ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದಿಂದ ಮಹಿಳೆಯರಿಗಾಗಿ 25 ಸಾವಿರ ತುರ್ತುನಿಧಿ: ಸಚಿವೆ ಜಯಮಾಲಾ

|
Google Oneindia Kannada News

ಮೈಸೂರು, ಅಕ್ಟೋಬರ್ 11: ವೈಭವದ ದಸರಾ ಮಹೋತ್ಸವಕ್ಕೆ ಇಂದು (ಅ.11) ಎರಡನೇ ದಿನ. ಇಂದು ಕೂಡ ಹತ್ತು ಹಲವು ಕಾರ್ಯಕ್ರಮಗಳು ನಡೆದಿದ್ದು, ನಗರದ ಜೆ.ಕೆ ಮೈದಾನದಲ್ಲಿ ಮಹಿಳಾ ದಸರಾಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ, ಸ್ತ್ರೀ ಶಕ್ತಿ ಗುಂಪು ಸ್ತ್ರೀಯರಲ್ಲಿ ಶಕ್ತಿಯನ್ನು ಹೊರತರುವಂತಹ ಕೆಲಸ ಮಾಡಬೇಕು. ಸರ್ಕಾರ ಮಹಿಳೆಯರಿಗಾಗಿ 25 ಸಾವಿರ ತುರ್ತುನಿಧಿಯನ್ನು ನೀಡುವ ಜೊತೆಯಲ್ಲಿ ಉದ್ಯೋಗಿನಿ ಯೋಜನೆಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ಮೈಸೂರು ದಸರಾದಲ್ಲಿ 'ರಂಗೋಲಿ' ಬಗ್ಗೆ ಸಚಿವೆ ಜಯಮಾಲ ಆಡಿದ ಮಾತುಗಳಿವು..ಮೈಸೂರು ದಸರಾದಲ್ಲಿ 'ರಂಗೋಲಿ' ಬಗ್ಗೆ ಸಚಿವೆ ಜಯಮಾಲ ಆಡಿದ ಮಾತುಗಳಿವು..

ಸರ್ಕಾರ ಜಾರಿಗೆ ತಂದಿರುವ ಎಲ್ಲ ಯೋಜನೆಯ ಫಲವನ್ನು ಬೇರೆಯವರಿಗೂ ಹೇಳಬೇಕು. ನೀವೂ ಅದನ್ನು ಬಳಸಿಕೊಳ್ಳಬೇಕು. ಸರ್ಕಾರದ ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳಿ. ನೀವು ಬೆಳೆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಹುದು ಎಂದರು.

Woman Dasara was launched at JK Ground in Mysore

ಅಂಗನವಾಡಿ ನೌಕರರು ಯಾವುದೇ ನರ್ಸ್ ಮತ್ತು ಎಂಬಿಬಿಎಸ್ ಡಾಕ್ಟರ್ ಗಳಿಗಿಂತ ಕಡಿಮೆ ಇಲ್ಲ. ಅವರ ಸೇವೆ ಮಹತ್ವದ್ದು ಎಂದು ಜಯಮಾಲಾ ಬಣ್ಣಿಸಿದರು. ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಅಂಗನವಾಡಿಗಳಿದ್ದು, ಅಂಗನವಾಡಿ ಶಿಕ್ಷಕರ, ಸಹಾಯಕಿಯರ ಕೆಲಸ ಅವಿಸ್ಮರಣೀಯ. ಅವರು ಮಾಡುವ ಕೆಲಸ ದೇವರ ಕೆಲಸ.

 ಅಕ್ಟೋಬರ್. 11 ರ ವಿವಿಧ ವೇದಿಕೆಗಳ ಮೈಸೂರು ದಸರಾ ಕಾರ್ಯಕ್ರಮಗಳ ವಿವರ ಅಕ್ಟೋಬರ್. 11 ರ ವಿವಿಧ ವೇದಿಕೆಗಳ ಮೈಸೂರು ದಸರಾ ಕಾರ್ಯಕ್ರಮಗಳ ವಿವರ

ಅವರು ಕೆಲಸವನ್ನು ಡಾಕ್ಟರ್ ಕಲಿತವರು ಮಾಡಲಾಗುವುದಿಲ್ಲ. ವೈದ್ಯರು ಹಳ್ಳಿಗೆ ಹೋಗಿ ಕೆಲಸ ಮಾಡಲ್ಲ ಎನ್ನುತ್ತಾರೆ. ನೀವು ನಿಜವಾದ ಸಮಾಜ ಸೇವಕಿಯರು ಎಂದು ನೆರೆದಿದ್ದ ಅಂಗನವಾಡಿ ಕಾರ್ಯಕರ್ತರುನ್ನು ಹೊಗಳಿದರು.

Woman Dasara was launched at JK Ground in Mysore

 ಮೈಸೂರು ದಸರಾ: ಧೂಳೆಬ್ಬಿಸಿದ ಪೈಲ್ವಾನರು, ಖಾದ್ಯ ಸವಿದ ಪ್ರವಾಸಿಗರು... ಮೈಸೂರು ದಸರಾ: ಧೂಳೆಬ್ಬಿಸಿದ ಪೈಲ್ವಾನರು, ಖಾದ್ಯ ಸವಿದ ಪ್ರವಾಸಿಗರು...

ಮಹಿಳೆಯರ ಕರಕುಶಲ ವಸ್ತುಗಳು, ತಿಂಡಿ ತಿನಿಸುಗಳ ಮೇಳವನ್ನು ಇದೇ ವೇಳೆ ಆಯೋಜಿಸಲಾಗಿದ್ದು, ನೋಡುಗರ ಗಮನ ಸೆಳೆಯಿತು.

English summary
Woman Dasara was launched at JK Ground in Mysore. Minister Jayamala inaugurated the program. In this program, Jayamala informed about government's program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X