ಮೈಸೂರು : ರೈಲು ಹತ್ತುವಾಗ ಕಾಲುಜಾರಿ ಬಿದ್ದು ಮಹಿಳೆ ಸಾವು

By: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
Subscribe to Oneindia Kannada

ಮೈಸೂರು, ಜೂನ್ 28 : ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮೈಸೂರಿನ ಚಾಮರಾಜಪುರಂ ರೈಲು ನಿಲ್ದಾಣದಲ್ಲಿ ನಡೆದಿದೆ. ಮೃತ ಮಹಿಳೆ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಡಿ ಗ್ರೂಪ್ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮೃತಪಟ್ಟವರನ್ನು ಮೈಸೂರಿನ ಬೋಗಾದಿ ನಿವಾಸಿ ಪ್ರೇಮಮ್ಮ (54) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ 7.20ರ ಸುಮಾರಿಗೆ ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ರೈಲು ಹತ್ತುವಾಗ ಕಾಲುಜಾರಿ ಬಿದ್ದು ಪ್ರೇಮಮ್ಮ ಮೃತಪಟ್ಟಿದ್ದಾರೆ. [ರೈಲು ಅಪಘಾತ : ದೇವದುರ್ಗ ಶಾಸಕ ವೆಂಕಟೇಶ್ ನಾಯಕ್ ಸಾವು]

mysuru women killed

ಪ್ರೇಮಮ್ಮ ಅವರು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಡಿಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ಅವರ ಅಳಿಯ ಚಾಮರಾಜಪುರಂ ರೈಲು ನಿಲ್ದಾಣಕ್ಕೆ ಬಿಟ್ಟು ಹೋಗುತ್ತಿದ್ದರು. ಅಲ್ಲಿಂದ ಅವರು ರೈಲಿನಲ್ಲಿ ತೆರಳುತ್ತಿದ್ದರು. [ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಲು 139ಕ್ಕೆ ಡಯಲ್ ಮಾಡಿ]

ಪ್ರೇಮಮ್ಮ ಅವರ ಪತಿ ನಿಧನರಾದ ನಂತರ ಅವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು. ಪ್ರೇಮಮ್ಮ ಅವರಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. [ಹಾಸ್ಯಪ್ರಜ್ಞೆಯ ಅಪರೂಪದ ವೈದ್ಯರ ದುರಂತ ಸಾವು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 54-year-old woman slipped while boarding to train and killed on spot at the Chamaraj railway station Mysuru on June 28, 2016 morning.
Please Wait while comments are loading...