ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗೆ ಏಕಿಷ್ಟು ಮಹತ್ವ?!

By: ವಿಕಾಸ್ ನಂಜಪ್ಪ
Subscribe to Oneindia Kannada

ನಂಜನಗೂಡು, ಮಾರ್ಚ್ 18: ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಗೆ ಎಲ್ಲಿಲ್ಲದ ಮಹತ್ವ ಇದೆ. ಏಪ್ರಿಲ್ 9ರಂದು ಈ ಎರಡೂ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಶತಾಯಗತಾಯ ಈ ಎರಡೂ ಕಡೆ ಗೆಲ್ಲುವ ಹವಣಿಕೆಯಲ್ಲಿವೆ. ಮುಂದಿನ ವರ್ಷವೇ ಕರ್ನಾಟಕ ವಿಧಾನಸಭೆ ಚುನಾವಣೆ ಇದ್ದು, ಅದಕ್ಕೆ ಪೂರ್ವಭಾವಿಯಾಗಿ ದಿಕ್ಸೂಚಿಯಂತೆ ಈ ಚುನಾವಣೆ ಫಲಿತಾಂಶವನ್ನು ಪರಿಗಣಿಸಲಾಗುತ್ತದೆ.

ಅದರಲ್ಲೂ ನಂಜನಗೂಡು ಪ್ರತಿಷ್ಠೆಯ ಕ್ಷೇತ್ರವಾಗಿದೆ. 2018ರ ಚುನಾವಣೆಗೆ ಅದು ಅಷ್ಟೊಂದು ಮುಖ್ಯ ಅಲ್ಲ ಅಂತ ಹೇಳಿದರೂ ಖಂಡಿತವಾಗಿಯೂ ಮಹತ್ವ ಇದೆ. ಏಕೆಂದರೆ ಬಿಎಸ್ ಯಡಿಯೂರಪ್ಪ ಬಿಜೆಪಿಯ ರಾಜ್ಯಾಧ್ಯಕ್ಷರಾದ ನಂತರ ಎದುರಾಗಿರುವ ಮೊದಲ ದೊಡ್ಡ ಪರೀಕ್ಷೆಯಿದು.[ಉಪಚುನಾವಣೆ ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್ - ಬಿಎಸ್ ವೈ]

Why the Nanjangud by-poll in Karnataka is the mother of all elections

ಇನ್ನು ಸಿದ್ದರಾಮಯ್ಯ ಅವರಿ ಮಾನಾಪಮಾನದ ಪ್ರಶ್ನೆ. ಮೈಸೂರಿನಿಂದ ಕೇವಲ 23 ಕಿಲೋಮೀಟರ್ ದೂರದಲ್ಲಿರುವ ನಂಜನಗೂಡಿನಲ್ಲಿ ಅವರ ಹಿಡಿತ ಇಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಕಳೆದ ಡಿಸೆಂಬರ್ ನಲ್ಲಿ ಸಚಿವ ಸಂಪುಟ ಪುನಾರಚನೆ ವೇಳೆ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಕೈ ಬಿಡಲಾಗಿತ್ತು.

Why the Nanjangud by-poll in Karnataka is the mother of all elections

ಆ ನಂತರ ಅವರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು. ಆ ಕಾರಣಕ್ಕೆ ಎದುರಾಗಿರುವ ಚುನಾವಣೆ ಇದು. ಆದರೆ ಶ್ರೀನಿವಾಸ್ ಪ್ರಸಾದ್ ಈಗ ಬಿಜೆಪಿ ಪಾಳಯದಲ್ಲಿದ್ದಾರೆ. ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್, ಅವರ ಗೆಲುವಿಗೆ ಸಾಕಷ್ಟು ಅವಕಾಶಗಳಿವೆ.

Why the Nanjangud by-poll in Karnataka is the mother of all elections

ಒಂದು ವೇಳೆ ಶ್ರೀನಿವಾಸ್ ಪ್ರಸಾದ್ ಗೆದ್ದರೆ ಸಿದ್ದರಾಮಯ್ಯ ಅವರಿಗೆ ಪ್ರಬಲ ಸಂದೇಶ ರವಾನೆಯಾಗುತ್ತದೆ. ಆದರೆ ಸಿದ್ದರಾಮಯ್ಯ ಅವರಿಗೆ ನಂಜನಗೂಡಿನಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವಂತೆ ಮೋದಿ ಅಲೆ ಇಲ್ಲ. ಕೋಮುವಾದಿ ರಾಜಕಾರಣ ಮಾಡಿ ಉತ್ತರಪ್ರದೇಶದಲ್ಲಿ ಬಿಜೆಪಿ ಗೆದ್ದಿದೆ. ಹಾಗೊಂದು ವೇಳೆ ಮೋದಿ ಅಲೆ ಇದ್ದಿದ್ದರೆ ಪಂಜಾಬ್ ನಲ್ಲೂ ಗೆಲ್ಲಬೇಕಿತ್ತು ಎಂದಿದ್ದಾರೆ ಸಿದ್ದರಾಮಯ್ಯ.[ನಂಜನಗೂಡು ಉಪಚುನಾವಣೆ: ಕದನ ಕಲಿಗಳಿಗೆ ಪ್ರತಿಷ್ಠೆಯ ಕಣ]

Why the Nanjangud by-poll in Karnataka is the mother of all elections

ಗುಂಡ್ಲುಪೇಟೆ ಉಪಚುನಾವಣೆ ಕೂಡ ಆಸಕ್ತಿಕರವಾಗಿದೆ. ಜನವರಿಯಲ್ಲಿ ಮಹದೇವ್ ಪ್ರಸಾದ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್ ನಿಂದ ಮಹದೇವ್ ಪ್ರಸಾದ್ ಅವರ ಪತ್ನಿ ಕಣಕ್ಕೆ ಇಳಿಯಲಿದ್ದಾರೆ. ಅನುಕಂಪದ ಮತಗಳನ್ನು ಅವರು ಪಡೆಯುವ ಸಾಧ್ಯತೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is called as the mother of all by-polls. With hardly an year remaining for the Karnataka assembly elections, both the BJP and Congress would go at each other to bag the Nanjangud and Gundlupet assembly constituencies. On April 9 both these constituencies would go to poll.
Please Wait while comments are loading...