ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋವಿನ ನಡುವೆಯೂ ಪತಿಯ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದ ಮಡದಿ

|
Google Oneindia Kannada News

ಮೈಸೂರು, ನವೆಂಬರ್. 07: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.

ದ್ವಿಚಕ್ರ ವಾಹನ ಸವಾರನೊಬ್ಬ ಅಜಾಗರೂಕತೆಯಿಂದ ಎಸಗಿದ ಪ್ರಮಾದದಿಂದ ನಗರದ ವೆಂಕಟಗಿರಿ ಎಂಬುವವರು ಮೃತಪಟ್ಟರು. ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಮೂರು ದಿನಗಳ ತನಕ ಸಾವು-ಬದುಕಿನ ಜತೆ ಹೋರಾಟ ನಡೆಸಿ ಕೊನೆಗೆ ದೀಪಾವಳಿ ದಿನದಂದು ಮೃತಪಟ್ಟರು.

ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಗಳೂರಿನ ಬಾಲಕಿ ಪ್ರತೀಕ್ಷಾ

ನೋವಿನ ನಡುವೆಯೂ ವೆಂಕಟಗಿರಿ ಅವರ ಮಡದಿ ಮತ್ತು ಕುಟುಂಬ ಸದಸ್ಯರು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Wife donated her husbands body organs between the pain

ಘಟನೆಯ ವಿವರ
ನಗರದ ಎಚ್.ಡಿ.ಬಿ ಬ್ಯಾಂಕ್ ನಲ್ಲಿ ಗುತ್ತಿಗೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ 34 ವರ್ಷದ ವೆಂಕಟಗಿರಿ ಬೋಗಾದಿ ನಿವಾಸಿ. ಕಳೆದ ಶನಿವಾರ (ನ. 3 ) ರಾತ್ರಿ 8 ಗಂಟೆ ಸುಮಾರಿಗೆ ತಮ್ಮ ಎರಡುವರೆ ವರ್ಷದ ಮಗುವಿಗೆ ಹಾಲು ತರಲೆಂದು ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು.

ದೀಪಾವಳಿ ವಿಶೇಷ ಪುರವಣಿ

ಈ ವೇಳೆ ಬೋಗಾದಿಯ ಹರ್ಷಬಾರ್ ಸಮೀಪದ ಜಂಕ್ಷನ್ ನಲ್ಲಿ ಮತ್ತೊಂದು ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ದ್ವಿಚಕ್ರವಾಹನ ಇವರಿಗೆ ಡಿಕ್ಕಿ ಹೊಡೆಯಿತು. ರಸ್ತೆಗೆ ಬಿದ್ದ ವಾಹನ ಸವಾರಿಬ್ಬರನ್ನು ಸಾರ್ವಜನಿಕರು ಕೂಡಲೇ ಕುವೆಂಪುನಗರದ ಬಿಜಿಎಸ್ ಅಪೋಲೊ ಆಸ್ಪತ್ರೆಗೆ ಸಾಗಿಸಿದರು.

ಕ್ಯಾನ್ಸರ್ ರೋಗಿಗಳಿಗಾಗಿ ಕೂದಲನ್ನೇ ದಾನ ಮಾಡಿದ ಮಂಗಳೂರಿನ ಮಾಡೆಲ್

ಅಲ್ಲಿ ವೆಂಕಟಗಿರಿ ಅವರನ್ನು ತೀವ್ರ ತುರ್ತುನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಘಟನೆಯಲ್ಲಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಕಾರಣ ಮೆದುಳು ನಿಷ್ಕ್ರೀಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದರು.

ಘಟನೆಯಿಂದ ಕುಟುಂಬ ವರ್ಗ ತೀವ್ರವಾಗಿ ನೊಂದಿತ್ತು. ಆದರೂ ಮಾನವೀಯತೆಯಿಂದ ಮೃತರ ಮಡದಿ ಮಧುರಾ ಬಿ.ಶೆಟ್ಟಿ ಅವರು ಪತಿಯ ದೇಹದ ಅಂಗಾಂಗಳನ್ನು ದಾನ ಮಾಡಿದ್ದಾರೆ ಎಂದು ಅಪೋಲೊ ಆಸ್ಪತ್ರೆ ವೈದ್ಯರು ಪ್ರಶಂಸಿಸಿದ್ದಾರೆ.

English summary
Husband died in a road accident. However wife donated her husband's body organs between the pain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X