ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋ ಮಧುಸೂದನ್ ಬಂಡೀಪುರದ ರೆಸಾರ್ಟ್ ಮುಟ್ಟುಗೋಲು?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 13: ಮೈಸೂರು ಭಾಗದ ಬಿಜೆಪಿಯ ಪ್ರಭಾವಿ ನಾಯಕ, ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಅವರಿಗೆ ಸಂಕಷ್ಟ ಎದುರಾಗಿದೆ. ಅವರ ಒಡೆತನದಲ್ಲಿರುವ ಬಂಡೀಪುರದ ಟೈಗರ್ ರಾಂಚ್ ರೆಸಾರ್ಟ್ ಮತ್ತು ಸುತ್ತಲಿನ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರಕಾರ ಮುಂದಾಗಿದೆ.

ಭೂಸುಧಾರಣೆ ಕಾಯ್ದೆಯನ್ನು ಉಲ್ಲಂಘಿಸಿ 40 ಎಕರೆ ಭೂಮಿ ಖರೀದಿ ಮಾಡಿ, ಅದರಲ್ಲಿ ಟೈಗರ್ ರಾಂಚ್ ರೆಸಾರ್ಟ್ ನಿರ್ಮಿಸಿದ್ದರು. ಇದೀಗ ರೆಸಾರ್ಟ್ ಸೇರಿದಂತೆ ಭೂ ಪ್ರದೇಶವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಚಾಮರಾಜನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದ್ದು, ಅದರಂತೆ ಕಂದಾಯ ಇಲಾಖೆಯ ದಾಖಲೆಗೆ ಸೇರಿಸಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಸಂಬಂಧಿ ಟಿ.ಎಲ್.ಜಯಲಕ್ಷ್ಮಿ ಎಂಬುವರ ಹೆಸರಿನಲ್ಲಿ ಹಂಗಳ ಹೋಬಳಿಯ ಮಂಗಲ ಗ್ರಾಮದ ಬಳಿ ಕೃಷಿ ಉದ್ದೇಶಕ್ಕಾಗಿ ಗಿರಿಜನರಿಂದ 40 ಎಕರೆ ಭೂಮಿಯನ್ನು ಕಾನೂನು ಉಲ್ಲಂಘಿಸಿ ಗೋ.ಮಧುಸೂದನ್ ಖರೀದಿಸಿದ್ದರು.[ಅಗ್ನಿ ಅನಾಹುತ ಮತ್ತು ಬರ: ಕಂಗಾಲಾದ ಬಂಡೀಪುರದ ಪ್ರಾಣಿಗಳು]

Resort

ಈ ಸಂದರ್ಭ ಅವರು ತಾವು ಮೂಲತಃ ವ್ಯವಸಾಯಗಾರರೆಂದು ಸುಳ್ಳು ಪ್ರಮಾಣಪತ್ರ ಸಲ್ಲಿಸಿ 1961ರ ಭೂಸುಧಾರಣೆ ಕಾಯ್ದೆ 80ರನ್ವಯ 1995ರಲ್ಲಿ ನಂಜನಗೂಡು ಉಪವಿಭಾಗಾಧಿಕಾರಿಗಳಿಂದ ಅನುಮತಿ ಪಡೆದಿದ್ದರು. ಆದರೆ ಅವರು ಅರಣ್ಯ ಇಲಾಖೆ ಅನುಮತಿ ಪಡೆಯದೆ ಸರಕಾರದ ಗಮನಕ್ಕೂ ತರದೆ ಅಂದಿನ ಉಪವಿಭಾಗಾಧಿಕಾರಿ ಈ ಭೂಮಿಯನ್ನು ಅನ್ಯಕ್ರಾಂತ ಮಾಡಿಕೊಟ್ಟಿದ್ದರು.

ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳನ್ನು ಬಿಟ್ಟು ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲವಾದರೂ ಗೋ. ಮಧುಸೂದನ್ ಅವರು ತಾವು ಕೃಷಿ ಚಟುವಟಿಕೆಗೆಂದು ಹಂಗಳ ಹೋಬಳಿ ಮಂಗಲ ಗ್ರಾಮದ ಸರ್ವೇ ನಂ. 20/2ರಲ್ಲಿ 2 ಎಕರೆ, 20/23- 2, 20/57-2, 20/37-2, 20/11-2, 86/4-2, 86/1-2, 20/21-2, 20/67-3, 20/26-2, 20/15-2 ಎಕರೆ ಜಮೀನು ಗೋ.ಮಧುಸೂಧನ್ ಹೆಸರಿನಲ್ಲಿ,

ಇನ್ನು 20/23-2, 20/14-2, 20/27-2, 20/11-2, 20/15-2, 20/8-2, 20/7ರಲ್ಲಿ 1 ಎಕರೆ ಭೂಮಿ ಸಂಬಂಧಿ ಜಯಲಕ್ಷ್ಮಿಯವರ ಹೆಸರಿನಲ್ಲಿ ಭೂಮಿ ಖರೀದಿಸಿದ್ದರು. ಅಲ್ಲದೆ, ಖರೀದಿಸಿದ ಜಾಗದಲ್ಲಿ ರೆಸಾರ್ಟ್ ನಿರ್ಮಾಣ ಮಾಡಿ, ವಾಣಿಜ್ಯ ವ್ಯವಹಾರ ನಡೆಸುತ್ತಿದ್ದರು.[ದುಷ್ಕರ್ಮಿಗಳ ಅಟ್ಟಹಾಸಕ್ಕೆ ಹೊತ್ತಿ ಉರಿಯುತ್ತಿದೆ ಬಂಡೀಪುರ ಅರಣ್ಯ!]

ಗೋ.ಮಧುಸೂದನ್ ನಿಯಮ ಉಲ್ಲಂಘಿಸಿ ರೆಸಾರ್ಟ್ ನಡೆಸುತ್ತಿರುವ ಕುರಿತಂತೆ ದೂರುಗಳು ಬಂದ ಹಿನ್ನಲೆಯಲ್ಲಿ 2015-16ರಲ್ಲಿ ಅಂದಿನ ಚಾಮರಾಜನಗರ ಜಿಲ್ಲಾಧಿಕಾರಿಗಳು ಹಾಗೂ ಮೈಸೂರಿನ ಪ್ರಾಜೆಕ್ಟ್ ಟೈಗರ್ ಯೋಜನೆಯ ಪಿಸಿಸಿಎಫ್ ಅವರು ಬೆಂಗಳೂರಿನ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿ, ಕ್ರಮಕ್ಕೆ ಮನವಿ ಮಾಡಿದ್ದರು.

resort

ಪ್ರಕರಣದ ತನಿಖೆ ನಡೆದಾಗ ಜಮೀನು ಖರೀದಿ ಸಂದರ್ಭ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಗೋ ಮಧೂಸೂದನ್ ಮತ್ತು ಜಯಲಕ್ಷ್ಮಿ ಒಡೆತನದಲ್ಲಿರುವ ಗಿರಿಜನರ ಭೂಮಿಯನ್ನು ಕಂದಾಯ ಇಲಾಖೆಯ ವಶಕ್ಕೆ ತೆಗೆದುಕೊಳ್ಳುವಂತೆ ಫೆ.20ರಂದು ಚಾಮರಾಜನಗರ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಗುಂಡ್ಲುಪೇಟೆ ತಹಸೀಲ್ದಾರ್ ಕೆ.ಸಿದ್ದುು, ಜಿಲ್ಲಾಧಿಕಾರಿಯವರ ಆದೇಶದಂತೆ ಗೋ.ಮಧುಸೂಧನ್ ಹಾಗೂ ಜಯಲಕ್ಷ್ಮಿಯವರ
ಹೆಸರಿನಲ್ಲಿರುವ ಪಹಣಿಯನ್ನು ಬೆಂಗಳೂರು ಪ್ರಾದೇಶಿಕ ಆಯುಕ್ತರ ನ್ಯಾಯಾಲಯದ ಆದೇಶದ ಮೇರೆಗೆ ಸರಕಾರದ ಹೆಸರಿಗೆ ವರ್ಗಾಯಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

English summary
Bandipur resort land of BJP leader Go Madhusudan, decided to transfer to Karnataka state government. Because land was acquired illegally and running a resort by Madhusudan. Complaint was registered and after the order issued by a concerned officer action is taken.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X