ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಹೆಂಡ್ತಿ ಕಾಟ ತಡೆಯಲಾರದೆ ಮರವೇರಿದ ಅಂಬಿ ಅಭಿಮಾನಿ

By Vanitha
|
Google Oneindia Kannada News

ಮೈಸೂರು,ಏಪ್ರಿಲ್,03: ಹೆಂಡತಿಯ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಅಥವಾ ಕೋರ್ಟ್ ಮೆಟ್ಟಿಲೇರಿರುವ ವ್ಯಕ್ತಿಗಳನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಎಲ್ಲರಿಗಿಂತ ಭಿನ್ನ ಹಾಗೂ ವಿಭಿನ್ನ.

ಹೌದು ಸರಸ್ವತಿಪುರಂನ ವ್ಯಕ್ತಿ ವೆಂಟೇಶ್ ಎಂಬಾತ ನನ್ನ ಹೆಂಡತಿ ಸುಶೀಲಾ ಹೊಡೆಯುತ್ತಾಳೆ, ಬೈಯುತ್ತಾಳೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿ ಬಹಳಷ್ಟು ಎತ್ತರದ ತೆಂಗಿನ ಮರ ಏರಿ ಕುಳಿತು ವಸತಿ ಸಚಿವ ಅಂಬರೀಶ್ ಬರುವವರೆಗೂ ನಾನು ಕೆಳಗಿಳಿಯುವುದಿಲ್ಲ ಎನ್ನುತ್ತಿದ್ದಾನೆ.[ಮಂಡ್ಯ: ವರದಕ್ಷಿಣೆ ಹಿಂಸೆ, ಹಸೆಮಣೆ ಏರುವ ಮೊದಲೇ ಆತ್ಮಹತ್ಯೆ]

Wife harassment, a person climb the coconut tree in Mysuru

ಕಳೆದ ಎರಡು ವರ್ಷಗಳಿಂದ ನನ್ನ ಹೆಂಡತಿ ನನಗೆ ಕಾಟ ಕೊಡುತ್ತಿದ್ದಾಳೆ, ಹೊಡೆಯುತ್ತಿದ್ದಾಳೆ. ಬಾಯಿಗೆ ಬಂದಂತೆ ಬೈಯುತ್ತಾಳೆ ಎಂದು ಆರೋಪಿಸಿರುವ ಮೈಸೂರಿನ ಸರಸ್ವತಿಪುರಂನ ವೆಂಕಟೇಶ್ 'ನಾನು ಮಾತ್ರ ತೆಂಗಿನ ಮರ ಬಿಟ್ಟು ಇಳಿಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತ್ತಿದ್ದಾನೆ.

ಗಂಡನ ಈ ಹುಚ್ಚುತನಕ್ಕೆ ಹೆದರಿದ ಪತ್ನಿ ಸುಶೀಲಾ, ' ನನ್ನ ಗಂಡನಿಗೆ ನಾನು ಯಾವ ರೀತಿಯ ತೊಂದರೆಯನ್ನೂ ಕೊಟ್ಟಿಲ್ಲ. ನನ್ನ ಗಂಡ ವೆಂಕಟೇಶ್ ಮನೆಯಿಂದಲೇ ನನಗೆ ಕಿರುಕುಳವಿದೆ. ಇವರು ಮನೆಯಲ್ಲಿ ಊಟ ಮಾಡದೇ ಒಂದು ವರ್ಷವೇ ಕಳೆದಿದೆ. ಇವರು ನನ್ನನ್ನು ಹೆದರಿಸಲು ಈ ಹೊಸ ತಂತ್ರ ಹೂಡಿದ್ದಾರೆ' ಎಂದು ಹೇಳುತ್ತಿದ್ದಾರೆ.[ಪತ್ನಿ ನೀಡುತ್ತಿದ್ದ ಮಾನಸಿಕ ಹಿಂಸೆ ತಾಳಲಾರದೆ ಯೋಧ ಆತ್ಮಹತ್ಯೆ]

ಮರವೇರಿ ಕುಳಿತ ವೆಂಕಟೇಶ್ ನನ್ನು ಇಳಿಸಲು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಪೊಲೀಸರು, ಸಂಬಂಧಿಕರು ಹೀಗೆ ಯಾರ ಮಾತಿಗೂ ವೆಂಕಟೇಶ್ ಜಗ್ಗುತ್ತಿಲ್ಲ. ಒಟ್ಟಿನಲ್ಲಿ ಈತ ಸುತ್ತಮುತ್ತಲಿನ ಜನರನ್ನು ಆತಂಕಕ್ಕೆ ತಳ್ಳಿದ್ದಾನೆ.

English summary
A person Venkatesh climbed coconut tree, scared of wife Sushila's harassment at Saraswathipuram, Mysuru on Saturday, April 02nd. He is fan of Housing and Mandya district incharge Minister M.H Ambareesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X