ಮೈಸೂರಿಗೆ ಆಗಮಿಸಿದ ತುಂಬುಗರ್ಭಿಣಿ ತ್ರಿಷಿಕಾ ಕುಮಾರಿ

Posted By:
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 17 : ಮೈಸೂರು ದಸರಾದ ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಳ್ಳಲು ರಾಜಕುಮಾರಿ ತ್ರಿಷಿಕಾ ಕುಮಾರಿ ಒಡೆಯರ್ ಇಂದು ಮೈಸೂರಿಗೆ ಆಗಮಿಸಿದರು. ಗರ್ಭಿಣಿಯಾದ ಬಳಿಕ ಇದೇ ಮೊದಲ ಬಾರಿಗೆ ತ್ರಿಷಿಕಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಗರ್ಭಿಣಿ ತ್ರಿಷಿಕಾ ದಸರೆಯಲ್ಲಿ ಭಾಗವಹಿಸೋದು ಖಚಿತ: ಯದುವೀರ್

ಬೆಂಗಳೂರಿನಲ್ಲಿದ್ದ ತ್ರಿಷಿಕಾ ಕುಮಾರಿ ಅವರು ಭಾನುವಾರ ರೈಲಿನಲ್ಲಿ ಮೈಸೂರಿಗೆ ಆಗಮಿಸಿದರು. ಶನಿವಾರ ಬೆಂಗಳೂರಿಗೆ ತೆರಳಿದ್ದ ಯದುವೀರ ಒಡೆಯರ್ ಅವರು ಇಂದು ಬೆಳಗ್ಗೆ ತ್ರಿಷಿಕಾ ಅವರನ್ನು ಕರೆದುಕೊಂಡು ಬಂದರು.

Wodeyar Yaduveer royal couple ride with commuters on train

ಗರ್ಭಿಣಿಯಾದ ಕಾರಣ ಕಾರಿನಲ್ಲಿ ಆಗಮಿಸದೇ ರೈಲಿನಲ್ಲಿ ಮೈಸೂರಿಗೆ ಆಗಮಿಸಿದರು. ಮೈಸೂರು ರೈಲ್ವೆ ನಿಲ್ದಾಣದಿಂದ ಕಾರಿನಲ್ಲಿ ಅರಮನೆಗೆ ತೆರಳಿದರು. ಗರ್ಭಿಣಿಯಾದ ಬಳಿಕ ಇಂದು ಮೊದಲ ಬಾರಿ ತ್ರಿಷಿಕಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಮೈಸೂರು ದಸರಾ: ಇಲ್ಲಿದೆ ಕಾರ್ಯಕ್ರಮದ ಪಟ್ಟಿ

ರಾಜಮನೆತನದ ಸೊಸೆಯನ್ನು ರೈಲು ನಿಲ್ದಾಣದಲ್ಲಿ ಕಂಡು ಜನರು ಪುಳಕಿತರಾದರು. ಯದವಂಶದ ಮಹಾರಾಜ ಯದುವೀರ್ ರೈಲ್ವೆ ನಿಲ್ದಾಣದಿಂದ ಯದುವೀರ್ ಅವರ ಜೊತೆ ತ್ರಿಷಿಕಾ ಕಾರಿನಲ್ಲಿ ಮೈಸೂರು ಅರಮನೆಯ ಖಾಸಗಿ ನಿವಾಸಕ್ಕೆ ತೆರಳಿದರು.

2017ನೇ ಸಾಲಿನ ದಸರಾಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಸೆ.21ರಿಂದ 30ರ ತನಕ ಈ ಬಾರಿಯ ದಸರಾ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru royal couple Yaduveer Urs and Trishika Kumari on September 17, 2017 ride with commuters on train from Bengaluru to Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