ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜ ಕ್ಷೇತ್ರದ ಅಭ್ಯರ್ಥಿಗಳ್ಯಾರು..? ಒಂದು ಪಕ್ಷಿನೋಟ

By Yashaswini
|
Google Oneindia Kannada News

ಮೈಸೂರು, ಏಪ್ರಿಲ್ 4 : ಚುನಾವಣೆಯಲ್ಲಿ ಗೆಲ್ಲುವ ಕುದುರೆ ಏರುವುದು ಸವರ್ವಪಕ್ಷಗಳಿಗೂ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಆಡಾಳಿತಾರೂಢ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಲು ತಂತ್ರ ರೂಪಿಸಿದ್ದರೆ, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಲ್ಲೂ ಗದ್ದುಗೆ ಏರಲು ಪ್ರತಿತಂತ್ರ ಹೆಣೆಯುತ್ತಿದೆ.

ಇದಕ್ಕೆ ಉದಾಹರಣೆ ಮೈಸೂರಿನ ಚಾಮರಾಜ ಕ್ಷೇತ್ರ. ಒಕ್ಕಲಿಗೆ ಪ್ರಾಬಲ್ಯವೇ ಹೆಚ್ಚಿರುವ ಇಲ್ಲಿ ಈ ಬಾರಿಯ ಚುನಾವಣೆಗೆ ಮತದಾರ ಪ್ರಭು ಯಾರಿಗೆ ಒಲಿಯಲಿದ್ದಾನೆ ಎಂಬುದು ಯಕ್ಷ ಪ್ರಶ್ನೆ.

"ಸಿದ್ದು ರಾಜಕೀಯದ ಆರಂಭ, ಅಂತ್ಯ ಎಲ್ಲಾ ಚಾಮುಂಡೇಶ್ವರಿಯಲ್ಲೇ!"

ಮೈಸೂರು ನಗರದ ಮಟ್ಟಿಗೆ ಪ್ರತಿಷ್ಠೆಯ ಕ್ಷೇತ್ರವೂ ಆಗಿರುವ ಚಾಮರಾಜ ವಿಧಾನಸಭಾ ಕ್ಷೇತ ಪ್ರತಿ ಚುನಾವಣೆಯಲ್ಲೂ ಒಂದಲ್ಲಾ ಒಂದು ಕಾರಣಕ್ಕೆ ಗಮನ ಸೆಳೆಯುತ್ತ ಬಂದಿದೆ. ಮಾಜಿ ಸಚಿವ ದಿ.ಕೆ.ಪುಟ್ಟಸ್ವಾಮಿ, ಬಿ.ಎನ್.ಕೆಂಗೇಗೌಡ. ಎಚ್.ಕೆಂಪೇಗೌಡ, ಪಿ.ಎಂ.ಚಿಕ್ಕ ಬೋರಯ್ಯ, ಮುಂತಾದವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ 1,14,639 ಪುರುಷರು, 1,13,844 ಮಹಿಳೆಯರು ಸೇರಿದಂತೆ 2,28,483 ಮತದಾರರಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಇದು ಒಕ್ಕಲಿಗರ ಕ್ಷೇತ್ರ ಎಂದು ಜನಜನಿತವಾಗಿದೆ. ಇಲ್ಲಿ ಎಲ್ಲ ಪಕ್ಷಗಳೂ ಒಕ್ಕಲಿಗರಿಗೇ ಟಿಕೆಟ್ ಕೊಡುತ್ತಾ ಬಂದಿವೆ.

ಕ್ಷೇತ್ರದಲ್ಲಿ ಒಕ್ಕಲಿಗರು 65,000 ಮಂದಿ ಇದ್ದು ಪ್ರಾಬಲ್ಯ ಮೆರೆದಿದ್ದಾರೆ. ಬ್ರಾಹ್ಮಣರು 22,000, ಪರಿಶಿಷ್ಟ ಜಾತಿಯವರು 22-25 ಸಾವಿರ, ಮುಸ್ಲಿಮರು 20,000, ಜೈನರು, ಮಾರ್ವಾಡಿಗಳು 20,000, ಕುರುಬರು 12,000, ಲಿಂಗಾ ಯತರು 8,000, ನಾಯಕರು 5,000 ಹಾಗೂ ಇತರ ಸಮುದಾ ಯಗಳು 60,000 ಇದ್ದಾರೆ. ಇಲ್ಲಿ ಒಕ್ಕಲಿಗ ಮತಗಳು ಹಂಚಿಕೆಯಾಗಿ ಉಳಿದ ಸಮುದಾಯದ ಮತಗಳು ನಿರ್ಣಾಯಕವಾಗಲಿವೆ. ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಮೈಸೂರು ಮಹಾನಗರ ಪಾಲಿಕೆಯ 21 ವಾರ್ಡ್ ಗಳು ಸೇರಿದ್ದು ಇಲ್ಲಿ ಜಾ.ದಳ ಪ್ರಾಬಲ್ಯ ಮೆರೆದಿದೆ. 1994ರ ನಂತರ ಚಾಮರಾಜ ವಿಧಾನಸಭಾ ಕ್ಷೇತ ಬಿಜೆಪಿಯ ಭದ್ರಕೋಟೆಯಾಗಿತ್ತು. ಎಚ್.ಎಸ್.ಶಂಕರಲಿಂಗೇಗೌಡ ಸತತವಾಗಿ

ಕಾಂಗ್ರೆಸ್ ಟಿಕೇಟ್ ಯಾರಿಗೆ?

