ನಮ್ಮ ರಾಜ್ಯದ ಖರ್ಚಿನ ಲೆಕ್ಕ ಕೇಳಲು ಅಮಿತ್ ಶಾ ಯಾರು?: ಸಿದ್ದರಾಮಯ್ಯ

Posted By:
Subscribe to Oneindia Kannada

ಸರಗೂರು (ಮೈಸೂರು ಜಿಲ್ಲೆ), ಜನವರಿ 11: ನಮ್ಮ ರಾಜ್ಯದ ಖರ್ಚಿನ ಲೆಕ್ಕ ಕೇಳುವುದಕ್ಕೆ ಅಮಿತ್ ಶಾ ಯಾರು? ಸ್ವಲ್ಪ ಕಾಮನ್ ಸೆನ್ಸ್ ಇಟ್ಟುಕೊಂಡು ಮಾತನಾಡಲಿ. ನಮ್ಮ ತೆರಿಗೆ ಹಣವನ್ನೇ ಕೇಂದ್ರ ಸರಕಾರ ನಮಗೆ ಕೊಡುತ್ತದೆ. ಮನಮೋಹನ್ ಸಿಂಗ್ ಕಾಲದಲ್ಲಿ ಗುಜರಾತ್ ಗೆ ಕೊಟ್ಟ ಹಣದ ಲೆಕ್ಕ ನಾವು ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸರಕಾರದಿಂದ ಬಿಡುಗಡೆ ಮಾಡಿದ ಅನುದಾನ ಏನಾಯಿತು? ಅದನ್ನೆಲ್ಲ ಸಿದ್ದರಾಮಯ್ಯ ನುಂಗಿ ಹಾಕಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಸಿದ್ದರಾಮಯ್ಯ ಇಲ್ಲಿ ಗುರುವಾರ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರದ ಅನುದಾನವನ್ನು ಸಿದ್ದರಾಮಯ್ಯ ನುಂಗಿದ್ದಾರೆ: ಅಮಿತ್ ಶಾ

Siddaramaiah

ನಾನು ಲೆಕ್ಕ ಕೊಡಬೇಕಾಗಿರುವುದು ರಾಜ್ಯದ ಜನರಿಗೆ ಹೊರತು ಅಮಿತ್ ಶಾಗಲ್ಲ ಎಂದು ಗುಡುಗಿದ ಸಿದ್ದರಾಮಯ್ಯ, ಪಿಎಫ್ ಐ ಸಂಘಟನೆ ನಿಷೇಷ ಮಾಡಲ್ಲ ಎಂದು ವೇಣುಗೋಪಾಲ್ ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಷೇಶ ಮಾಡುವುದಿಲ್ಲ ಅಂದರೆ ಆ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಂಕ್ರಾಂತಿ ವಿಶೇಷ ಪುಟ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Who is Amit Shah to ask state government expenses? Did we ask about Gujarat state expenses while Manmohan Singh was PM, asks Karnataka CM Siddaramaiah in Saragur, HD Kote taluk, Mysuru district on Thursday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