ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಸೋತಿದ್ದು ಯಾಕೆ?'

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

ಸಿದ್ದರಾಮಯ್ಯ 36,000 ಮತಗಳ ಅಂತರದಿಂದ ಸೋತಿದ್ಯಾಕೆ ಎಂದು ಪ್ರಶ್ನಿಸಿದ ಎಚ್ ವಿಶ್ವನಾಥ್ | Oneindia Kannada

ಮೈಸೂರು, ಮೇ 30 : ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಕಾಂಗ್ರೆಸ್ ನಿಂದ ಹೊರಬಂದು ಜೆಡಿಎಸ್ ಸೇರ್ಪಡೆಯಾಗಿ ಗೆಲುವು ಸಾಧಿಸಿರುವ ಶಾಸಕ ಎಚ್.ವಿಶ್ವನಾಥ್ ಇದೀಗ ದೋಸ್ತಿ ಸರ್ಕಾರ ಅಧಿಕಾರವಿದ್ದರೂ ಸಹ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ವಿಶ್ವನಾಥ್, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತಗಳ ಅಂತರದಿಂದ ಸೋಲನ್ನಪ್ಪಿದ್ದು ಯಾಕೆ? ಸೋಲಿಗೆ ಐದು ವರ್ಷದ ಆಡಳಿತದ ಫಲವಾ? ಅಥವಾ ಸಿದ್ದರಾಮಯ್ಯ ನಡವಳಿಕೆಯ ಫಲವಾ ? ಇದನ್ನೇಕೆ ಮಾಧ್ಯಮದವರು ಪ್ರಶ್ನಿಸುತ್ತಿಲ್ಲಾ? ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಸೋಲು ಮಹಿಷಾಸುರ ಮರ್ಧನ: ಎಚ್. ವಿಶ್ವನಾಥ್ ಸಿದ್ದರಾಮಯ್ಯ ಸೋಲು ಮಹಿಷಾಸುರ ಮರ್ಧನ: ಎಚ್. ವಿಶ್ವನಾಥ್

ಕೆ.ಆರ್ ನಗರ ಕ್ಷೇತ್ರದಲ್ಲಿ ಶಾಸಕ ಸಾ.ರಾ ಮಹೇಶ್ ಗೆಲುವಿನ ಅಂತರ ಏಕೆ ಕಡಿಮೆಯಾಯಿತು ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಎಚ್.ವಿಶ್ವನಾಥ್, ಸಾ.ರಾ ಮಹೇಶ್ ಅವರ ಬಗ್ಗೆ ಅಮೇಲೆ ಮಾತನಾಡೋಣ.

Why Former Chief Minister Siddaramaiah lost his vote by 36,000 votes?

ಮೊದಲು ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಸೋತಿದ್ದು ಯಾಕೆ? ಯಾಕೆ ಅಷ್ಟು ಅಂತರದಲ್ಲಿ ಸೋತಿದ್ದೀರಾ ಅಂಥಾ ನಾನು ಕೇಳಿದೆ ಅಂತಾನೇ ನೀವು ಅವರನ್ನ ಕೇಳಿ ಎಂದು ಹೇಳಿದರು.

English summary
H.Vishwanath questioned in mysuru press meet in the Chamundeshwari constituency, why Former Chief Minister Siddaramaiah lost his vote by 36,000 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X