ್ನು ಬಲ ಭೀಮನಿಗೆ ಜನ್ಮ ನೀಡಿದ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದು, ತಾಯಿ-ಮಗುವಿನ ಜೀವವನ್ನು ಆಸ್ಪತ್ರೆಯ ವೈದ್ಯೆ ಡಾ. ವೀಣಾ ಜಾಗರೂಕತೆಯಿಂದ ಉಳಿಸಿದ್ದಾರೆ.

 ಟೆರೆಸ್ ನಿಂದ ಹಾರಿ ಅಜ್ಜಿ ಸಾವು, ಒಂದು ಗಾಯವೂ ಆಗದೆ ಬದುಕಿತು ಮೊಮ್ಮಗು! ಟೆರೆಸ್ ನಿಂದ ಹಾರಿ ಅಜ್ಜಿ ಸಾವು, ಒಂದು ಗಾಯವೂ ಆಗದೆ ಬದುಕಿತು ಮೊಮ್ಮಗು!

Woman gave birth to a 5 KG baby in Mysuru

ಶುಕ್ರವಾರ (ಡಿಸೆಂಬರ್ 07) ಸಂಜೆ 6 ಗಂಟೆ ಸುಮಾರಿಗೆ ಮಗು ಜನಿಸಿದಾಗ ವೈದ್ಯರೂ ನೋಡಿ ಆಶ್ಚರ್ಯವ್ಯಕ್ತಪಡಿಸಿದರು. ಸಾಮಾನ್ಯವಾಗಿ ಆಗ ತಾನೇ ಜನಿಸಿದ ಮಗುವಿನ ತೂಕ 3.50 ಕೆ.ಜಿ. ಯೊಳಗೆ ಇರುತ್ತದೆ. ಆದರೆ ಈ ಮಗು 5 ಕೆಜಿ ಯಿರುವುದು ಎಲ್ಲರನ್ನು ದಂಗುಗೊಳಿಸುವಂತೆ ಮಾಡಿದೆ.

English summary
In Mysore, a woman gave birth to a 5 KG baby.Doctor said that now mother and baby are healthy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X