ಕಾಂಗ್ರೆಸ್ ಟಿಕೇಟ್ ಯಾರಿಗೆ?

ಸದ್ಯ ಕೈ ವರ್ಷದಲ್ಲಿರುವ ಚಾಮರಾಜ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಸಂಪನ್ನಗೊಂಡ ಹಿನ್ನೆಲೆಯಲ್ಲಿ ಹಾಲಿ ಶಾಸಕ ವಾಸು ಮತ್ತೊಮ್ಮೆ ಈ ಚುನಾವಣೆಯಲ್ಲಿ ಕಣಕ್ಕೆ ಇದು ಗೆಲುವು ಸಾಧಿಸಲು ತವಕಿಸುತ್ತಿದ್ದಾರೆ. ಪಕ್ಷದಿಂದ ಟಿಕೇಟ್ ಸಿಗುವುದು ಬಹುತೇಕ ಖಚಿತ ಎಂಬ ಭಾವನೆಯೊಂದಿಗೆ ಕ್ಷೇತ್ರ ಪ್ರದಕ್ಷಿಣೆ ಮಾಡಿ, ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಇವರೊಂದಿಗೆ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಟ್ಟದ ಶಿಷ್ಯ ಧ್ರುವಕುಮಾರ್ ಸಹ ಕಾಂಗ್ರೆಸ್ ನಿಂದ ಟಿಕೇಟ್ ಆಕಾಂಕ್ಷಿ. ಪಕ್ಷದ ಪ್ರಮುಖರು ನಡೆಸಿದ ಸಭೆಯಲ್ಲಿ ಧ್ರುವಕುಮಾರ್ ಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಮನವಿ ಸಲ್ಲಿಸಿ ಆಗ್ರಹಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ನೆನೆಗುದಿಗೆ ಬಿದ್ದಿದ್ದ ಕೆಲ ಬಡಾವಣೆಗಳ ನಿವೇಶನ ಹಂಚಿಕೆ, ಗುಂಪು ಮನೆಗಳ ನಿರ್ಮಾಣಕ್ಕೆ ಚಾಲನೆ ಇನ್ನಿತರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಓಲೈಸಬಹುದು ಎಂಬ ಲೆಕ್ಕಾಚಾರ ಧ್ರುವಕುಮಾರ್ ಬೆಂಬಲಿಗರಲ್ಲಿತ್ತು. ಆದರೆ ಅಂತಿಮವಾಗಿ ಟಿಕೆಟ್ ಯಾರ ಕೈ ತಲುಪುವುದೋ ಕಾದು ನೋಡಬೇಕಾಗಿದೆ.

ಜೆಡಿಎಸ್ ಅಭ್ಯರ್ಥಿ ಯಾರು?

ಜೆಡಿಎಸ್ ಅಭ್ಯರ್ಥಿ ಯಾರು?

ಇತ್ತ ಜೆಡಿಎಸ್ ನಿಂದ ಸ್ಪರ್ಧಿಸುವ ಮಹದಾಸೆ ಹೊಂದಿದ್ದ ಪಕ್ಷದ ಮಾಜಿ ನಗರಾಧ್ಯಕ್ಷ ಹರೀಶ್ ಗೌಡರಿಗೆ ಬದಲಾಗಿ ಮೈಸೂರು ವಿವಿಯ ವಿಶ್ರಾಂತ ಕುಲಪತಿ ಕೆ ಎಸ್ ರಂಗಪ್ಪ ಅವರನ್ನು ಈಗಾಗಲೇ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.ವಿದ್ಯಾರ್ಥಿ ದಿಸೆಯಿಂದಲೇ ಚಾಮರಾಜ ಕ್ಷೇತ್ರದೊಂದಿಗೆ ನಂಟು ಬೆಸೆದುಕೊಂಡಿರುವ ರಂಗಪ್ಪ ಪ್ರಬುದ್ಧರ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ನಿರಂತರ ಪ್ರಚಾರದಲ್ಲಿದ್ದಾರೆ. ಪಕ್ಷದ ವರಿಷ್ಠರಾದ ಎಚ್. ಡಿ ದೇವೇಗೌಡರ ಸಂಬಂಧಿಯೂ ಕೂಡ ಹೌದು. ಜೊತೆಗೆ ನಗರ ಪಾಲಿಕೆಯ ಬಹುತೇಕ ಜೆಡಿಎಸ್ ಸದಸ್ಯರು ಇದೇ ಕ್ಷೇತ್ರದವರು. ಇದರಿಂದಾಗಿ ಚಾಮರಾಜ ಜೆಡಿಎಸ್ ಭದ್ರಕೋಟೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ವಿಶ್ವಾಸ ಪಕ್ಷದ ಪಾಳಯದಲ್ಲಿದೆ.

