ಮೈಸೂರಿನಲ್ಲಿ ಡೆಂಗ್ಯೂ ಕಾಯಿಲೆಗೆ ಮತ್ತೊಂದು ಬಲಿ

Posted By:
Subscribe to Oneindia Kannada

ಮೈಸೂರು, ಜುಲೈ, 24: ಮೈಸೂರಿನ ನಂಜನಗೂಡಿನಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ಶಫೀಜ್ ಅಹಮದ್ ಪತ್ನಿ ನಫೀಜಾ ಫಾತೀಮಾ (೪೪) ಎಂಬ ಗೃಹಿಣಿಯೊಬ್ಬರು ಸಾವನ್ನಿಪ್ಪಿದ್ದಾರೆ.

ಇವರು, ನಂಜನಗೂಡು ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿ. ಫಾತೀಮಾ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ, ಅವರನ್ನು ಉದಯಗಿರಿಯ ಅಲ್ ಆನ್ಸರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫಾತೀಮಾ ಸಾವನ್ನಪ್ಪಿದ್ದಾರೆ.

Woman dies of suspected dengue in Mysuru

ಅನ್ನಾದತ ನೇಣಿಗೆ ಶರಣು: ಸಾಲ ಭಾದೆ ತಾಳಲಾರದೆ ರೈತ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ನಗರ ತಾಲೂಕಿನಲ್ಲಿ ಇಂದು ನಡೆದಿದೆ.

Mysuru city corporation officials attacked bars in Mysuru

ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಕಾಂತರಾಜು (45) ಆತ್ಮಹತ್ಯೆಗೆ ಶರಣಾದ ರೈತ. ಕೆ.ಆರ್.ನಗರದ ಕಾರ್ಪೂರೆಷನ್ ಬ್ಯಾಂಕ್ ನಲ್ಲಿ 60 ಸಾವಿರ ರೂ. ಹಾಗೂ 2 ಲಕ್ಷಕ್ಕೂ ಅಧಿಕ ಕೈ ಸಾಲ ಮಾಡಿದ್ದ ಈತ 30 ಗುಂಟೆ ಜಮೀನಿನಲ್ಲಿ ತಂಬಾಕು ಬೆಳೆದಿದ್ದ. ಬೆಳೆ ನಷ್ಟದಿಂದ ತನ್ನ ಜಮೀನಿನ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A woman died of suspected dengue in Nanjanagud. The deceased is identified as Nafiza Fathima (44), at Nanjanagud housing board colony. She was admitted to Al Ansar hospital at Udayagiri due to fever
Please Wait while comments are loading...