ಮೈಸೂರಿನಲ್ಲಿ ಪತ್ನಿಯಿಂದಲೇ ಪತಿಯ ಕೊಲೆಗೆ ಸುಪಾರಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 12 : ಪತಿಯ ಹತ್ಯೆಗೆ ಪತ್ನಿಯೇ ಸುಪಾರಿ ನೀಡಿದ ಘಟನೆ ಟಿ ನರಸೀಪುರ ತಾಲೂಕಿನ ಕರೊಹಟ್ಟಿ ಗ್ರಾಮದಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಪತಿ ಉಮೇಶ್ ನಾಪತ್ತೆ ಆಗಿದ್ದಾರೆ ಎಂದು ತಾನೇ ಟಿ.ನರಸೀಪುರ ಪೊಲೀಸ್ ಠಾಣೆಗೆ ಪತ್ನಿ ಮೀನಾ ದೂರು ನೀಡಿದ್ದಳು.

ಕದ್ದ ಫೋನಿನಲ್ಲಿ ಓಲಾ ಬುಕ್ ಮಾಡಿ, ಚಾಲಕನನ್ನೂ ದೋಚಿದ ಖದೀಮ!

ಇದಾದ ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ ತಿಳಿದಿದ್ದೇನೆಂದರೆ, ತ್ರಿನೇತ್ರ ಎಂಬಾತನ ಜೊತೆ ಮೀನಾ ಅಕ್ರಮ ಸಂಬಂಧ ಹೊಂದಿದ್ದು, ಆತನ ಜತೆ ಸೇರಿ ಹತ್ಯೆ ಮಾಡಿದ್ದಳು. ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Meena

ಬೆಂಕಿ ಅನಾಹುತಕ್ಕೆ ತಂಬಾಕು ಬ್ಯಾರನ್ ಭಸ್ಮ
ಹಿರಿಕ್ಯಾತನಹಳ್ಳಿ: ತಂಬಾಕು ಹದಗೊಳಿಸುವ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದ ಪರಿಣಾಮ ಬ್ಯಾರನ್ ಸುಟ್ಟು ತಂಬಾಕು ನಾಶವಾದ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಶಿರೇನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ

ಇದೀಗ ತಂಬಾಕು ಹದ ಮಾಡುವ ಕೆಲಸ ನಡೆಯುತ್ತಿದ್ದು, ತಂಬಾಕು ಸೊಪ್ಪನ್ನು ಬ್ಯಾರನ್ ನಲ್ಲಿ ಬೇಯಿಸಲಾಗುತ್ತಿದೆ. ಅದರಂತೆ ಶಿರೇನಹಳ್ಳಿ ಗ್ರಾಮದ ಮಾದೇಗೌಡ ಎಂಬುವರು ಹದ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಬ್ಯಾರನ್ ಹೊತ್ತಿ ಉರಿದಿದೆ. ಪರಿಣಾಮ ತಂಬಾಕು ಸಂಪೂರ್ಣ ಸುಟ್ಟು ನಾಶವಾಗಿದೆ.

ಈ ಬಗ್ಗೆ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಯಿತಾದರೂ ಅಷ್ಟರಲ್ಲೇ ಬೆಂಕಿ ಹೊತ್ತಿ ಉರಿದು ತಂಬಾಕು ನಾಶವಾಗಿತ್ತು. ಆದರೂ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ, ಇತರೆ ಮನೆಗಳಿಗೆ ಬೆಂಕಿ ವ್ಯಾಪಿಸುವುದನ್ನು ತಪ್ಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wife gave supari to husband murder. Meena and her lover Trinetra arrested by T Narasipura police.
Please Wait while comments are loading...