ನರಸಿಂಹರಾಜ ಕ್ಷೇತ್ರ : ಕಾಂಗ್ರೆಸ್ಸಿಗೆ ಮತ್ತೆ ಗೆಲುವಿನ ನಿರೀಕ್ಷೆ ನರಸಿಂಹರಾಜ ಕ್ಷೇತ್ರ : ಕಾಂಗ್ರೆಸ್ಸಿಗೆ ಮತ್ತೆ ಗೆಲುವಿನ ನಿರೀಕ್ಷೆ

ಬಿಜೆಪಿ ಪ್ರತಿನಿಧಿ ಯಾರು?

ಬಿಜೆಪಿ ಪ್ರತಿನಿಧಿ ಯಾರು?

ಎರಡು ದಶಕಗಳ ಕಾಲ ಬಿಜೆಪಿ ಭದ್ರಕೋಟೆಯಾಗಿದ್ದ ಚಾಮರಾಜ ಕ್ಷೇತ್ರವನ್ನು ಈಗ ಕಾಂಗ್ರೆಸ್ ವಶದಿಂದ ಮತ್ತೆ ಪಡೆಯಬೇಕೆಂದು ಬಿಜೆಪಿ ಕಸರತ್ತು ನಡೆಸುತ್ತಿದೆ. ಈ ನಡುವೆ ವೈದ್ಯಕೀಯ ಕ್ಷೇತ್ರದ ಜೊತೆಗೆ ರಾಜಕೀಯ ಪ್ರವೇಶಿಸಿರುವ ಬಿಜೆಪಿ ನಗರಾಧ್ಯಕ್ಷ ಡಾ. ಮಂಜುನಾಥ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನಗರಾಧ್ಯಕ್ಷರಾಗಿ ಪಕ್ಷ ಸಂಘಟಿಸುವುದರೊಂದಿಗೆ ಕೆಲ ವರುಷಗಳಿಂದ ಅನೇಕ ಸೇವಾ ಕಾರ್ಯಗಳ ಮೂಲಕ ಜನರ ಒಡನಾಟದಲ್ಲಿರುವ ಡಾ. ಮಂಜುನಾಥ್ ಅವರಿಗೆ ಟಿಕೇಟ್ ಖಚಿತವಾಗಿದೆ. ಆದರೆ ಕಳೆದ ಚುನಾವಣೆಯಲ್ಲಿ ಪರಾಭವಗೊಂಡ ಮೂಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಮಾಜಿ ಅಧ್ಯಕ್ಷ, ಪಕ್ಷದ ಮೈಸೂರು ವಿಭಾಗದ ಮುಖ್ಯಸ್ಥ ನಾಗೇಂದ್ರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಕಾತುರರಾಗಿದ್ದಾರೆ.

ಹಿಂದಿನ ಚುನಾವಣಾ ಲೆಕ್ಕಾಚಾರ

ಹಿಂದಿನ ಚುನಾವಣಾ ಲೆಕ್ಕಾಚಾರ

1978 - ಪುಟ್ಟಸ್ವಾಮಿ - ಜನತಾ ಪಕ್ಷ 24,524 ಮತಗಳು
1983 -ಎಚ್.ಕೆಂಪೇಗೌಡ - ಜನತಾ ಪಕ್ಷ - 23,967 ಮತಗಳು
1985 -ಎಚ್. ಕೆ.ಕೆಂಪೀರೇಗೌಡ - ಜನತಾ ಪಕ್ಷ -32,077 ಮತಗಳು
1989 - ಹರ್ಷ ಕುಮಾರ ಗೌಡ - ಕಾಂಗ್ರೆಸ್ - 31,514 ಮತಗಳು
1994 - ಎಚ್.ಎಸ್.ಶಂಕರಲಿಂಗೇಗೌಡ - ಬಿಜೆಪಿ - 32,620 ಮತಗಳು
1999 - ಎಚ್.ಎಸ್.ಶಂಕರಲಿಂಗೇಗೌಡ - ಬಿಜೆಪಿ- 48,733 ಮತಗಳು
2004 - ಎಚ್.ಎಸ್.ಶಂಕರಲಿಂಗೇಗೌಡ - ಬಿಜೆಪಿ- 37,906 ಮತಗಳು
2008 - ಎಚ್.ಎಸ್.ಶಂಕರಲಿಂಗೇಗೌಡ - ಬಿಜೆಪಿ - 44,243 ಮತಗಳು
2013 - ವಾಸು- ಕಾಂಗ್ರೆಸ್ - 41,930ಮತಗಳು

ನಂಜನಗೂಡು : ಶ್ರೀನಿವಾಸ, ಕೇಶವ ಯಾರಿಗೆ ಜಯ?ನಂಜನಗೂಡು : ಶ್ರೀನಿವಾಸ, ಕೇಶವ ಯಾರಿಗೆ ಜಯ?

English summary
Karnataka assembly elections 2018: Who are the probable candidates from Chamaraja constituency in Mysuru this year? Here are the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X