ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಮತ್ತೊಂದು ಮಿನಿ ಜೂ ಶೀಘ್ರ ಉದ್ಘಾಟನೆ

By Kiran B Hegde
|
Google Oneindia Kannada News

ಮೈಸೂರು, ಜ. 24: ನಗರದಿಂದ 15 ಕಿ.ಮೀ. ದೂರದ ಕೂರ್ಗಳ್ಳಿಯಲ್ಲಿ ಪ್ರಾಣಿ ಸಂಗ್ರಹಾಲಯದ ಮತ್ತೊಂದು ಕೇಂದ್ರ ಆರಂಭಿಸಲಾಗಿದೆ. ಶೀಘ್ರ ಇದನ್ನು ಉದ್ಘಾಟಿಸಲಾಗುವುದು. ವನ್ಯಜೀವಿ ರಕ್ಷಣೆ ಹಾಗೂ ಪುನರ್ವಸತಿಗಾಗಿ ಈ ಕೇಂದ್ರ ಉಪಯೋಗಿಸಲಾಗುತ್ತದೆ ಎಂದು ಮೈಸೂರು ಮೃಗಾಲಯದ ಅಧಿಕಾರಿಗಳು ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ. [ಮೈಸೂರು ಮೃಗಾಲಯಕ್ಕೆ 4 ಜೀಬ್ರಾಗಳು]

ಈ ಕೇಂದ್ರಕ್ಕೆ ಜ. 23ರಂದು ನಾಲ್ಕು ಹುಲಿಗಳನ್ನು ತರಲಾಗಿದೆ. ಇವುಗಳಲ್ಲಿ ಎರಡು ಮೊದಲೇ ಮೃಗಾಲಯದಲ್ಲಿದ್ದವು. ಇನ್ನೆರಡನ್ನು ಅರಣ್ಯದಿಂದ ರಕ್ಷಿಸಿ ತರಲಾಗಿದೆ. ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಹೊಸ ಗೂಡುಗಳನ್ನು ಮಾಡಿ ಇಡಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. [ಹುಲಿ ಸಂಖ್ಯೆ : ದೇಶದಲ್ಲೇ ಕರ್ನಾಟಕ ನಂ. 1]

tiger

ಮೈಸೂರು ಮೃಗಾಲಯದಲ್ಲಿ ಈಗಾಗಲೇ ಎಂಟು ಹುಲಿಗಳಿವೆ. ಮುಂದಿನ ದಿನಗಳಲ್ಲಿ ಹುಲಿಗಳ ಸಂತತಿ ಹೆಚ್ಚುವ ನಿರೀಕ್ಷೆಯಿದೆ. ಹೀಗಾದಲ್ಲಿ ಉಳಿದ ಮೃಗಾಲಯಗಳಿಗೂ ಪ್ರಾಣಿಗಳನ್ನು ಕಳುಹಿಸಿಕೊಡಲಾಗುವುದು ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. [ಮೈಸೂರು ಜೂ ವೆಬ್ ಸೈಟ್]

tiger

ಕಳೆದ ವರ್ಷದ ಜೂನ್ ತಿಂಗಳಲ್ಲಿ ಇಸ್ರೇಲ್‌ನ ರಾಮತ್ ಗಾನ್ (ಸಫಾರಿ), ಮೃಗಾಲಯದಿಂದ 12 - 14 ತಿಂಗಳುಗಳ ಎಳೆಯ ವಯಸ್ಸಿನ ನಾಲ್ಕು ಜೀಬ್ರಾಗಳನ್ನು ಮೈಸೂರು ಮೃಗಾಲಯಕ್ಕೆ ತರಲಾಗಿದೆ. ಮೈಸೂರು ಮೃಗಾಲಯದ ಅಂಗೀಕೃತ ಮಾಸ್ಟರ್ ಪ್ಲಾನ್ ನಲ್ಲಿರುವ ಪ್ರಾಣಿ ಸಂಗ್ರಹಣ ಯೋಜನೆಯಡಿ ಇವುಗಳನ್ನು ಪಡೆಯಲಾಗಿದೆ. [ಮೈಸೂರು ಮೃಗಾಲಯಕ್ಕೆ 4 ಜೀಬ್ರಾಗಳು]

English summary
Mysuru Zoo has set up separate Rescue & Rehabilitation center at Koorghalli 15 kms away from the main zoo. The centre has received 4 tigers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X